ಚಳಿಗಾಲದಲ್ಲಿ(Winter) ಕೆಮ್ಮು, ನಗೆಡಿ, ಶೀತ, ಗಂಟಲು ನೋವು ಬರುವುದು ಸಾಮಾನ್ಯ. ಹವಾಮಾನ ವೈಪರೀತ್ಯದಿಂದಾಗಿ ಈ ಆರೋಗ್ಯ ಸಮಸ್ಯೆಗಳು(Health Problems) ಕಾಣಿಸಿಕೊಳ್ಳುತ್ತವೆ. ಆರೋಗ್ಯ ಹದಗೆಟ್ಟಾಗ ಅನೇಕ ಜನರು ಆಸ್ಪತ್ರೆಗಳಿಗೆ(Hospitals) ಹೋಗುತ್ತಾರೆ. ಆದರೆ ಇಂತಹ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ಪರಿಹಾರ ಪಡೆಯಬಹುದು. ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಈ ಮನೆ ಮದ್ದುಗಳನ್ನು(Home Remedies) ಟ್ರೈ ಮಾಡಿ ಗಂಟಲು ನೋವಿನಿಂದ ಮುಕ್ತಿ ಪಡೆಯಿರಿ.
ಚಳಿಗಾಲದಲ್ಲಿ ಗಂಟಲು ನೋವು ಕಾಡುತ್ತಿದ್ದರೆ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ. ಈ ಮಾತ್ರೆಗಳು ಒಳ್ಳೆಯ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡುವುದಿಲ್ಲ. ಹೀಗಾಗಿ ನಾವು ಆದಷ್ಟು ಮಾತ್ರೆಗಳಿಂದ ದೂರ ಇರುವುದು ಒಳ್ಳೆಯದು. ಇದೇ ವೇಳೆ ನಾವು ಈ ಕೆಳಕಂಡ ಮೂರು ಟಿಪ್ಸ್ಗಳನ್ನು ಫಾಲೋ ಮಾಡಬೇಕು. ಈ ಮನೆ ಮದ್ದುಗಳನ್ನು ಟ್ರೈ ಮಾಡಿದರೆ ಶೀತ, ಕೆಮ್ಮು, ನೆಗಡಿಗೆ ಶೀಘ್ರದಲ್ಲೇ ಗುಡ್ ಬೈ ಹೇಳಬಹುದು.
ಜೇನುತುಪ್ಪ ಮತ್ತು ಕರಿಮೆಣಸು: ಗಂಟಲು ನೋವನ್ನು ನಿವಾರಿಸಲು ಜೇನುತುಪ್ಪ ಮತ್ತು ಕರಿಮೆಣಸನ್ನು ಬಳಸಬೇಕು. ಜೇನುತುಪ್ಪವು ಸಾಕಷ್ಟು ಆ್ಯಂಟಿಬಯೋಟಿಕ್ ಗುಣಗಳನ್ನು ಹೊಂದಿದೆ. ಇದು ನೋಯುತ್ತಿರುವ ಗಂಟಲು ಹಾಗೂ ಸೋಂಕಿನಿಂದ ರಕ್ಷಿಸುತ್ತದೆ. ಜೇನುತುಪ್ಪದಂತೆ ಕರಿಮೆಣಸು ಕೂಡ ಗಂಟಲು ನೋವನ್ನು ನಿವಾರಿಸುತ್ತದೆ. ಒಂದು ಚಮಚ ಜೇನುತುಪ್ಪದಲ್ಲಿ ಚಿಟಿಕೆ ಕರಿಮೆಣಸಿನ ಪುಡಿಯನ್ನು ಬೆರೆಸಿ ದಿನಕ್ಕೆ ಎರಡರಿಂದ ಮೂರು ಬಾರಿ ತಿನ್ನಿರಿ.