Winter Tips: ಚಳಿಗಾಲದ ಸೋಮಾರಿತನ ಹೋಗಲಾಡಿಸಲು ಸ್ನಾನದ ನೀರಿಗೆ ಈ ಪದಾರ್ಥಗಳನ್ನು ಸೇರಿಸಿ
ಚಳಿಗಾಲದಲ್ಲಿ ಸ್ನಾನ ಮಾಡೋದು ಅಂದ್ರೆ ಅದೆಷ್ಟೋ ಮಂದಿಗೆ ಇಷ್ಟವಾಗೋದಿಲ್ಲ. ಚಳಿಗಾಲದಲ್ಲಿ ಬೆಳಗ್ಗೆ ಎದ್ದೇಳೋದು ಕಷ್ಟ, ಇದ್ರಿಂದ ಎಲ್ಲಾ ಕೆಲಸ ತಡವಾಗುತ್ತದೆ. ಆದ್ರೆ ನಿಮ್ಮ ಸೋಮಾರಿತನವನ್ನು ಹಾಗೂ ದೇಹದ ಆಯಾಸ ಹೋಗಲಾಡಿಸಲು ಹೀಗೆ ಮಾಡಿ
ಸ್ನಾನದ ನೀರಿನಲ್ಲಿ ಕೆಲವು ವಸ್ತುಗಳನ್ನು ಸೇರಿಸಿದ್ರೆ ಸಾಕು ಆಕ್ಟೀವ್ ಆಗಬಹುದು. ಈ ವಸ್ತುಗಳು ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುತ್ತದೆ.
2/ 7
ನಿಂಬೆ: ಸ್ನಾನದ ನೀರಿಗೆ ನಿಂಬೆ ರಸವನ್ನು ಸೇರಿಸಿ ಇದ್ರಿಂದ ದೇಹದ ಕೆಟ್ಟ ವಾಸನೆ ಮತ್ತು ಬೆವರಿನಿಂದ ಉಂಟಾಗುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ, ನೀವು ದಿನವಿಡೀ ಆಕ್ಟೀವ್ ಆಗಿರಬಹುದು
3/ 7
ಗ್ರೀನ್ ಟೀ: ಗ್ರೀನ್ ಟೀ ಕೇವಲ ಕುಡಿಯಲು ಮಾತ್ರವಲ್ಲ ಇದ್ರಿಂದ ಅನೇಕ ಪ್ರಯೋಜನವಿದೆ. ಸ್ನಾನದ ನೀರಿಗೆ ಗ್ರೀನ್ ಟೀ ಸೇರಿಸುವುದರಿಂದ ಬೆವರಿನ ವಾಸನೆಯನ್ನು ಹೋಗಲಾಡಿಸುತ್ತದೆ, ಸೋಮಾರಿತನವನ್ನು ದೂರವಾಗಿಸುತ್ತದೆ.
4/ 7
ಬೆಣಚು ಉಪ್ಪು: ಸ್ನಾನದ ನೀರನ್ನು ಸ್ವಲ್ಪ ಹೆಚ್ಚು ಬೆಚ್ಚಗಿರಲಿ. ಅದಕ್ಕೆ ಕಲ್ಲು ಉಪ್ಪನ್ನು ಸೇರಿಸಿ. ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಸಹಕಾರಿಯಾಗಿದೆ.
5/ 7
ಬೇವಿನ ಎಲೆಗಳು: ಬೇವಿನ ಎಲೆಗಳು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು, ಇದು ನಮ್ಮ ಚರ್ಮವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.
6/ 7
ಸ್ನಾನ ಮಾಡುವ ಮೊದಲು ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಸ್ನಾನದ ನೀರಿನಲ್ಲಿ ಮಿಶ್ರಣ ಮಾಡಿ. ಇದರಿಂದ ಚರ್ಮದ ಸೋಂಕು, ತುರಿಕೆ ಮತ್ತು ಕೊಳೆ ನಿವಾರಣೆಯಾಗುತ್ತದೆ.
7/ 7
ಹರಳೆಣ್ಣೆ: ಇದು ಆಲಮ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಆದ್ದರಿಂದ ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಸ್ನಾನಕ್ಕೆ ಹರಳೆಣ್ಣೆ ಸೇರಿಸುವುದರಿಂದ ದೇಹದಲ್ಲಿ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ