Women's Health: ಮಹಿಳೆಯರ ಆರೋಗ್ಯ ಸಮಸ್ಯೆ ನಿವಾರಣೆಗೆ ಅಶ್ವಗಂಧ ವರದಾನ!

ಆಯುರ್ವೇದ ಔಷಧಳಲ್ಲಿ ಗಿಡಮೂಲಿಕೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಅದರಲ್ಲಿ ಅಶ್ವಗಂಧಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಶ್ವಗಂಧವು ತನ್ನದೇ ಆದ ಆರೋಗ್ಯ ಪ್ರಯೋಜನಗಳಿಂದ ಪ್ರಸಿದ್ಧವಾಗಿದೆ. ಸೌಂದರ್ಯದ ಚಿಕಿತ್ಸೆಯಿಂದ ಹಿಡಿದು ಕೆಲವು ಆರೋಗ್ಯ ತೊಂದರೆ ನಿವಾರಣೆಗೆ ಅಶ್ವಗಂಧ ಸಹಕಾರಿ ಆಗಿದೆ.

First published:

  • 18

    Women's Health: ಮಹಿಳೆಯರ ಆರೋಗ್ಯ ಸಮಸ್ಯೆ ನಿವಾರಣೆಗೆ ಅಶ್ವಗಂಧ ವರದಾನ!

    ಮಹಿಳೆಯರ ಆರೋಗ್ಯಕ್ಕೆ ಅಶ್ವಗಂಧವು ಪರಿಣಾಮಕಾರಿ ಪ್ರಯೋಜನ ನೀಡುತ್ತದೆ ಎಂದು ಹೇಳಲಾಗಿದೆ. ಹಲವು ವೈದ್ಯಕೀಯ ಚಿಕಿತ್ಸೆಯಲ್ಲಿ ಅಶ್ವಗಂಧ ಬಳಸಲಾಗುತ್ತದೆ. ಮಹಿಳೆಯರು ತಮ್ಮ ಕೂದಲ ಆರೈಕೆಗೆ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಅಶ್ವಗಂಧ ಬಳಕೆ ಮಾಡುತ್ತಾರೆ.

    MORE
    GALLERIES

  • 28

    Women's Health: ಮಹಿಳೆಯರ ಆರೋಗ್ಯ ಸಮಸ್ಯೆ ನಿವಾರಣೆಗೆ ಅಶ್ವಗಂಧ ವರದಾನ!

    ಅಶ್ವಗಂಧವು ವಾಸನೆ ಮತ್ತು ಶಕ್ತಿ ಹೆಚ್ಚಿಸುತ್ತದೆ. ಗಿಡಮೂಲಿಕೆಗಳ ಸಾಮರ್ಥ್ಯವನ್ನು ಅಶ್ವಗಂಧ ಸೂಚಿಸುತ್ತದೆ. ಹಲವು ಹೆಸರುಗಳಿಂದ ಅಶ್ವಗಂಧವನ್ನು ಕರೆಯುತ್ತಾರೆ. ಅಶ್ವಗಂಧದಲ್ಲಿ ಸಣ್ಣ ಹಳದಿ ಹೂವುಗಳು ಇವೆ. ಅಶ್ವಗಂಧ ಸಸ್ಯದ ಬೇರು ಮತ್ತು ಎಲೆಗಳ ಸಾರ ಮತ್ತು ಪುಡಿ ಬಳಕೆ ಮಾಡಲಾಗುತ್ತದೆ.

    MORE
    GALLERIES

  • 38

    Women's Health: ಮಹಿಳೆಯರ ಆರೋಗ್ಯ ಸಮಸ್ಯೆ ನಿವಾರಣೆಗೆ ಅಶ್ವಗಂಧ ವರದಾನ!

    ಅಶ್ವಗಂಧವು ಕೂದಲು ಉದುರುವಿಕೆ ಮತ್ತು ಕೂದಲು ತೆಳುವಾಗುವಿಕೆ ಸಮಸ್ಯೆ ನಿವಾರಿಸುತ್ತದೆ. ಆತಂಕ ಮತ್ತು ಫಲವತ್ತತೆ ಸಮಸ್ಯೆ ನಿವಾರಣೆಗೆ ಸಹಕಾರಿ ಆಗಿದೆ. ತೀವ್ರತರದ ಆಯಾಸ, ನಿದ್ರಾಹೀನತೆ ಸೇರಿದಂತೆ ಹಲವು ದೀರ್ಘಕಾಲದ ಒತ್ತಡದ ಲಕ್ಷಣಗಳನ್ನು ನಿವಾರಿಸುತ್ತದೆ.

    MORE
    GALLERIES

  • 48

    Women's Health: ಮಹಿಳೆಯರ ಆರೋಗ್ಯ ಸಮಸ್ಯೆ ನಿವಾರಣೆಗೆ ಅಶ್ವಗಂಧ ವರದಾನ!

    ಅಶ್ವಗಂಧದ ನಿಯಮಿತ ಸೇವನೆಯು ನಿಮ್ಮ ಒತ್ತಡ ಕಡಿಮೆ ಮಾಡುತ್ತದೆ. ಜೊತೆಗೆ ಕೂದಲು ಉದುರುವಿಕೆ ಹಾಗೂ ಕೂದಲು ಅಕಾಲಿಕ ಬಿಳಿಯಾಗುವುದನ್ನು ತಡೆಯುತ್ತದೆ. ಅಶ್ವಗಂಧ ಕೂದಲಿನ ಎಣ್ಣೆ ಮತ್ತು ಶಾಂಪೂ ಒಣ ನೆತ್ತಿ ಮತ್ತು ತಲೆಹೊಟ್ಟು ಸಮಸ್ಯೆ ಕಡಿಮ ಮಾಡುತ್ತದೆ. ಮೆಲನಿನ್ ನಷ್ಟ ತಡೆಯುತ್ತದೆ.

    MORE
    GALLERIES

  • 58

    Women's Health: ಮಹಿಳೆಯರ ಆರೋಗ್ಯ ಸಮಸ್ಯೆ ನಿವಾರಣೆಗೆ ಅಶ್ವಗಂಧ ವರದಾನ!

    ಅಶ್ವಗಂಧವು ಮಹಿಳೆಯರ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಒತ್ತಡ ಮತ್ತು ಆತಂಕ ಕಡಿಮೆ ಮಾಡುತ್ತದೆ. ಅಶ್ವಗಂಧವು ಒತ್ತಡ ಎದುರಿಸಲು ದೇಹವನ್ನು ಸಿದ್ಧಪಡಿಸುತ್ತದೆ. ಇದು ಕಾರ್ಟಿಸೋಲ್ ಮತ್ತು ಶಾಖ ಆಘಾತ ತಡೆಯುತ್ತದೆ. ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟ ಕಡಿಮೆ ಮಾಡುತ್ತದೆ.

    MORE
    GALLERIES

  • 68

    Women's Health: ಮಹಿಳೆಯರ ಆರೋಗ್ಯ ಸಮಸ್ಯೆ ನಿವಾರಣೆಗೆ ಅಶ್ವಗಂಧ ವರದಾನ!

    ಮಹಿಳೆಯರಲ್ಲಿ ಕಾಮಾಸಕ್ತಿ ಹೆಚ್ಚಿಸುತ್ತದೆ. ಅಶ್ವಗಂಧವು ಮಹಿಳೆಯರಲ್ಲಿ ಕಾಮೋತ್ತೇಜಕವಾಗಿ ಕೆಲಸ ಮಾಡುತ್ತದೆ. ಅಶ್ವಗಂಧವು ಪ್ರಚೋದನೆ ಹೆಚ್ಚಿಸುತ್ತದೆ ಮತ್ತು ಪರಾಕಾಷ್ಠೆ ಸಾಧಿಸಲು ಸಹಾಯ ಮಾಡುತ್ತದೆ. ಆಂಡ್ರೊಜೆನ್ ಕೊರತೆಯ ಸಿಂಡ್ರೋಮ್ ಹೊಂದಿರುವ ಮಹಿಳೆಯರಲ್ಲಿ ಅಶ್ವಗಂಧ ಟೆಸ್ಟೋಸ್ಟೆರಾನ್ ಉತ್ಪಾದನೆ ಹೆಚ್ಚಿಸುತ್ತದೆ.

    MORE
    GALLERIES

  • 78

    Women's Health: ಮಹಿಳೆಯರ ಆರೋಗ್ಯ ಸಮಸ್ಯೆ ನಿವಾರಣೆಗೆ ಅಶ್ವಗಂಧ ವರದಾನ!

    ತೂಕ ನಷ್ಟಕ್ಕೆ ಮಹಿಳೆಯರಿಗೆ ಸಹಾಯ ಮಾಡುತ್ತದೆ. ಅಶ್ವಗಂಧವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ನಮ್ಮ ದೇಹದ ಸರಿಯಾದ ಕಾರ್ಯ ನಿರ್ವಹಣೆ ಮತ್ತು ಚಯಾಪಚಯ ಕ್ರಿಯೆ ಹೆಚ್ಚಿಸಲು ಸಹಕಾರಿ. ಇದು ಕೊಬ್ಬನ್ನು ವೇಗವಾಗಿ ಸುಡುತ್ತದೆ. ರಕ್ತದ ಸಕ್ಕರೆ ಮಟ್ಟಗಳು ಮತ್ತು ಟ್ರೈಗ್ಲಿಸರೈಡ್‌ ನಿಯಂತ್ರಿಸುತ್ತದೆ.

    MORE
    GALLERIES

  • 88

    Women's Health: ಮಹಿಳೆಯರ ಆರೋಗ್ಯ ಸಮಸ್ಯೆ ನಿವಾರಣೆಗೆ ಅಶ್ವಗಂಧ ವರದಾನ!

    ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯ ತಡೆಯುತ್ತದೆ. ಸ್ತನ ಕ್ಯಾನ್ಸರ್ ಮತ್ತು ಟ್ರಿಪಲ್-ನೆಗೆಟಿವ್ ಸ್ತನ ಕ್ಯಾನ್ಸರ್ ರೋಗಿಗಳಿಗೆ ಅಪಾಯ ಕಡಿಮೆ ಮಾಡಲು ಸಹಕಾರಿ ಆಗಿದೆ. ಅಶ್ವಗಂಗವು ಟ್ಯೂಮರ್ ಕೋಶಗಳನ್ನು ನಾಶಪಡಿಸುತ್ತದೆ. ಜೊತೆಗೆ ದೇಹವನ್ನು ಕ್ಯಾನ್ಸರ್ ವಿರೋಧಿಯಾಗಿ ಕೆಲಸ ಮಾಡಿ ರಕ್ಷಿಸುತ್ತದೆ.

    MORE
    GALLERIES