ಮಹಿಳೆಯರ ಆರೋಗ್ಯಕ್ಕೆ ಕಬ್ಬಿಣ ಪೋಷಕಾಂಶ ಅತ್ಯಂತ ಮುಖ್ಯವಾಗಿದೆ. ಕಬ್ಬಿಣವು ಹಿಮೋಗ್ಲೋಬಿನ್ ಉತ್ಪಾದನೆಗೆ ಸಹಕಾರಿ. ಹಿಮೋಗ್ಲೋಬಿನ್ ಕೆಂಪು ರಕ್ತ ಕಣಗಳಲ್ಲಿ ಇರುವ ಒಂದು ರೀತಿಯ ಪ್ರೋಟೀನ್. ಇದು ದೇಹದಾದ್ಯಂತ ಆಮ್ಲಜನಕ ಸಾಗಿಸುತ್ತದೆ. ದೇಹಕ್ಕೆ ಸಾಕಷ್ಟು ಶಕ್ತಿ ನೀಡುತ್ತದೆ. ಮಹಿಳೆಯರು ಮುಟ್ಟಿನ ಸಮಯದಲ್ಲಿ ಮತ್ತು ಗರ್ಭಾವಸ್ಥೆಯಲ್ಲಿ ಕಬ್ಬಿಣ ಬೇಕು. ವನ್ನು ಹೊಂದಿರುವುದು ಬಹಳ ಮುಖ್ಯ.
ದೇಹದಲ್ಲಿ ವಿಟಮಿನ್ ಬಿ 12 ಬೇಕು. ಮೆದುಳಿನ ಕಾರ್ಯ ಮತ್ತು ಮನಸ್ಥಿತಿ ಸುಧಾರಿಸುತ್ತದೆ. ಶಕ್ತಿ ನೀಡುತ್ತದೆ. ನರಮಂಡಲ ನಿರ್ವಹಿಸುತ್ತದೆ. ಆಯಾಸ ಮತ್ತು ದೌರ್ಬಲ್ಯ ನಿವಾರಿಸುತ್ತದೆ. ಬಾದಾಮಿ ಮತ್ತು ತೆಂಗಿನ ಹಾಲು, ಧಾನ್ಯ, ಚೀಸ್, ಅಣಬೆ, ಮೊಟ್ಟೆ ಸೇವಿಸಿ. ದೇಹದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಬೇಕು. ಇದು ಹಲ್ಲು ಮತ್ತು ಒಸಡುಗಳ ಆರೋಗ್ಯಕ್ಕೆ ಸಹಕಾರಿ. ಹೃದಯ, ಮೂಳೆ, ಮೆದುಳು ಮತ್ತು ಸ್ನಾಯು ಆರೋಗ್ಯಕ್ಕೆ ಸಹಕಾರಿ.