Winter Hair Care: ಈ ಹೂವುಗಳನ್ನು ಬಳಸಿದ್ರೆ ಕೂದಲು ಉದುರೋದು ನಿಲ್ಲುತ್ತೆ
Winter Flowers For Hair Care: ಚಳಿಗಾಲದಲ್ಲಿ ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಅನೇಕ ಜನರು ಕೂದಲ ಆರೈಕೆಗಾಗಿ ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ, ಕೆಲವು ರೀತಿಯ ಹೂವುಗಳು ಚಳಿಗಾಲದಲ್ಲಿ ನಿಮ್ಮ ಕೂದಲನ್ನು ಆರೋಗ್ಯಕರವಾಗಿrಇಸಲು ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಆ ಹೂವುಗಳು ಯಾವುವು ಎಂಬುದು ಇಲ್ಲಿದೆ.
ಆಯುರ್ವೇದದಲ್ಲಿ ಸಾಂಬಾರ ಪದಾರ್ಥಗಳಷ್ಟೇ ಅಲ್ಲ, ವಿವಿಧ ಹೂವುಗಳನ್ನು ಔಷಧ ಮತ್ತು ಪುಡಿಗಳನ್ನು ತಯಾರಿಸಲು ಬಳಸುತ್ತಾರೆ. ಚರ್ಮ ರೋಗಗಳನ್ನು ಗುಣಪಡಿಸಲು ಮತ್ತು ಸೋಂಕುಗಳನ್ನು ತಡೆಗಟ್ಟುವಲ್ಲಿ ಹೂವುಗಳು ಸಹಾಯ ಮಾಡುತ್ತದೆ.
2/ 8
ಕೆಲವು ರೀತಿಯ ಹೂವುಗಳು ಚಳಿಗಾಲದಲ್ಲಿ ನಿಮ್ಮ ಕೂದಲನ್ನು ಆರೋಗ್ಯಕರವಾಗಿರಲು ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಕೂದಲಿನ ಆರೈಕೆಯಲ್ಲಿ ಈ 5 ಹೂವುಗಳ ಬಳಕೆ ಮತ್ತು ಅದರ ಕೆಲವು ವಿಶಿಷ್ಟ ಪ್ರಯೋಜನಗಳ ಮಾಹಿತಿ ಇಲ್ಲಿದೆ.
3/ 8
ಗುಲಾಬಿ ಹೂವುಗಳು ಚಳಿಗಾಲದಲ್ಲಿ ಗುಲಾಬಿ ಹೂಗಳನ್ನು ಬಳಸುವುದರಿಂದ ಕೂದಲು ಮೃದುವಾಗಿ ತ್ತು ಹೊಳೆಯುತ್ತದೆ. ಇದಕ್ಕಾಗಿ ರೋಸ್ ವಾಟರ್ ಅನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ರೋಸ್ ವಾಟರ್ ಅನ್ನು ನಿಯಮಿತವಾಗಿ ಕೂದಲಿಗೆ ಹಚ್ಚುವುದರಿಂದ ಕೂದಲು ಮೃದುವಾಗುತ್ತದೆ.
4/ 8
ಜಾಸ್ಮಿನ್ ಚಳಿಗಾಲದಲ್ಲಿ ಕೂದಲು ಸಾಮಾನ್ಯವಾಗಿ ಒರಟಾಗಿರುತ್ತದೆ. ಈ ರೀತಿಯ ಸಮಸ್ಯೆಗಳಿರುವಾಗ ತೇವಾಂಶ ಬೇಕು. ಆಂಟಿಮೈಕ್ರೊಬಿಯಲ್ ಮತ್ತು ಕ್ಲೆನ್ಸಿಂಗ್ ಅಂಶಗಳನ್ನು ಹೊಂದಿರುವ ಜಾಸ್ಮಿನ್ ಹೂವುಗಳು ನಿಮಗೆ ಸಹಾಯ ಮಾಡುತ್ತದೆ. ತಲೆಯಲ್ಲಿ ಹೇನಿನ ಸಮಸ್ಯೆ ಇದ್ದರೆ ಜಾಸ್ಮಿನ್ ಎಣ್ಣೆ ಪರಿಹಾರ ನೀಡುತ್ತದೆ.
5/ 8
ದಾಸವಾಳ ಚಳಿಗಾಲದಲ್ಲಿ ಕೂದಲು ಉದುರುವುದನ್ನು ತಡೆಯಲು ದಾಸವಾಳದ ಹೂವುಗಳು ಉತ್ತಮ. ಇದಕ್ಕಾಗಿ ದಾಸವಾಳದ ಹೂಗಳನ್ನು ಒಣಗಿಸಿ. ನಂತರ ತೆಂಗಿನ ಎಣ್ಣೆಗೆ 1 ಚಮಚ ದಾಸವಾಳದ ಪುಡಿಯನ್ನು ಬೆರೆಸಿ ಕೂದಲಿಗೆ ಮಸಾಜ್ ಮಾಡಿ. ದಾಸವಾಳ ಹೂವಿನ ಹೇರ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ.
6/ 8
ರೋಸ್ಮರಿ ಹೂವು ರೋಸ್ಮರಿ ಹೂವುಗಳು ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಈ ಹೂವುಗಳು ತುಂಬಾ ಉಪಯುಕ್ತ. ರೋಸ್ಮರಿ ಹೂವು ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ರೋಸ್ಮರಿ ಹೂವುಗಳು ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುವ ಮೂಲಕ ಕೂದಲಿಗೆ ಹೊಳಪನ್ನು ತರುತ್ತದೆ.
7/ 8
ಬೆರ್ಗಮಾಟ್ ಬೆರ್ಗಮಾಟ್ ಹೂವುಗಳು ವಿಟಮಿನ್ ಸಿ ಯ ಅತ್ಯುತ್ತಮ ಮೂಲ. ಇದರ ಸಹಾಯದಿಂದ ನೀವು ಕೂದಲು ಉದುರುವಿಕೆಯಿಂದ ಪರಿಹಾರವನ್ನು ಪಡೆಯಬಹುದು. ಬೆರ್ಗಮಾಟ್ ಹೂವುಗಳು ಕೂದಲು ಬೆಳೆಯಲು ಸಹಾಯ ಮಾಡುತ್ತದೆ.
8/ 8
ಹಕ್ಕುತ್ಯಾಗ: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಗಳನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಪರಿಶೀಲಿಸಿಲ್ಲ. ಇದು ಸಂಪೂರ್ಣವಾಗಿ ನಿಜವೆಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ