ಫೋನ್ ಚಾರ್ಜರ್: ಕೆಲಸದಲ್ಲಿ ನಿರತರಾಗಿರುವ ಕಾರಣ ಅನೇಕ ಬಾರಿ ಮಹಿಳೆಯರು ತಮ್ಮ ಫೋನ್ ಚಾರ್ಜ್ ಮಾಡಲು ಮರೆಯುತ್ತಾರೆ. ಅಲ್ಲದೆ, ನಿಮ್ಮ ಸುರಕ್ಷತೆಗಾಗಿ ಫೋನ್ ಅನ್ನು ಚಾರ್ಜ್ ಮಾಡುವುದು ಬಹಳ ಮುಖ್ಯ. ಆದ್ದರಿಂದ ನಿಮ್ಮ ಕೈ ಚೀಲದಲ್ಲಿ ಚಾರ್ಜರ್ ಅನ್ನು ಕೊಂಡೊಯ್ಯಲು ಮರೆಯಬೇಡಿ.
2/ 8
ಪೆನ್-ನೋಟ್ಪ್ಯಾಡ್: ಕೆಲಸ ಮಾಡುವ ಮಹಿಳೆಯರು ತನ್ನ ಬ್ಯಾಗ್ನಲ್ಲಿ ಪೆನ್ ಮತ್ತು ನೋಟ್ಪ್ಯಾಡ್ ಇಟ್ಟುಕೊಂಡಿರಬೇಕು. ಹಾಗಾಗಿ ಕಛೇರಿಯ ಕೆಲಸದ ಸಮಯದಲ್ಲಿ ಇತರರಿಂದ ಪೆನ್ನು ಮತ್ತು ಕಾಗದವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಅವು ಇತರ ಸ್ಥಳಗಳಲ್ಲಿಯೂ ಸಹ ಉಪಯುಕ್ತವಾಗಿವೆ.
3/ 8
ಹಣ: ಇಂದಿನ ಡಿಜಿಟಲ್ ಜೀವನಶೈಲಿಯಲ್ಲಿ ಹೆಚ್ಚಿನ ಜನರು ಆನ್ಲೈನ್ನಲ್ಲಿ ಪಾವತಿಗಳನ್ನು ಮಾಡಲು ಬಯಸುತ್ತಾರೆ. ಆದರೆ ಕೆಲಸ ಮಾಡುವ ಮಹಿಳೆಯರು ತಮ್ಮ ಚೀಲಗಳಲ್ಲಿ ಸ್ವಲ್ಪ ಹಣವನ್ನು ಇಟ್ಟುಕೊಳ್ಳಬೇಕು. ಇದು ಪ್ರಯಾಣ ಮತ್ತು ಇತರ ವಿಷಯಗಳಿಗೆ ನಿಜಕ್ಕೂ ಸಹಾಯವಾಗುತ್ತದೆ.
4/ 8
ಕರವಸ್ತ್ರ : ಕಚೇರಿಗೆ ಹೋಗುವಾಗ ಕಾಗದದ ಚೀಲದಲ್ಲಿ ಹ್ಯಾಂಕಿ ಅಥವಾ ಟಿಶ್ಯೂ ಇಟ್ಟುಕೊಳ್ಳಿ. ಮೇಕ್ಅಪ್ ತೆಗೆಯುವುದರಿಂದ ಹಿಡಿದು ಕೈ ಒರೆಸುವವರೆಗೆ, ಅಂತಹ ಸಂದರ್ಭಗಳಲ್ಲಿ ನೀವು ಟಿಶ್ಯೂ ಪೇಪರ್, ಕರವಸ್ತ್ರಗಳನ್ನು ಅನ್ನು ಬಳಸಬಹುದು. ಯಾವುದೇ ಒಂದು ತುರ್ತು ಸಂದರ್ಭದಲ್ಲಿಯೂ ಇವುಗಳು ಸಹಾಯಕ್ಕೆ ಬರುತ್ತದೆ.
5/ 8
ಇಯರ್ ಫೋನ್ : ಹಾಗಾಗಿ ನಿಮ್ಮ ಬ್ಯಾಗ್ ನಲ್ಲಿ ಇಯರ್ ಫೋನ್ ಅಥವಾ ಹೆಡ್ ಫೋನ್ ಇಡಲು ಮರೆಯಬೇಡಿ. ಯಾಕೆಂದರೆ ಇದು ನಿಮ್ಮ ಸ್ರ್ಟೆಸ್ನ್ನು ನೀಗಿಸುತ್ತದೆ. ಒಬ್ಬಂಟಿಯೆಂದು ನಿಮಗೆ ಅನಿಸಿದ್ದಲ್ಲಿ ಸಾಂಗ್ ಕೇಳಿ. ನಿಮ್ಮನ್ನ ನೀವು ಚಿಯರ್ಅಪ್ ಮಾಡಿಕೊಳ್ಳಿ.
6/ 8
ಸ್ಯಾನಿಟರಿ ಪ್ಯಾಡ್ಗಳು: ಕೆಲವೊಮ್ಮೆ ಮಹಿಳೆಯರು ಮುಟ್ಟಿನ ದಿನಾಂಕವನ್ನು ಮರೆಯುತ್ತಾರೆ. ಅಂತಹ ಸಂದರ್ಭಗಳಲ್ಲಿ ಮುಟ್ಟು ಇದ್ದಕ್ಕಿದ್ದಂತೆ ಸಂಭವಿಸಿದಾಗ ಬ್ಯಾಗ್ನಲ್ಲಿ ಸ್ಯಾನಿಟರಿ ಪ್ಯಾಡ್ಗಳಿರಬೇಕು. ಇದರ ಜೊತೆಗೆ ಇನ್ನೊಬ್ಬರಿಗೂ ಸಹಾಯವಾಗಬಹುದು. ಮುಜುಗರಕ್ಕೆ ಈಡಾಗುವುದರ ಬದಲು ಈ ಪ್ಯಾಡ್ಗಳನ್ನು ಇಟ್ಟುಕೊಳ್ಳಿ.
7/ 8
ಸುರಕ್ಷತಾ ಪಿನ್: ನೀವು ಹೊರಗೆ ಹೋಗುವಾಗ ಸುರಕ್ಷತಾ ಪಿನ್ ಸಹ ಇಟ್ಟುಕೊಂಡಿರಬೇಕು. ಸುರಕ್ಷತಾ ಪಿನ್ ಹರಿದ ಉಡುಗೆ, ಮುರಿದ ಬ್ಯಾಗ್, ಚೈನ್ ಅಥವಾ ಇನ್ನಾವುದೇ ಕೆಲಸಕ್ಕಾಗಿ ಅಗತ್ಯ ಸಂದರ್ಭದಲ್ಲಿ ಬರಬಹುದು. ಹಾಗಾಗಿ ಮಹಿಳೆಯರು ಬ್ಯಾಗ್ ನಲ್ಲಿ ಸೇಫ್ಟಿ ಪಿನ್ ಇಟ್ಟುಕೊಳ್ಳಬೇಕು.
8/ 8
ಹೀಗಾಗಿ ಗೊತ್ತಾಯ್ತು ಅಲ್ವಾ ಯಾವುದೆಲ್ಲಾ ವಸ್ತುಗಳನ್ನು ನೀವು ಬ್ಯಾಗ್ನಲ್ಲಿ ಇಟ್ಟುಕೊಂಡರೆ ಉತ್ತಮ ಎಂದು. ವಾರಕ್ಕೆ ಒಂದು ಬಾರಿಯಾದ್ರೂ ನಿಮ್ಮ ಬ್ಯಾಗ್ನ್ನು ಸ್ವಚ್ಛಗೊಳಿಸಬೇಕು ಮತ್ತು ಪರಿಶೀಲಿಸಬೇಕು. ಅದ್ರಲ್ಲೂ ಮಹಿಳೆಯರು ಆದಷ್ಟು ನಿಮ್ಮ ಬ್ಯಾಗ್ಗಳನ್ನು ಸ್ವಚ್ಛಗೊಳಿಸಿ.