Winter Foods: ಚಳಿಗಾಲದಲ್ಲಿ ಈ ಬೆಚ್ಚಗಿನ ಆಹಾರಗಳನ್ನು ಸೇವಿಸಬೇಕಂತೆ
Winter Foods For Health: ನಿಮ್ಮ ಬೆಚ್ಚಗಿನ ಬಟ್ಟೆಗಳು ಮತ್ತು ಹೊದಿಕೆಗಳೊಂದಿಗೆ ಚಳಿಗಾಲಕ್ಕೆ ಎಲ್ಲರೂ ತಯಾರಾಗಿದ್ದಾರೆ. ಆದರೆ, ಆಹಾರಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಚಳಿಗಾಲವು ಸಂಧಿವಾತ ಮತ್ತು ಶುಷ್ಕತೆ, ಎಸ್ಜಿಮಾ ಮತ್ತು ಸೋರಿಯಾಸಿಸ್ನಂತಹ ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಯಾವ ಆಹಾರಗಳು ಬೆಸ್ಟ್ ಎಂಬುದು ಇಲ್ಲಿದೆ.
ಚಳಿಗಾಲದಲ್ಲಿ ಬಲವಾದ ರೋಗನಿರೋಧಕ ಶಕ್ತಿಯು ನಮ್ಮನ್ನು ಅನಾರೋಗ್ಯಕ್ಕೆ ಒಳಗಾಗದಂತೆ ತಡೆಯುವುದು ಮಾತ್ರವಲ್ಲದೆ ನಮ್ಮ ಚರ್ಮ, ಕೂದಲು ಮತ್ತು ಕೀಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಸಂಧಿವಾತ ಹೊಂದಿರುವ ವ್ಯಕ್ತಿಗಳು ಚಳಿಗಾಲದಲ್ಲಿ ಭಯಪಡುತ್ತಾರೆ ಏಕೆಂದರೆ ತಾಪಮಾನ ಕಡಿಮೆಯಾದಂತೆ ಅವರ ಕೀಲು ನೋವುಗಳು ಹೆಚ್ಚಾಗುತ್ತವೆ.
2/ 8
ನೆಲ್ಲಿಕಾಯಿ, ತುಪ್ಪ, ಖರ್ಜೂರ, ರಾಗಿ, ನಟ್ಸ್, ಸಾಸಿವೆಯಂತಹ ಆಹಾರಗಳು ಚಳಿಗಾಲದಲ್ಲಿ ಇಂತಹ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಆ ಆಹಾರಗಳ ಲಿಸ್ಟ್ ಇಲ್ಲಿದೆ.
3/ 8
ತುಪ್ಪ ಶುದ್ಧ ತುಪ್ಪವು ಅತ್ಯಂತ ಸುಲಭವಾಗಿ ಜೀರ್ಣವಾಗುವ ಕೊಬ್ಬುಗಳಲ್ಲಿ ಒಂದಾಗಿದೆ, ಇದು ನಿಮ್ಮ ದೇಹವನ್ನು ಬೆಚ್ಚಗಾಗಿಸಲು ತ್ವರಿತ ಶಾಖ ಮತ್ತು ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ತುಪ್ಪದ ಮಿತವಾದ ಸೇವನೆಯು ಚರ್ಮವು ಶುಷ್ಕ ಮತ್ತು ಫ್ಲಾಕಿ ಆಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
4/ 8
ಶುಂಠಿ ಕೆಮ್ಮು ಮತ್ತು ಶೀತಕ್ಕೆ ಪರಿಹಾರ ನೀಡಲು ಅತ್ಯಂತ ಪರಿಣಾಮಕಾರಿ ವಸ್ತು ಎಂದರೆ ಈ ಶುಂಠಿ. ಇದರ ಪ್ರಯೋಜನಗಳು ಹಲವಾರು, ಇದು ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ದೇಹವನ್ನು ಬೆಚ್ಚಗಾಗಲು ಸಹಾಯ ಮಾಡುತ್ತದೆ.
5/ 8
ಸೂಪ್ ಚಹಾ, ಕಾಫಿ, ಹಾಲು, ಸೂಪ್, ಮೂಲಕೆಯ ಟೀಗಳನ್ನು ಕುಡಿಯುವುದು ಚಳಿಗಾಲದಲ್ಲಿ ಬಹಳ ಸಹಾಯ ಮಾಡುತ್ತದೆ. ಅದರಲ್ಲೂ ತರಕಾರಿ ಹಾಕಿ ಮಾಡಿದ ಸೂಪ್ ಆರೋಗ್ಯಕರ ಕೂಡ.
6/ 8
ಬೆಲ್ಲ ಚಳಿಗಾಲದಲ್ಲಿ ಜೀರ್ಣಾಂಗ ಸಮಸ್ಯೆಯನ್ನ ಹೆಚ್ಚು ಮಾಡುತ್ತದೆ. ಈ ಬೆಲ್ಲ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಲಬದ್ಧತೆ ಸೇರಿದಂತೆ ಶೀತ-ಕೆಮ್ಮಿಗೆ ಸಹ ಇದು ಪರಿಹಾರ ನೀಡುತ್ತದೆ.
7/ 8
ಡ್ರೈ ಫ್ರೂಟ್ಸ್ ಚಳಿಗಾಲದಲ್ಲಿ ಡ್ರೈ ಫ್ರೂಟ್ಸ್ ಸೇವನೆ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಕಬ್ಬಿಣಾಂಶ ಸೇರಿದಂತೆ ವಿವಿಧ ಪೋಷಕಾಂಶಗಳನ್ನು ಇದು ಹೊಂದಿದ್ದು, ಆರೋಗ್ಯಕರ ಆಹಾರ ಎನ್ನಬಹುದು.
8/ 8
ಎಳ್ಳು ಎಳ್ಳು ತಿನ್ನುವುದರಿಂದ ದೇಹ ಬೆಚ್ಚಗಾಗುತ್ತದೆ, ನೀವು ಬರೀ ಎಳ್ಳು ತಿನ್ನಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅದನ್ನು ಉಂಡೆ ಮಾಡಿಕೊಂಡು ತಿನ್ನಬಹುದು. ಇದು ನಿಮಗೆ ವಿವಿಧ ಪೋಷಕಾಂಶಗಳನ್ನು ನೀಡುತ್ತದೆ.