ಹೃದಯಕ್ಕೆ ಸಂಬಂಧಿಸಿದ ಯಾವುದೇ ತೊಂದರೆ ಅಥವಾ ಸಮಸ್ಯೆಗಳಿದ್ದರೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ವೈದ್ಯರನ್ನು ಭೇಟಿ ಮಾಡುವ ಮೂಲಕ ಸೂಕ್ತ ಚಿಕಿತ್ಸೆ ಅಥವಾ ಪರಿಹಾರ ಕಂಡುಕೊಳ್ಳುವುದು ಅಗತ್ಯ. ಏಕೆಂದರೆ ಪ್ರಸ್ತುತ ಸಮಾಜದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಸಾಯುವ ಜನಸಂಖ್ಯೆ ಅಧಿಕವಾಗುತ್ತಿದೆ. ಆಹಾರ, ಪಾನೀಯ, ಅತಿಯಾದ ವ್ಯಾಯಾಮದಿಂದ ಜನರು ಸಮಸ್ಯೆಗಳಿಗೆ ತುತ್ತಾಗಿ ಕೊನೆಗೆ ಜೀವ ಬಿಟ್ಟ ಅನೇಕ ಉದಾಹರಣೆಗಳು ಆಗಾಗ ವರದಿಯಾಗುತ್ತಿರುತ್ತದೆ.
ಮಹಿಳೆ ಕೆಲವು ದಿನಗಳ ಹಿಂದೆ ಸ್ನೇಹಿತನ ಮದುವೆಗೆ ಹೋಗಿದ್ದಳು. ಈ ಸಮಯದಲ್ಲಿ ಆಕೆ ಒಬ್ಬ ವ್ಯಕ್ತಿಯನ್ನು ಭೇಟಿಯಾದಳು. ಸುಮಾರು ಒಂದು ವರ್ಷದಿಂದ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ತಿಳಿದಿದ್ದರೂ ಸಹ. ಮದುವೆಯಲ್ಲಿ ಒಟ್ಟಿಗೆ ಡ್ಯಾನ್ಸ್ ಮಾಡಿ ಮಾತನಾಡಿಕೊಂಡರು. ಪಾರ್ಟಿ ಮುಗಿದ ನಂತರ, ಆಕೆ ಅವನೊಂದಿಗೆ ಹೋಟೆಲ್ ಕೋಣೆಗೆ ಹೋದಳು ನಂತರ ರಾತ್ರಿ ಲೈಂಗಿಕ ಚಟುವಟಿಯಲ್ಲಿ ಭಾಗಿಯಾದಳು.
ಲೈಂಗಿಕ ಕ್ರಿಯೆ ಮುಗಿದ ಬಳಿಕ ಆಕೆಗೆ ಎದೆನೋವು ಕಾಣಿಸಿಕೊಂಡಿತ್ತು. ಹೃದಯ ಬಡಿತ ಹೆಚ್ಚಾಯಿತು. ತಲೆ ತಿರುಗಲು ಪ್ರಾರಂಭಿಸಿತು ಮತ್ತು ಉಸಿರಾಟದ ತೊಂದರೆ ಇದೆ ಎಂದು ಗೊತ್ತಾಯಿತು. ಆಗ ಹೃದಯದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುವ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದೀಯಾ ಎಂದು ಸ್ನೇಹಿತ ನೆನಪಿಸಿಕೊಂಡರು. ನಂತರ ಮಹಿಳೆ ತನ್ನ ಹೃದಯ ಬಡಿತವನ್ನು ಮೇಲ್ವಿಚಾರಣೆ ಮಾಡಲು ನಿಗದಿತ ಮಧ್ಯಂತರದಲ್ಲಿ ಎರಡು ಇಕೆಜಿಗಳನ್ನು ಮಾಡಿದಳು, ಆದರೆ ಎಲ್ಲವೂ ಸಾಮಾನ್ಯವಾಗಿತ್ತು.
ಹೋಟೆಲ್ ಕೋಣೆಯಲ್ಲಿ ಮಹಿಳೆಯ ಜೊತೆಗೆ ಪರಿಚಯವಾದ ಸ್ನೇಹಿತನು ಇದ್ದನು. ಅವನು ತಕ್ಷಣ ಆಕೆಯ ಸೊಂಟವನ್ನು ಉಜ್ಜಲು ಪ್ರಾರಂಭಿಸಿದನು. ಶಾಂತವಾಗಿ ಮತ್ತು ನಿರಾಳವಾಗಿಡಲು ಸಾಕಷ್ಟು ಪ್ರಯತ್ನಿಸಿದನು. ಇದ್ದಕ್ಕಿದ್ದಂತೆ ನೋವು ಕಡಿಮೆಯಾಯಿತು ಮತ್ತು ಪರಿಹಾರವನ್ನು ಕಂಡುಕೊಂಡಳು. ಬೆಳಿಗ್ಗೆ ಆಕೆ ಹೃದ್ರೋಗ ತಜ್ಞರನ್ನು ಭೇಟಿಯಾಗಿ ಪರೀಕ್ಷೆಯನ್ನು ಮಾಡುವುದರೊಂದಿಗೆ ಇಡೀ ಘಟನೆಯನ್ನು ಹೇಳಿದಳು.