Photos: ಲಡಾಕ್ನ ರಸ್ತೆಗಳಲ್ಲಿ ಮೊಬೈಲ್ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಪ್ರಕೃತಿಯ ಸೌಂದರ್ಯ..!
ಜಮ್ಮು-ಕಾಶ್ಮೀರದ ಲಡಾಕ್ ಭೂಮಿ ಮೇಲಿನ ಸ್ವರ್ಗವಿದ್ದಂತೆ. ಇಂತಹ ರಮಣೀಯ ಸ್ಥಳಕ್ಕೆ ಜೂನ್ ತಿಂಗಳಿಲ್ಲಿ ಪ್ರವಾಸಿಗರ ದಂಡೇ ತೆರೆಳುತ್ತದೆ. ಆದರೆ ಅದೇ ಚಳಿಗಾಲದಲ್ಲಿ ಅಂದರೆ ಡಿಸೆಂಬರ್ನಿಂದ ಫೆಬ್ರವರಿ ತಿಂಗಳಿನಲ್ಲಿ ಲಡಾಕ್ ಹೇಗಿರುತ್ತೆ ಗೊತ್ತಾ. ನೆಲದ ಮೇಲೆಲ್ಲ ಮಲ್ಲಿಗೆ ಚೆಲ್ಲಿದಂತೆ ಹಿಮ ಚೆಲ್ಲಿದ ಬಿಳಿ ಬಣ್ಣದ ರಸ್ತೆಗಳು, ಮೈ ಕೊರೆಯುವ ಚಳಿ, ರಸ್ತೆಗಳ ಬದಿಗಳಲ್ಲಿ ಕಾಣುವ ಹಿಮ ಪರ್ವತಗಳು.... ಸೂರ್ಯ ಕಂಡೂ ಮೈಗೆ ತಾಗದ ಬಿಸಿಲು... ಇಂತಹ ರಮಣೀಯ ಸ್ಥಳದ ಕೆಲವೊಂದು ಚಿತ್ರಗಳು ನಿಮಗಾಗಿ. (ಚಿತ್ರಗಳು: ಅನಿತಾ ಈ.)