ಸಾಮಾಜಿಕ ಜಾಲತಾಣಗಳಾದ ಟಿಕ್ಟಾಕ್, ಫೇಸ್ಬುಕ್, ವಾಟ್ಸಾಪ್ ಇತ್ಯಾದಿಗಳ ಮೂಲಕ ನಮ್ಮ ಜೀವನಶೈಲಿ, ಮೊಬೈಲ್ ಸೇರಿದಂತೆ ತಂತ್ರಜ್ಞಾನ , ಕಂಪ್ಯೂಟರ್, ಆಸ್ತಿ ವಿಷಯಗಳು, ಪಾಕವಿಧಾನ ಇತ್ಯಾದಿ ಸಲಹೆಗಳ ಮಹಾಪೂರವೇ ಹರಿದುಬರುತ್ತದೆ. ಕೆಲವು ಸಂದೇಶಗಳು ಮೇಲ್ನೋಟಕ್ಕೆ ನಿಜವೆಂದು ತೋರುತ್ತದೆ, ಆದರೆ ನಮ್ಮ ಮನಸ್ಸಿನಲ್ಲಿ ಶಾಶ್ವತವಾದ ಗೊಂದಲವನ್ನು ಉಂಟು ಮಾಡುತ್ತದೆ.