ನವ ದಂಪತಿಗಳ ಕೋಣೆಯನ್ನು ಅಲಂಕರಿಸುವ ಸಂಪ್ರದಾಯವನ್ನು ಹೆಚ್ಚಿನ ಜನರು ಅನುಸರಿಸುತ್ತಾರೆ, ಆದರೆ ವಧು-ವರರ ಕೋಣೆಯನ್ನು ಹೂವಿನಿಂದ ಏಕೆ ಅಲಂಕರಿಸಲಾಗುತ್ತದೆ ಎಂಬ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿದೆ. ಇನ್ನೂ ಅದೆಷ್ಟೋ ಮಂದಿಗೆ ಗೊತ್ತಿಲ್ಲ. ಮದುವೆಯ ನಂತರ ಪತಿಯೊಂದಿಗೆ ಮೊದಲ ರಾತ್ರಿ ನಿಸ್ಸಂದೇಹವಾಗಿ ವಿಶೇಷವಾಗಿದೆ. ಆದರೆ ಆ ರಾತ್ರಿ ಹೂವುಗಳ ಪಾತ್ರವೇನು? ಅದನ್ನು ಹಾಸಿಗೆ ಮೇಲೆ ಹಾಕುವ ಹಿಂದಿನ ನಿಜವಾದ ಕಾರಣವನ್ನು ಇಂದು ನಾವು ನಿಮಗೆ ಹೇಳಲಿದ್ದೇವೆ.
ಹೊಸ ಜೀವನದ ಆರಂಭವು ಹೂವಿನಂತೆ ಸುಂದರವಾಗಿರುತ್ತದೆ ಎಂದು ನಂಬಲಾಗಿದೆ. ಮೊದಲ ದಿನವೇ ಮನೆಯ ವಾತಾವರಣವನ್ನು ರೋಮ್ಯಾಂಟಿಕ್ ಆಗಿ ಮಾಡಲು ಹೀಗೆ ಮಾಡಲಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಹಾಗಾಗಿ ಹೆಚ್ಚಾಗಿ ಫಸ್ಟ್ ನೈಟ್ ಕೋಣೆಯಲ್ಲಿ ಸಿಹಿತಿಂಡಿಗಳ ಜೊತೆಗೆ ಹೂಗಳನ್ನು ಇಡುತ್ತಾರೆ. ಅಲ್ಲದೇ ಕೋಣೆಯನ್ನು ಹೂಗಳಿಂದ ಅಲಂಕರಿಸುವುದರಿಂದ ವಧು-ವರರ ಜೀವನಕ್ಕೆ ಮಾಧುರ್ಯ ಸಿಗುತ್ತದೆ ಎಂಬುದು ಜನರ ನಂಬಿಕೆಯಾಗಿದೆ.