Weight Loss: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಜಿಮ್, ವ್ಯಾಯಾಮ ಅವಶ್ಯಕತೆಯೇ ಇಲ್ಲ!

ಬೊಜ್ಜು ಹಲವು ರೋಗಗಳನ್ನು ಹೊತ್ತು ತರುತ್ತದೆ. ಹಾಗಾಗಿ ತೂಕ ನಿಯಂತ್ರಿಸುವುದು ಅವಶ್ಯಕ. ಅಧಿಕ ತೂಕವು ಸೌಂದರ್ಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ, ಥೈರಾಯ್ಡ್ ಮತ್ತು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆ ಅಪಾಯ ಹೆಚ್ಚಿಸುತ್ತದೆ. ಬೊಜ್ಜು ತೊಡೆದು ಹಾಕಲು ಇಲ್ಲಿದೆ ಸಿಂಪಲ್ ಟಿಪ್ಸ್ .

First published:

  • 18

    Weight Loss: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಜಿಮ್, ವ್ಯಾಯಾಮ ಅವಶ್ಯಕತೆಯೇ ಇಲ್ಲ!

    ಜಿಮ್‌ನಲ್ಲಿ ಬೆವರಿಳಿಸಲು ಆಗದಿದ್ದರೆ, ದುಬಾರಿ ಆಹಾರ ಯೋಜನೆ ಫಾಲೋ ಮಾಡಲು ಸಾಧ್ಯವಾಗದಿದ್ದರೆ, ವ್ಯಾಯಾಮ ಮಾಡಲು ಆಗದವರಿಗೆ ತೂಕ ಇಳಿಕೆಗೆ ಸಿಂಪಲ್ ಸಲಹೆ ಇಲ್ಲಿ ನೀಡಲಾಗಿದೆ. ಈ ನೈಸರ್ಗಿಕ ಮಾರ್ಗಗಳು ನಿಮ್ಮ ತೂಕ ಇಳಿಕೆಗೆ ಸಹಕಾರಿ. ನಿಮ್ಮ ಆಹಾರ ಮತ್ತು ಪಾನೀಯದ ಬಗ್ಗೆ ಕಾಳಜಿ ವಹಿಸಿ.

    MORE
    GALLERIES

  • 28

    Weight Loss: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಜಿಮ್, ವ್ಯಾಯಾಮ ಅವಶ್ಯಕತೆಯೇ ಇಲ್ಲ!

    ತೂಕ ನಷ್ಟಕ್ಕೆ ಮೊದಲು ದೇಹವನ್ನು ಆಗಾಗ್ಗೆ ನಿರ್ವಿಷಗೊಳಿಸುವುದು ತುಂಬಾ ಮುಖ್ಯ. ದಿನವೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಡಿಟಾಕ್ಸ್‌ ಪಾನೀಯ ಸೇವನೆ ಬೊಜ್ಜು ಕಡಿಮೆ ಮಾಡುತ್ತದೆ. ಜೇನುತುಪ್ಪ ಮತ್ತು ನಿಂಬೆ ನೀರು ಸೇವನೆ ಬಗ್ಗೆ ನೀವು ಕೇಳಿರಬಹುದು. ಪ್ರತಿದಿನ ಬೆಳಿಗ್ಗೆ ಒಂದು ಲೋಟ ನಿಂಬೆ ನೀರಿಗೆ 2 ಚಮಚ ಜೇನುತುಪ್ಪ ಬೆರೆಸಿ ಸೇವಿಸಿ.

    MORE
    GALLERIES

  • 38

    Weight Loss: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಜಿಮ್, ವ್ಯಾಯಾಮ ಅವಶ್ಯಕತೆಯೇ ಇಲ್ಲ!

    ಮೆಂತ್ಯ, ಅಜ್ವೈನ್, ಜೀರಿಗೆ ಪುಡಿಯು ನಿಮ್ಮ ತೂಕ ನಷ್ಟಕ್ಕೆ ಸಹಕಾರಿ. ಚಯಾಪಚಯ ದರ ಹೆಚ್ಚಿಸಿ, ಕೊಬ್ಬನ್ನು ಕಡಿಮೆ ಮಾಡುತ್ತದೆ. ಸೆಲರಿ ಮತ್ತು ಕಪ್ಪು ಜೀರಿಗೆ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ. ಮೂರು ಪದಾರ್ಥಗಳನ್ನು ಒಟ್ಟಿಗೆ ಹುರಿದು ಪುಡಿ ಮಾಡಿ ದಿನಕ್ಕೆ ಒಮ್ಮೆ ಈ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಕುಡಿಯಿರಿ.

    MORE
    GALLERIES

  • 48

    Weight Loss: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಜಿಮ್, ವ್ಯಾಯಾಮ ಅವಶ್ಯಕತೆಯೇ ಇಲ್ಲ!

    ದಾಲ್ಚಿನ್ನಿ ಮತ್ತು ಜೇನುತುಪ್ಪದ ಚಹಾ ಸೇವನೆಯು ತೂಕ ನಷ್ಟಕ್ಕೆ ಸಹಕಾರಿ. ದಾಲ್ಚಿನ್ನಿ ತೂಕವನ್ನು ಕಡಿಮೆ ಮಾಡಲು ಸಹ ಸಹಕಾರಿ. ಇದು ಸ್ವಾಭಾವಿಕವಾಗಿ ಸಿಹಿ. ಇದು ಸಿಹಿತಿಂಡಿಗಳ ಕ್ರೇವಿಂಗ್ಸ್ ಕಡಿಮೆ ಮಾಡುತ್ತದೆ. ರಕ್ತದ ಇನ್ಸುಲಿನ್ ಮಟ್ಟ ನಿಯಂತ್ರಿಸುತ್ತದೆ. ದಾಲ್ಚಿನ್ನಿ ಚಹಾಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಮತ್ತು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

    MORE
    GALLERIES

  • 58

    Weight Loss: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಜಿಮ್, ವ್ಯಾಯಾಮ ಅವಶ್ಯಕತೆಯೇ ಇಲ್ಲ!

    ಹಸಿ ಬೆಳ್ಳುಳ್ಳಿ ಅಗಿಯುವುದು ತೂಕ ನಷ್ಟಕ್ಕೆ ಸಹಕಾರಿ. ಬೆಳ್ಳುಳ್ಳಿ ನಂಜು ನಿರೋಧಕ ಗುಣ ಹೊಂದಿದೆ. ತೂಕ ಕಳೆದುಕೊಳ್ಳಲು ಪ್ರತಿದಿನ ಬೆಳಿಗ್ಗೆ ನಾಲ್ಕು ಎಸಳು ಬೆಳ್ಳುಳ್ಳಿ ಅಗಿಯುವುದು ತುಂಬಾ ಪ್ರಯೋಜನಕಾರಿ. ಇದನ್ನು ತಿಂದ ನಂತರ ಚೆನ್ನಾಗಿ ಹಲ್ಲುಜ್ಜಿ. ಇಲ್ಲದಿದ್ದರೆ ಬಾಯಿ ಇಡೀ ದಿನ ಬೆಳ್ಳುಳ್ಳಿ ವಾಸನೆ ಬರುತ್ತದೆ.

    MORE
    GALLERIES

  • 68

    Weight Loss: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಜಿಮ್, ವ್ಯಾಯಾಮ ಅವಶ್ಯಕತೆಯೇ ಇಲ್ಲ!

    ಕೃತಕ ಸಕ್ಕರೆ ಸೇವನೆ ನಿಲ್ಲಿಸಿ. ನೈಸರ್ಗಿಕ ಸಕ್ಕರೆ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕೃತಕ ಸಕ್ಕರೆ ಇದೆ. ತೂಕ ಇಳಿಕೆಗೆ ಸಿಹಿತಿಂಡಿಗಳು, ಐಸ್ ಕ್ರೀಮ್ಗಳು, ತಂಪು ಪಾನೀಯಗಳಂತಹ ಕೃತಕ ಸಕ್ಕರೆಯಿಂದ ತುಂಬಿರುವ ವಸ್ತುಗಳ ಸೆವನೆ ತ್ಯಜಿಸಿ. ಸಾಕಷ್ಟು ನೀರು ಕುಡಿಯಿರಿ. ಇದು ತೂಕ ನಷ್ಟಕ್ಕೆ ಸಹಕಾರಿ.

    MORE
    GALLERIES

  • 78

    Weight Loss: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಜಿಮ್, ವ್ಯಾಯಾಮ ಅವಶ್ಯಕತೆಯೇ ಇಲ್ಲ!

    ತೂಕ ನಷ್ಟಕ್ಕೆ ಕೇವಲ ಪಾನೀಯ ಸೇವನೆ ಮಾತ್ರವಲ್ಲ, ದಿನವೂ ಸರಿಯಾದ ಸಮಯಕ್ಕೆ ರಾತ್ರಿ ಬೇಗ ಮಲಗಿ. ಬೆಳಗ್ಗೆ ಬೇಗ ಎದ್ದೇಳಿ. ರಾತ್ರಿ ಎಂಟು ಗಂಟೆಗಳ ಆಳವಾದ ನಿದ್ದೆ ಮಾಡಿ. ದಿನಕ್ಕೆ ಕನಿಷ್ಠ 8 ಗಂಟೆಗಳ ನಿದ್ದೆಯು ದೇಹದ ಕಾರ್ಯನಿರ್ವಹಣೆ ನಿಯಂತ್ರಿಸುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಚಯಾಪಚಯ ದರ ಕಾಪಾಡುತ್ತದೆ.

    MORE
    GALLERIES

  • 88

    Weight Loss: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಜಿಮ್, ವ್ಯಾಯಾಮ ಅವಶ್ಯಕತೆಯೇ ಇಲ್ಲ!

    ಇಡೀ ದಿನ ಆಹಾರವನ್ನು ಹೆಚ್ಚು ಸೇವನೆ ಮಾಡಬೇಡಿ. ಸಣ್ಣ ತಟ್ಟೆಯಲ್ಲಿ ಆಹಾರ ಸೇವಿಸಿ. ಅತಿಯಾಗಿ ತಿನ್ನುವ ಅಭ್ಯಾಸ, ಅಥವಾ ಒಂದೇ ಬಾರಿಗೆ ಭಾರವಾದ ಊಟ ಮಾಡುವುದು ಹೊಟ್ಟೆಯ ಸಮಸ್ಯೆ ಉಂಟು ಮಾಡುತ್ತದೆ. ಇದು ಕೊಬ್ಬು ಉಂಟು ಮಾಡುತ್ತದೆ. ಹಾಗಾಗಿ ಊಟವನ್ನು ಚಿಕ್ಕ ಚಿಕ್ಕ ಭಾಗವಾಗಿ ಸೇವಿಸಿ.

    MORE
    GALLERIES