ಒಳ್ಳೆಯ ಆಹಾರವೇ ಉತ್ತಮ ಆರೋಗ್ಯದ ಗುಟ್ಟು. ಇದು ಆರೋಗ್ಯದ ಮೂಲ ಸೂತ್ರ! ಆದರೆ ನಾವು ಪ್ರತಿದಿನ ಸೇವಿಸುವ ಅನೇಕ ಆಹಾರ ಪದಾರ್ಥಗಳು ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಯನ್ನು ತಂದೊಡ್ಡುತ್ತದೆ ಎಂಬ ವಿಚಾರ ನಿಮಗೆ ತಿಳಿದಿದ್ಯಾ? 70 ರಷ್ಟು ಕ್ಯಾನ್ಸರ್ ಪ್ರಕರಣಗಳನ್ನು ಆಹಾರದ ಮೂಲಕವೇ ಕಡಿಮೆ ಮಾಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಉಳಿದ 30 ಪ್ರತಿಶತವು ಆನುವಂಶಿಕ ಮತ್ತು ಪರಿಸರೀಯ ಎಂದು ಭಾವಿಸಲಾಗಿದೆ. ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳು ನಮಗೆ ಅರಿವಿಲ್ಲದೇ ಅಪಾಯಕ್ಕೆ ಸಿಲುಕಿಸುತ್ತಿವೆ. ಹೀಗಾಗಿ ತಕ್ಷಣ ಅವುಗಳನ್ನು ತಿನ್ನುವುದನ್ನು ಕಡಿಮೆ ಮಾಡಿ. ಸಾಧ್ಯವಾದರೆ ಬಿಟ್ಟು ಬಿಡಿ.