ಸಿಡ್ನಿ: ಏಳು ವರ್ಷಗಳ ದಾಂಪತ್ಯ ಅಂತ್ಯ ಕಂಡಾಗ ತನ್ನ ಆಂತರ್ಯವನ್ನು ಕಂಡುಕೊಳ್ಳಲು ಮಹಿಳೆಯೊಬ್ಬರು ಮಾಡಿದ ಎಕ್ಪೆರಿಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ. ನಾದಿಯಾ ಬೊಕೊಡಿ ಎಂಬ ಆಸ್ಟ್ರೇಲಿಯಾ ಮೂಲದ ಮಹಿಳೆ ಕಳೆದ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಇತ್ತೀಚೆಗೆ ವಿಚ್ಛೇದನ ಪಡೆದ ಅವರು ಜೀವಂತಿಕೆ ಕಂಡುಕೊಳ್ಳಲು ಸತತ ಏಳು ದಿನ ಏಳು ಗಂಡಸರ ಜತೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಡೈಲಿ ಮೇಲ್ ಸೇರಿದಂತೆ ಹಲವು ಪತ್ರಿಕೆಗಳು ವರದಿ ಮಾಡಿವೆ.
ನಾದಿಯಾ ಪ್ರಕಾರ, ಅವರ ಈ ಕಾರ್ಯದಿಂದ ದೈನಂದಿನ ಜೀವನದ ಜಂಜಾಟಗಳು ಮತ್ತು ಸಮಾಜದ ಕಟ್ಟುಪಾಡುಗಳಾಚೆಗಿನ ಪ್ರಪಂಚಕ್ಕೆ ಅವರು ಕಾಲಿಟ್ಟಿದ್ದಾರೆ. ಪ್ರತಿಯೊಬ್ಬರಲ್ಲೂ ಅತಿಮಾನುಷ ಕೃತ್ಯಗಳನ್ನು ಮಾಡುವ, ಕೈಗೆಟುಕದ ಕ್ರಿಯೆಯಲ್ಲಿ ಭಾಗಿಯಾಗುವ ಮನುಷ್ಯ ಸಹಜ ಗುಣವಿರುತ್ತದೆ. ಆದರೆ ಅದು ನೈಜತೆಯಲ್ಲಿ ಮರೀಚಿಕೆಯಾಗಿರುತ್ತದೆ. ಯಾರಿಗೂ ಹೇಳಿಕೊಳ್ಳಲು ಸಾಧ್ಯವಾಗದ ಆಸೆಗಳನ್ನು ವಿಚ್ಛೇದನದ ನಂತರ ತೀರಿಸಿಕೊಂಡರಂತೆ ನಾದಿಯಾ.
ಆಸ್ಟ್ರೇಲಿಯಾದ ಕೈಲ್ ಮತ್ತು ಜಾಕಿ ಓ ಆಸ್ಟ್ರೇಲಿಯನ್ ಎಂಬ ರೇಡಿಯೋ ಷೋನಲ್ಲಿ ಮಾತನಾಡಿದ ಅವರು, ದಿನವೊಂದರಲ್ಲಿ ಅತಿ ಹೆಚ್ಚು ಬಾರಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾದ ಬಗ್ಗೆಯೂ ಮಾತನಾಡಿದ್ದಾರೆ. ನಾದಿಯಾ ದಿನವೊಂದಕ್ಕೆ ಆರು ಅಥವಾ ಏಳು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರಂತೆ. ದಿನವೊಂದರಲ್ಲೇ ಎರಡು ಪ್ರತ್ಯೇಕ ಗಂಡಸರ ಜತೆಯೂ ಲೈಂಗಿಕ ಕ್ರಿಯೆ ನಡೆಸಿದ್ದಾರಂತೆ. ಆದರೆ ಇಬ್ಬರಿಗಿಂತ ಹೆಚ್ಚು ಗಂಡಸರ ಜತೆ ಒಂದೇ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿಲ್ಲ ಎಂಬುದನ್ನೂ ಅವರೇ ಹೇಳಿಕೊಂಡಿದ್ದಾರೆ.
ನಾದಿಯಾ ತಾನು ಲೈಂಗಿಕ ಕ್ರಿಯೆಗೆ ಅಡಿಕ್ಟ್ ಆಗಿದ್ದೇನೆ ಎಂಬುದನ್ನು ಅರಿತಿದ್ದು ಕ್ಯಾನನ್ ಜತೆ ರಿಲೇಷನ್ಶಿಪ್ ಆರಂಭಿಸಿದ ಮೇಲಂತೆ. ಸೆಕ್ಸ್ಗೆ ಅಡಿಕ್ಟ್ ಆಗಿದ್ದೀನಿ ಎಂಬ ಭಯ ಆರಂಭವಾದ ಬೆನ್ನಲ್ಲೇ ನಾದಿಯಾ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ನಿತ್ಯ ಮನೋವಿಜ್ಞಾನಿಗಳಿಂದ ಚಿಕಿತ್ಸೆ ಪಡೆಯುತ್ತಿರುವ ನಾದಿಯಾ, ಅವರಂತೆಯೇ ಇರುವ ಇನ್ನಿತರ ಸೆಕ್ಸ್ ಅಡಿಕ್ಟ್ಗಳ ಜತೆ ಸಂಪರ್ಕದಲ್ಲೂ ಇದ್ದಾರೆ. ಅದೊಂದು ರೀತಿಯ ಡಿ-ಅಡಿಕ್ಷನ್ ಕಾರ್ಯಗಾರವಿದ್ದಂತೆ.
ನಮ್ಮ ಸಮಾಜದಲ್ಲಿ ಹಲವು ರೀತಿಯ ನಶೆಗಳಿಗೆ ದಾಸರಾದವರಿದ್ದಾರೆ. ಒಂದು ಹಂತದವರೆಗೆ ಸಮಾಜ ಕುಡುಕರನ್ನು, ಮಾದಕ ವ್ಯಸನಿಗಳನ್ನು ಒಪ್ಪಿಕೊಳ್ಳುತ್ತದೆ. ಆದರೆ ಲೈಂಗಿಕ ಕ್ರಿಯೆಗೆ, ಅದೂ ಒಂದು ಹೆಣ್ಣು ಅಡಿಕ್ಟ್ ಆಗಿದ್ದಾಳೆಂದರೆ ಸಮಾಜ ಒಪ್ಪುವುದೇ ಇಲ್ಲ. ಆಕೆಯನ್ನು ಸಮಾಜ ನೋಡುವ ದೃಷ್ಟಿಯೇ ಬದಲಾಗುತ್ತದೆ. ಮತ್ತು ಆಕೆಯನ್ನು ಯಾರೂ ಸ್ವೀಕರಿಸುವುದಿಲ್ಲ. ಆದರೆ ಇದೂ ಒಂದು ನಶೆ, ಇದರಿಂದ ಆಚೆ ಬರಲು ವೈದ್ಯಕೀಯ ಚಿಕಿತ್ಸೆ ಮತ್ತು ಮಾನಸಿಕ ಸ್ಥೈರ್ಯ ಅನಿವಾರ್ಯ ಎಂದು ಅಭಿಪ್ರಾಯ ಪಡುತ್ತಾರೆ ನಾದಿಯಾ.