ಅಸ್ತಮಾ ಒಂದು ದೀರ್ಘಕಾಲದ ಉಸಿರಾಟದ ಕಾಯಿಲೆ ಆಗಿದೆ. ಇಂದಿನ ದಿನಗಳಲ್ಲಿ ಮಾನಿನ್ಯದ ಪರಿಣಾಮ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಸ್ತಮಾ ಇಂದು ಚಿಕ್ಕ ಮಕ್ಕಳು, ಹದಿಹರೆಯದವರು, ವಯಸ್ಸಾದವರು ಹೀಗೆ ಎಲ್ಲಾ ವರ್ಗದ ಜನರನ್ನು ಕಾಡುತ್ತಿದೆ. ಆಸ್ತಮಾ ಕಾಯಿಲೆಯು ಮಹಿಳೆಯರು ಮತ್ತು ಪುರುಷರ ಮೇಲೆ ಭಿನ್ನವಾಗಿ ಪ್ರಭಾವ ಬೀರುತ್ತದೆ.
ಉದ್ಯೋಗಸ್ಥ ಮಹಿಳೆಯರು ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದರೆ ಈ ವಿಷಯಗಳನ್ನು ನೆನಪಿಡಬೇಕು. ಮೊದಲು ವಾಯು ಮಾಲಿನ್ಯದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ನಗರ ಪ್ರದೇಶಗಳಲ್ಲಿ ಅದರಲ್ಲೂ ಮೆಟ್ರೋಪಾಲಿಟನ್ ಸಿಟಿಯಲ್ಲಿ ಮಾಲಿನ್ಯ ತುಂಬಿ ತುಳುಕಾಡುತ್ತಿದೆ. ವಾಹನಗಳು ಮತ್ತು ಕಾರ್ಖಾನೆಗಳಿಂದ ಹೊರಬರುವ ಹೊಗೆಯು ಉಬ್ಬಸ ಮತ್ತು ಉಸಿರಾಟ ತೊಂದರೆ, ಅಸ್ತಮಾಗೆ ಕಾರಣವಾಗಿದೆ. ಮೂಗನ್ನು ಕವರ್ ಮಾಡಿಕೊಳ್ಳುವ ಮೂಲಕ ಹೊಗೆ, ಧೂಳಿನಿಂದ ರಕ್ಷಣೆ ಪಡೆಯಿರಿ.