ಒತ್ತಡ, ದುಃಖ ಹೀಗೆ ಎಲ್ಲಾ ಮನಸ್ಸಿನ ವೇದನೆ ಕಡಿಮೆ ಮಾಡಲು ನೀವು ನಗುವುದು ತುಂಬಾ ಮುಖ್ಯ. ನಗು ನಿಮ್ಮನ್ನ ಹೆಲ್ದೀ ಆಗಿರಿಸುತ್ತದೆ. ನಗು ನಿಮ್ಮ ಜೀವನದಲ್ಲಿ ಫ್ರಿಯಾಗಿ ಸಿಕ್ಕ ಉಡುಗೊರೆ. ನಗು ಅತ್ಯಂತ ಪರಿಣಾಮಕಾರಿ ಮತ್ತು ಅಗ್ಗದ ಔಷಧ. ಯಾವುದೇ ವೈದ್ಯರ ಬಳಿಗೆ ಹೋಗದೆ ಒತ್ತಡದಿಂದ ಮುಕ್ತಿ ನೀಡುತ್ತದೆ ನಗು. ಹಾಗಾಗಿ ನಗು ನಗುತ್ತಾ ಇರುವುದು ತುಂಬಾ ಮುಖ್ಯ. ನಗು ನಿಮ್ಮ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.
ರಕ್ತದ ಹರಿವನ್ನು ಹೆಚ್ಚಿಸುತ್ತದೆ ನಗು. ಒತ್ತಡದಲ್ಲಿದ್ದಾಗ, ಕೆಲವೊಮ್ಮೆ ರಕ್ತವು ನಮ್ಮ ಮೆದುಳಿಗೆ ಸರಿಯಾಗಿ ತಲುಪುವುದಿಲ್ಲ. ಇದು ರಕ್ತದೊತ್ತಡ ಸಮಸ್ಯೆಗೆ ಕಾರಣವಾಗುತ್ತದೆ. ನಗು ರಕ್ತದ ಹರಿವು ಮತ್ತು ಆಮ್ಲಜನಕ ಹೆಚ್ಚಿಸುತ್ತದೆ. ಇದು ಮಾನಸಿಕ ಸ್ಪಷ್ಟತೆ ಸುಧಾರಿಸುತ್ತದೆ. ಒತ್ತಡ ಮತ್ತು ಆತಂಕದ ಭಾವನೆ ಕಡಿಮೆ ಮಾಡುತ್ತದೆ. ನಗು ರಕ್ತದೊತ್ತಡ, ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯ ಕಡಿಮೆ ಮಾಡುತ್ತದೆ.
ನಗು ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ. ನಗುವು ಪ್ರತಿಕಾಯಗಳ ಉತ್ಪಾದನೆ ಉತ್ತೇಜಿಸುತ್ತದೆ. ರೋಗನಿರೋಧಕ ಕೋಶಗಳನ್ನು ಸಕ್ರಿಯಗೊಳಿಸುತ್ತದೆ. ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡಿ, ಒತ್ತಡವನ್ನೂ ಕಡಿಮೆ ಮಾಡುತ್ತದೆ. ನಗು ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುತ್ತದೆ ಮತ್ತು ಉಸಿರಾಟ ಸುಧಾರಿಸುತ್ತದೆ. ಅಸ್ತಮಾ ಮತ್ತು ಇತರ ಉಸಿರಾಟದ ಪರಿಸ್ಥಿತಿಗಳ ಲಕ್ಷಣ ಕಡಿಮೆ ಮಾಡುತ್ತದೆ.
ದೇಹಕ್ಕೆ 4 ನೈಸರ್ಗಿಕ ಜೀವನಕ್ರಮಗಳು. ನಗುವು ಮನಸ್ಥಿತಿಯನ್ನು ಸುಧಾರಿಸಲು ಮತ್ತು ಸಂತೋಷದ ಭಾವನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ನಗು ಮುಖ, ಹೊಟ್ಟೆ ಮತ್ತು ಡಯಾಫ್ರಾಮ್ನ ಸ್ನಾಯುಗಳಿಗೆ ನೈಸರ್ಗಿಕ ವ್ಯಾಯಾಮ ಒದಗಿಸುತ್ತದೆ. ಇದು ಒತ್ತಡ ನಿವಾರಿಸಲು ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ. ಒಂಟಿತನದ ಭಾವನೆ ಕಡಿಮೆ ಮಾಡುತ್ತದೆ. ನಗು ಸಾಮಾಜಿಕ ಸಂಪರ್ಕ ಮತ್ತು ಬಂಧವನ್ನು ಉತ್ತೇಜಿಸುತ್ತದೆ.