Bangles: ಮಹಿಳೆಯರು ಬಳೆ ಧರಿಸೋದು ಏಕೆ? ಇಲ್ಲಿದೆ ವೈಜ್ಞಾನಿಕ ಕಾರಣ

ಇತ್ತೀಚಿನ ದಿನಗಳಲ್ಲಿ ಕನ್ನಡಕವನ್ನು ಟ್ರೆಂಡ್‌ಗಳಿಗಾಗಿ ಮಾತ್ರ ಧರಿಸಲಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರು ಬಳೆ ಧರಿಸುತ್ತಾರೆ. ಆದ್ರೆ ಮಹಿಳೆಯರು ಬಳೆ ಯಾಕೆ ಧರಿಸುತ್ತಾರೆ ಗೊತ್ತಾ? ಇಲ್ಲಿದೆ ನೋಡಿ ಕಾರಣ.

First published:

  • 17

    Bangles: ಮಹಿಳೆಯರು ಬಳೆ ಧರಿಸೋದು ಏಕೆ? ಇಲ್ಲಿದೆ ವೈಜ್ಞಾನಿಕ ಕಾರಣ

    ಭಾರತದಲ್ಲಿ ಮಹಿಳೆಯರು ಧರಿಸುವ ಬಳೆಗಳಿಗೆ ಕಾರಣಗಳಿವೆ. ಬಳೆ ಹಾಕಿಕೊಳ್ಳಲು ಇರುವ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಆ ಕಾರಣಗಳು ಏನು ಎಂಬುದನ್ನು ನೋಡೋಣ ಬನ್ನಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bangles: ಮಹಿಳೆಯರು ಬಳೆ ಧರಿಸೋದು ಏಕೆ? ಇಲ್ಲಿದೆ ವೈಜ್ಞಾನಿಕ ಕಾರಣ

    ಬಳೆಗಳನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬಳೆ ಧರಿಸೋದರಿಂದ ಪತಿ-ಪತ್ನಿ ನಡುವಿನ ಸಂಬಂಧ ಚೆನ್ನಾಗಿರುತ್ತದೆ. ಬಳೆ ಧರಿಸುವ ಮಹಿಳೆ ಮೇಲೆ ದೇವರ ಆಶೀರ್ವಾದ ಇರುತ್ತೆ ಎಂದು ಹೇಳಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bangles: ಮಹಿಳೆಯರು ಬಳೆ ಧರಿಸೋದು ಏಕೆ? ಇಲ್ಲಿದೆ ವೈಜ್ಞಾನಿಕ ಕಾರಣ

    ಆಲ್ ಇಂಡಿಯಾ ರೌಂಡ್ ಅಪ್ ಮತ್ತು ಸೈನ್ಸ್ ಬಿಹೈಂಡ್ ಇಂಡಿಯನ್ ಕಲ್ಚರ್ ವೆಬ್‌ಸೈಟ್‌ನ ವರದಿಯ ಪ್ರಕಾರ, ಬಳೆಗಳನ್ನು ಧರಿಸಲು ಹಲವು ವೈಜ್ಞಾನಿಕ ಕಾರಣಗಳಿವೆ. ಬಳೆಗಳು ಮಣಿಕಟ್ಟಿನ ಮೇಲೆ ಹಾಕುವದರಿಂದ ಇವುಗಳ ಘರ್ಷಣೆಯಿಂದಾಗಿ ರಕ್ತದ ಹರಿವು ಸುಗಮವಾಗುತ್ತದೆ. ಪುರಾತನ ಕಾಲದಲ್ಲಿ ಪುರುಷರು ಸಹ ತಮ್ಮ ಕೈಗಳಿಗೆ ಬಳೆಗಳನ್ನು ಧರಿಸಲು ಇದೂ ಒಂದು ಕಾರಣವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bangles: ಮಹಿಳೆಯರು ಬಳೆ ಧರಿಸೋದು ಏಕೆ? ಇಲ್ಲಿದೆ ವೈಜ್ಞಾನಿಕ ಕಾರಣ

    ವಿಶೇಷ ಪೂಜೆ ಸಂದರ್ಭದಲ್ಲಿ ದೇವತೆಗಳಿಗೆ ಬಳೆಗಳನ್ನು ಅರ್ಪಿಸಲಾಗುತ್ತದೆ. ಮದುವೆ ಮತ್ತು ಸೀಮಂತದ ಸಂದರ್ಭದಲ್ಲಿ ಬಳೆಗಳಿಗೆ ಪ್ರಮುಖ ಸ್ಥಾನ ನೀಡಲಾಗುತ್ತದೆ. ಗರ್ಭಣಿ ಬಳೆ ಹಾಕುವುದರಿಂದ ಮಗುವಿನ ಮೆದುಳಿನ ಜೀವಕೋಶಗಳು ಸಕ್ರಿಯಗೊಳ್ಳಲು ಪ್ರಾರಂಭಿಸುತ್ತವೆ. ಬಳೆಗಳ ಸದ್ದು ಮಗು ಶಬ್ಧ ಗುರುತಿಸಲು ಆರಂಭಿಸುತ್ತದೆ. (ಸಾಂದರ್ಭಿಕ ಚಿತ್ರ)‘

    MORE
    GALLERIES

  • 57

    Bangles: ಮಹಿಳೆಯರು ಬಳೆ ಧರಿಸೋದು ಏಕೆ? ಇಲ್ಲಿದೆ ವೈಜ್ಞಾನಿಕ ಕಾರಣ

    ಬಣ್ಣ ಬಣ್ಣದ ಬಳೆಗಳು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಕಣ್ಣುಗಳಿಗೆ ವಿಶ್ರಾಂತಿ ನೀಡುತ್ತವೆ. ಮಹಿಳೆಯರು ಧರಿಸುವ ಬಣ್ಣದ ಬಳೆಗಳು ಹಲವು ಕಾರಣಗಳನ್ನು ಹೊಂದಿವೆ. ಹಸಿರು ಶಾಂತಿ, ಕೆಂಪು ಕೆಟ್ಟ ಶಕ್ತಿಯನ್ನು ತೆಗೆದು ಹಾಕಲು ಬಳಸಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bangles: ಮಹಿಳೆಯರು ಬಳೆ ಧರಿಸೋದು ಏಕೆ? ಇಲ್ಲಿದೆ ವೈಜ್ಞಾನಿಕ ಕಾರಣ

    ಗಾಜಿನ ಬಳೆಗಳ ನಾದ ನಕಾರಾತ್ಮಕ ಶಕ್ತಿಯನ್ನು ಹೊಡೆದು ಹಾಕುತ್ತದೆ. ಬಳೆಗಳ ಸದ್ದು ದುಷ್ಟ ಶಕ್ತಿಗಳು ಮಹಿಳೆಯರ ಸಮೀಪ ಬರದಂತೆ ನೋಡಿಕೊಳ್ಳುತ್ತವೆ ಎಂದು ಹೇಳುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bangles: ಮಹಿಳೆಯರು ಬಳೆ ಧರಿಸೋದು ಏಕೆ? ಇಲ್ಲಿದೆ ವೈಜ್ಞಾನಿಕ ಕಾರಣ

    ಇನ್ನು ಕೆಲವರು ಚಿನ್ನ ಮತ್ತು ಬೆಳ್ಳಿಯ ಬಳೆಗಳನ್ನು ಧರಿಸಿದರೆ ಆರೋಗ್ಯ ಸುಧಾರಿಸುತ್ತದೆ ಎನ್ನುತ್ತಾರೆ. ಚಿನ್ನ ಮತ್ತು ಬೆಳ್ಳಿಯಂತಹ ವಸ್ತುಗಳು ಚರ್ಮವನ್ನು ಸ್ಪರ್ಶಿಸುವ ಮೇಲೆ ತಮ್ಮ ಪರಿಣಾಮವನ್ನು ಬೀರುತ್ತವೆ ಮತ್ತು ಅವು ದೇಹವನ್ನು ಚೈತನ್ಯಗೊಳಿಸುತ್ತವೆ. ಈ ಕಾರಣಕ್ಕಾಗಿ, ಮಹಿಳೆಯರು ಇತರ ರೀತಿಯ ಆಭರಣಗಳನ್ನು ಧರಿಸುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES