ಚರ್ಮ ಒಣಗಿದಾಗ ಹೆಚ್ಚು ಉದುರಲು ಶುರುವಾಗುತ್ತದೆ. ಸ್ಕ್ರಬ್ ಮಾಡಿ ಅದನ್ನು ತೆಗೆದರೆ ಆಗ ಹೊಸಾ ಚರ್ಮ ಬೆಳೆಯಲು ಅನುಕೂಲಕರವಾಗಿರುತ್ತದೆ. ಸಕ್ಕರೆ ಮತ್ತು ಜೇನುತುಪ್ಪ ಬೆರೆಸಿ ಅದರಿಂದ ಮೃದುವಾಗಿ ರಬ್ ಮಾಡಿದರೆ ಚರ್ಮ ನುಣುಪಾಗುತ್ತದೆ. ಇದು ಒಳ್ಳೆಯ ಸ್ಕ್ರಬ್. ಇದರ ನಂತರ ತಣ್ಣಗಿನ ಹಾಲನ್ನು ಹತ್ತಿಯಲ್ಲಿ ಅದ್ದಿ ಮುಖಕ್ಕೆ ಹಚ್ಚಬೇಕು. ಇದು ತೇವಾಂಶವನ್ನು ಹಿಡಿದಿಡುತ್ತದೆ.