Life Hacks: ಈ ಟಿಪ್ಸ್ ಫಾಲೋ ಮಾಡಿದ್ರೆ ಆರೋಗ್ಯಕ್ಕೂ ಒಳ್ಳೆಯದು, ಹಣನೂ ಉಳಿಯುತ್ತೆ
Savings Tips For Life: ನಾವು ಕೆಲವೊಮ್ಮೆ ನಮಗೆ ಗೊತ್ತಿಲ್ಲದೇ ಮಾಡುವ ತಪ್ಪುಗಳು ಹಣ ವ್ಯರ್ಥವಾಗಲು ಕಾರಣವಾಗುತ್ತದೆ. ಈ ಹಣ ವೇಸ್ಟ್ ಆಗುವುದು ಮಾತ್ರವಲ್ಲದೇ ಅದರಿಂದ ನಮ್ಮ ಆರೋಗ್ಯಕ್ಕೆ ಸಹ ಸಮಸ್ಯೆ ಬರುತ್ತದೆ. ಹಾಗಾಗಿ ಈ ಎರಡು ಆಗದಂತೆ ನೋಡಿಕೊಳ್ಳಲು ಕೆಲ ಟಿಪ್ಸ್ ಇಲ್ಲಿದೆ.
ಶಾಪಿಂಗ್: ನಾವು ಶಾಪಿಂಗ್ ಮಾಡುವಾಗ ಬಹಳ ಎಚ್ಚರಿಕೆಯಿಂದ ಮಾಡಬೇಕು. ಯಾವುದರ ಅವಶ್ಯಕತೆ ನಮಗೆ ಇದೆಯೋ ಅದನ್ನು ಮಾತ್ರ ನಾವು ಖರೀದಿಸಬೇಕು. ಅತಿಯಾಗಿ ನಾವು ಹಣ್ಣು -ತರಕಾರಿ ಅಥವಾ ಯಾವುದೇ ಆಹಾರವನ್ನು ಖರೀದಿ ಮಾಡಿದರೂ ಸಹ ಹಣ ವ್ಯರ್ಥವಾಗುತ್ತದೆ. ಅಲ್ಲದೇ ಇದನ್ನು ನಾವು ಹೆಚ್ಚು ದಿನ ಇಟ್ಟು ಬಳಕೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಕೂಡ.
2/ 8
ಬ್ಯಾಗ್: ನಾವು ಶಾಪಿಂಗ್ ಮಾಡಲು ಹೊರಟಾಗ ನಮ್ಮ ಜೊತೆ ಬ್ಯಾಗ್ ಕೂಡ ತೆಗೆದುಕೊಂಡು ಹೋಗಬೇಕು. ಇಲ್ಲದಿದ್ದರೆ ಪ್ಲಾಸ್ಟಿಕ್ ಚೀಲಗಳನ್ನು ಖರೀದಿಸಬೇಕಾಗುತ್ತದೆ. ಈ ಪ್ಲಾಸ್ಟಿಕ್ ಪರಿಸರಕ್ಕೆ ಮತ್ತು ನಮ್ಮ ಆರೋಗ್ಯಕ್ಕೆ ಸಮಸ್ಯೆ ಎಂಬುದು ಎಲ್ಲರಿಗೂ ಗೊತ್ತಿದೆ .
3/ 8
ಒಮ್ಮೆ ಅಡುಗೆ ಮಾಡಿ: ದಿನದಲ್ಲಿ ಸಾಧ್ಯವಾದರೆ ಒಮ್ಮೆ ಮಾತ್ರ ಅಡುಗೆ ಮಾಡಿ. ಪದೇ ಪದೇ ಗ್ಯಾಸ್ ಬಳಕೆ ಮಾಡಬೇಡಿ. ಇದರಿಂದ ನಿಮಗೆ ಹೆಚ್ಚು ಕೆಲಸ ಸಹ ಇರುವುದಿಲ್ಲ ಮತ್ತು ಗ್ಯಾಸ್ ಸಹ ಹೆಚ್ಚು ಬಳಕೆ ಆಗುವುದಿಲ್ಲ.
4/ 8
ಸೀಸನ್ ಆಹಾರಗಳನ್ನು ಖರೀದಿಸಿ: ನಮಗೆ ಒಂದೊಂದು ಸೀಸನ್ಗೆ ತಕ್ಕಂತೆ ಒಂದೊಂದು ಹಣ್ಣು ಮತ್ತು ತರಕಾರಿಗಳು ಸಿಗುತ್ತದೆ. ಅದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವಾಗುತ್ತದೆ. ಸೀಸನ್ ಸಮಯದಲ್ಲಿ ಆ ಹಣ್ಣು ಮತ್ತು ತರಕಾರಿ ಕಡಿಮೆ ಬೆಲೆಗೆ ಸಹ ಸಿಗುತ್ತದೆ.
5/ 8
ವೇಸ್ಟ್ ಕಡಿಮೆ ಮಾಡಿ: ನಾವು ಮೊದಲು ಮಾಡಬೇಕಿರುವ ಕೆಲಸ ಎಂದರೆ ಅಗತ್ಯಕ್ಕೆ ತಕ್ಕಷ್ಟು ಆಹಾರವನ್ನು ಮಾತ್ರ ತಯಾರಿಸುವುದು. ನಾವು ಒಬ್ಬರ ಜಾಗದಲ್ಲಿ ಇಬ್ಬರಿಗೆ ಅಡುಗೆ ಮಾಡಿದರೆ ಅದು ವೇಸ್ಟ್ ಆಗುತ್ತದೆ. ಬಿಸಾಡುವುದು ಬೇಡ ಎಂದು ಇಟ್ಟು ಮರುದಿನ ತಿಂದರೆ ಅದು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ಹಾಗಾಗಿ ಎಚ್ಚರದಿಂದ ಮಾಡಿ.
6/ 8
ಜಂಕ್ ಆಹಾರಗಳು: ಜಂಕ್ ಆಹಾರಗಳು ನಮಗೆ ರುಚಿಕರ ಎಂದು ಅನಿಸುತ್ತದೆ. ಆದರೆ ಇದು ಆರೋಗ್ಯ ಹಾಳಾಗಲು ಮುಖ್ಯ ಕಾರಣ. ಅಲ್ಲದೇ ಇದಕ್ಕೆ ನಾವು ಹೆಚ್ಚು ಹಣ ವ್ಯಯಿಸುವ ಬದಲು, ಇದೇ ದುಡ್ಡಿನಲ್ಲಿ ಆರೋಗ್ಯಕರ ಆಹಾರ ಖರೀದಿಸಬಹುದು.
7/ 8
ಈ ತರಕಾರಿಗಳನ್ನು ಒಟ್ಟಿಗೆ ಇಡಬೇಡಿ: ಸಾಮಾನ್ಯವಾಗಿ ಈರುಳ್ಳಿ ಮತ್ತು ಆಲೂಗೆಡ್ಡೆಯನ್ನು ಒಟ್ಟಿಗೆ ಸಂಗ್ರಹಿಸುವ ಕೆಲಸ ಮಾಡುತ್ತೇವೆ. ಆದರೆ ಇದು ತಪ್ಪು. ಈ ಎರಡು ವಸ್ತುಗಳನ್ನು ಬೇರೆ ಬೇರೆಯಾಗಿ ಸಂಗ್ರಹಿಸಿ, ಹಾಗೆಯೇ ಇವುಗಳನ್ನು ಪ್ರಿಜ್ನಲ್ಲಿ ಇಡಬೇಡಿ. ಒಟ್ಟಿಗೆ ಇಟ್ಟರೆ ಬೇಗ ಹಾಳಾಗುತ್ತದೆ.
8/ 8
ಪ್ಯಾಕೇಜ್ : ಸಾಮಾನ್ಯವಾಗಿ ನಾವು ಪ್ಯಾಕೇಜ್ ಆಗಿರುವ ಆಹಾರಗಳನ್ನು ಖರೀದಿ ಮಾಡುತ್ಏವೆ. ಆದರೆ ಹಣ್ಣು ಮತ್ತು ತರಕಾರಿಗಳನ್ನು ಸಹ ಪ್ಯಾಕ್ ಮಾಡಿರುವುದನ್ನ ಖರೀದಿ ಮಾಡುವುದು ವ್ಯರ್ಥ. ಅವುಗಳಲ್ಲಿ ಯಾವುದು ಹಾಳಾಗಿದೆ ಎಂಬುದನ್ನ ಗುರುತಿಸುವುದು ಕಷ್ಟ. ಹಾಗೆಯೇ ಇದು ಆರೋಗ್ಯಕ್ಕೆ ಸಹ ಒಳ್ಳೆಯದಲ್ಲ.