ಜನ ಹೋಳಿ ಹಬ್ಬಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಹೋಳಿ ಆಡುವಾಗ ಮಹಿಳೆಯರು ವಿಶೇಷವಾಗಿ ಕೆಲವು ವಿಚಾರಗಳ ಬಗ್ಗೆ ಗಮನ ಹರಿಸಬೇಕು. ನೀವು ಹೋಳಿ ಆಡಲು ಬಯಸಿದರೆ, ಕೆಲವು ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಖುಷಿಯಿಂದ ಮತ್ತು ಸುರಕ್ಷಿತವಾಗಿ ಹೋಳಿ ಆಡಬಹುದು. ಹೋಳಿ ಸಮಯದಲ್ಲಿ ಅನೇಕ ಮಹಿಳೆಯರು ಸುರಕ್ಷತ ಕ್ರಮ ಕೈಗೊಂಡಿರುವುದಿಲ್ಲ. ಇದರಿಂದ ನಿಮ್ಮ ಮೂಡ್ ಹಾಳಾಗಬಹುದು. ಹಾಗಾಗಿ ನಿಮಗಾಗಿ ಕೆಲವು ಟಿಪ್ಸ್ಗಳನ್ನು ಈ ಕೆಳಕಂಡಂತೆ ನೀಡಲಾಗಿದೆ. ಇವುಗಳನ್ನು ಫಾಲೋ ಮಾಡಿ ಹೋಳಿ ಹಬ್ಬವನ್ನು ಸಡಗರದಿಂದ ಆಚರಿಸಿ.
ಒಳ್ಳೆಯ ಜನರನ್ನು ಆಯ್ಕೆ ಮಾಡಿ: ಹೋಳಿ ದಿನದಂದು, ಮಹಿಳೆಯರು ಸಾಮಾನ್ಯವಾಗಿ ತಮ್ಮ ಸ್ನೇಹಿತರು ಅಥವಾ ಸಂಬಂಧಿಕರೊಂದಿಗೆ ಹೋಳಿ ಆಡಲು ಪ್ರಾರಂಭಿಸುತ್ತಾರೆ. ಒಂದು ವೇಳೆ ನಿಮಗೆ ಅನ್ ಕಂಫರ್ಟ್ಟೇಬಲ್ ಫೀಲ್ ಆದರೆ, ಆ ಸ್ಥಳದಲ್ಲಿ ಹೋಳಿ ಆಡುವುದನ್ನು ನಿಲ್ಲಿಸಿ. ಹಾಗಾಗಿ ಹೋಳಿ ಆಡಲು ಉತ್ತಮ ಜನರನ್ನು ಆಯ್ಕೆ ಮಾಡಿ, ಅವರೊಂದಿಗೆ ನೀವು ಹೋಳಿಯನ್ನು ಕಂಪ್ಲೀಟ್ ಆಗಿ ಎಂಜಾಯ್ ಮಾಡಬಹುದು.
ಮನೆಯವರಿಗೆ ತಿಳಿಸಿ: ಹೋಳಿ ದಿನದಂದು ಮನೆಯಿಂದ ಹೊರಡುವ ಮುನ್ನ ಕುಟುಂಬಸ್ಥರಿಗೆ ತಿಳಿಸಿ. ನಂತರ ನಗರದ ಸುತ್ತಲೂ ಹೋಳಿ ಪಾರ್ಟಿ ಆಯೋಜಿಸಿರುವ ಸ್ಥಳವನ್ನು ಆಯ್ಕೆಮಾಡಿ. ಅಲ್ಲದೇ ನಿಮ್ಮ ಕುಟುಂಬಸ್ಥರೊಂದಿಗೆ ಪಾರ್ಟಿ ನಡೆಯುತ್ತಿರುವ ಸ್ಥಳವನ್ನು ಶೇರ್ ಮಾಡುವುದನ್ನು ಮರೆಯಬೇಡಿ. ಹೋಳಿ ಆಡುವಾಗ ಫೋನ್ ಅನ್ನು ನೀರಿನಿಂದ ದೂರವಿಡಿ. ಇದರಿಂದ ನಿಮಗೆ ಅಪಾಯ ಉಂಟಾದಾಗ ಕುಟುಂಬಸ್ಥರನ್ನು ಸಂಪರ್ಕಿಸಲು ಸುಲಭವಾಗುತ್ತದೆ.