Rama Navami 2023: ರಾಮ ನವಮಿಯಂದು ಪಾನಕ, ಮಜ್ಜಿಗೆ ಏಕೆ ಕುಡಿಯಬೇಕು?

ಶ್ರೀರಾಮನು ಜನಿಸಿದ ದಿನದಂದು ರಾಮನವಮಿ ಹಬ್ಬವನ್ನು ಆಚರಿಸಲಾಗುತ್ತದೆ. ರಾಮನನ್ನು ಮಹಾವಿಷ್ಣುವಿನ ಏಳನೇ ಅವತಾರ ಎನ್ನಲಾಗುತ್ತದೆ.

First published:

  • 18

    Rama Navami 2023: ರಾಮ ನವಮಿಯಂದು ಪಾನಕ, ಮಜ್ಜಿಗೆ ಏಕೆ ಕುಡಿಯಬೇಕು?

    ಶ್ರೀರಾಮನು ಉತ್ತರ ಭಾರತದ ಅಯೋಧ್ಯೆಯಲ್ಲಿ ಸೂರ್ಯವಂಶಿ ಇಕ್ಷವಾಕು ವಂಶಕ್ಕೆ ಸೇರಿದವರು. ಈ ದಿನವು ತ್ರೇತಾ ಯುಗದಲ್ಲಿ ರಾಜ ದಶರಥ ಮತ್ತು ಅವರ ಮೊದಲ ಪತ್ನಿ, ರಾಣಿ ಕೌಶಲ್ಯೆಗೆ ಜನಿಸಿದ ಶ್ರೀರಾಮನ ಜನ್ಮದಿನವನ್ನು ಸೂಚಿಸುತ್ತದೆ.

    MORE
    GALLERIES

  • 28

    Rama Navami 2023: ರಾಮ ನವಮಿಯಂದು ಪಾನಕ, ಮಜ್ಜಿಗೆ ಏಕೆ ಕುಡಿಯಬೇಕು?

    ಶ್ರೀರಾಮನು ಜನಿಸಿದ ದಿನದಂದು ರಾಮನವಮಿ ಹಬ್ಬವನ್ನು ಆಚರಿಸಲಾಗುತ್ತದೆ. ರಾಮನನ್ನು ಮಹಾವಿಷ್ಣುವಿನ ಏಳನೇ ಅವತಾರ ಎನ್ನಲಾಗುತ್ತದೆ.

    MORE
    GALLERIES

  • 38

    Rama Navami 2023: ರಾಮ ನವಮಿಯಂದು ಪಾನಕ, ಮಜ್ಜಿಗೆ ಏಕೆ ಕುಡಿಯಬೇಕು?

    ಅನೇಕ ಕಡೆಗಳಲ್ಲಿ ಚೈತ್ರ ಮಾಸದ ಪ್ರತಿಪಾದದಿಂದ ಒಂಭತ್ತು ದಿನಗಳವರೆಗೆ ರಾಮನವಮಿ ಉತ್ಸವವು ನಡೆಯುತ್ತದೆ. ಈ ದಿನ ರಾಮನನ್ನ ಪೂಜಿಸಿದರೆ ಕಷ್ಟ ಕಾರ್ಪಣ್ಯಗಳು ಮಾಯವಾಗುತ್ತದೆ. ಶ್ರೀರಾಮನವಮಿ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಹಬ್ಬ.

    MORE
    GALLERIES

  • 48

    Rama Navami 2023: ರಾಮ ನವಮಿಯಂದು ಪಾನಕ, ಮಜ್ಜಿಗೆ ಏಕೆ ಕುಡಿಯಬೇಕು?

    ಅಮಾವಾಸ್ಯೆಯ ಕ್ಯಾಲೆಂಡರ್ ಪ್ರಕಾರ ಹಿಂದೂ ಹೊಸ ವರ್ಷದ ಮೊದಲ ದಿನದಂದು (ಪ್ರತಿಪಾದ ತಿಥಿ) ಪ್ರಾರಂಭವಾಗುವ ತಾಯಿ ದುರ್ಗೆಗೆ ಸಮರ್ಪಿತವಾದ ಚೈತ್ರ ನವರಾತ್ರಿಯು ರಾಮ ನವಮಿಯೊಂದಿಗೆ ಕೊನೆಗೊಳ್ಳುತ್ತದೆ.

    MORE
    GALLERIES

  • 58

    Rama Navami 2023: ರಾಮ ನವಮಿಯಂದು ಪಾನಕ, ಮಜ್ಜಿಗೆ ಏಕೆ ಕುಡಿಯಬೇಕು?

    ಪುರಾಣಗಳ ಪ್ರಕಾರ ಈ ದಿನದಂದು ರಾಮನಿಗೆ ಬೆಲ್ಲದ ಪಾನಕ , ಮಜ್ಜಿಗೆ ಹಾಗೂ ಹೆಸರು ಬೇಳೆ ನೈವೇದ್ಯ ನೀಡಿದರೆ ಆತ ಸಂತೃಪ್ತನಾಗುತ್ತಾನೆ. ಹಾಗಾಗಿ ಭಕ್ತಾದಿಗಳು ವಿಶೇಷವಾಗಿ ಪಾನಕ ಮತ್ತು ಕೋಸಂಬರಿ ನೈವೇದ್ಯ ಮಾಡುತ್ತಾರೆ. ಅಲ್ಲದೇ ಶ್ರೀರಾಮನ ಭಕ್ತರು ಸಾರ್ವಜನಿಕರಿಗೆ ಪಾನಕ, ಕೋಸಂಬರಿ, ನೀರು ಮಜ್ಜಿಗೆಯನ್ನು ವಿತರಿಸುತ್ತಾರೆ.

    MORE
    GALLERIES

  • 68

    Rama Navami 2023: ರಾಮ ನವಮಿಯಂದು ಪಾನಕ, ಮಜ್ಜಿಗೆ ಏಕೆ ಕುಡಿಯಬೇಕು?

    ಇನ್ನು ಬೇಸಿಗೆಯ ಚೈತ್ರಮಾಸ ಅತ್ಯಂತ ಉಷ್ಣಾಂಶದಿಂದ ಕೂಡಿರುತ್ತದೆ. ಹಾಗಾಗಿ ಈ ವೇಳೆ ತಣ್ಣನೆಯ ಬೆಲ್ಲದ ಪಾನಕ ಸೇವನೆ ಮಾಡುವುದರಿಂದ ಆರೋಗ್ಯ ಹಾಗೂ ಆಯಸ್ಸ ಅಭಿವೃದ್ದಿ ಆಗುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

    MORE
    GALLERIES

  • 78

    Rama Navami 2023: ರಾಮ ನವಮಿಯಂದು ಪಾನಕ, ಮಜ್ಜಿಗೆ ಏಕೆ ಕುಡಿಯಬೇಕು?

    ದಶರಥನ ನಾಲ್ವರು ಮಕ್ಕಳ ಪೈಕಿ ಶ್ರೀರಾಮನು ಹಿರಿಯ ಪುತ್ರ. ಹಾಗೂ ತನ್ನ ಒಡಹುಟ್ಟಿದವರ ಪೈಕಿ ರಾಮ ಉಳಿದವರಿಗಿಂತ ದುರಾಸೆ, ದ್ವೇಷ ಮತ್ತು ದುಶ್ಚಟಗಳಿಲ್ಲದ ಆದರ್ಶ ಮಾನವನ ಪ್ರತಿರೂಪ ಎಂದೇ ಹೇಳಲಾಗುತ್ತದೆ.

    MORE
    GALLERIES

  • 88

    Rama Navami 2023: ರಾಮ ನವಮಿಯಂದು ಪಾನಕ, ಮಜ್ಜಿಗೆ ಏಕೆ ಕುಡಿಯಬೇಕು?

    ಆದ್ದರಿಂದ, ಶ್ರೀರಾಮನು ಎಲ್ಲರೂ ಸಂತೋಷಪಡುವ ಮತ್ತು ಸಂತೃಪ್ತರಾಗಿರುವ ರಾಜ್ಯವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು. ಆದ್ದರಿಂದ, ಇದನ್ನು ರಾಮರಾಜ್ಯ ಎಂದು ಕರೆಯಲಾಗುತ್ತದೆ. ಈಗಲೂ ಸಹ ರಾಮನ ಆಡಳಿತದ ಸೂಚಕವಾಗಿ ಅಥವಾ ಶ್ರೀರಾಮನ ಆಡಳಿತದ ಶೈಲಿ ಅನ್ನು ರಾಮರಾಜ್ಯ ಎಂಬ ರೂಪಕವಾಗಿ ಬಳಸಲಾಗುತ್ತದೆ.

    MORE
    GALLERIES