ಮುಖ್ಯವಾಗಿ ಒಬ್ಬ ಮನುಷ್ಯ ಆರೋಗ್ಯವಾಗಿರಬೇಕೆಂದರೆ ಏನೇನೋ ಸಾಹಸಗಳನ್ನು ಮಾಡುತ್ತಾರೆ. ಕೆಲವರು ಆಹಾರಗಳಲ್ಲಿ, ದೈಹಿಕವಾಗಿ ಕೆಲಸಗಳನ್ನು ಮಾಡುವ ಮೂಲಕ ತನ್ನ ಆರೋಗ್ಯವನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಾರೆ. ಇನ್ನು ನಮ್ಮ ಹೊಟ್ಟೆಯಲ್ಲಿ ಏನಾದರು ಗ್ಯಾಸ್, ನೋವು ಈ ರೀತಿಯ ಸಮಸ್ಯೆಗಳಾದಾಗ ನಮ್ಮ ದೈಹಿಕ ಚಟುವಟಿಕೆಗಳಲ್ಲಿ ಏನಾದರೊಂದು ಸಮಸ್ಯೆ ಬರುತ್ತದೆ. ಅದರಲ್ಲೂ ಫಾರ್ಟಿಂಗ್ ಅಥವಾ ಹೂಸು ಬಿಡುತ್ತಾರೆ.
ಹೂಸು ಬರುವುದು ಸಹಜ. ಆದರೆ ಇದನ್ನೂ ಜನ ಮಾತ್ರ ಅಸಹಜವಾಗಿ ತೆಗೆದುಕೊಳ್ಳುತ್ತಾರೆ. ಹೂಸು ಬಂದರೆ ಜೀವ ಬಾಯಿಗೆ ಬಂದಂತೆ ನಾಚಿಕೆ ಪಡುತ್ತಾರೆ. ಒಬ್ಬ ಕಳ್ಳ ಬೇಕಾದರೂ ತಾನೂ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡು ಬಿಡುತ್ತಾನೆ. ಆದರೆ ಹೂಸು ಬಿಟ್ಟವರು ಮಾತ್ರ ಎಲ್ಲರ ಮುಂದೆ ಸತ್ಯ ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ. ಆದರೆ ಹೆಚ್ಚಿನವರಿಗೆ ತಾವು ಬಿಡುವಂತಹ ಊಸು ಅಥವಾ ಫಾರ್ಟ್ ಬಿಸಿಯಾಗಿರುತ್ತದೆ ಎಂಬುದೇ ಗೊತ್ತಿಲ್ಲ.
ದೇಹದ ತಾಪಮಾನದ ಬದಲಾವಣೆಯ ಕಾರಣ, ಅದರ ಧ್ವನಿಯೂ ಭಿನ್ನವಾಗಿರುತ್ತದೆ ಎಮದು ಹೇಳಿದ್ದಾರೆ. ಪ್ರೊಫೆಸರ್ ಲಿಸಾ ಅವರು ಫಾರ್ಟಿಂಗ್ ನಮ್ಮ ದೇಹದ ಒಂದು ಪ್ರಮುಖ ಕಾರ್ಯವಾಗಿದೆ ಆದರೆ ಜನರು ಮಾತ್ರ ಅದನ್ನು ಅಸಹ್ಯವಾಗಿ ನೋಡುತ್ತಾರೆ ಎಂದು ಹೇಳಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿ ದಿನಕ್ಕೆ ಐದರಿಂದ ಹದಿನೈದು ಬಾರಿ ಫಾರ್ಟ್ ಮಾಡುತ್ತಾನೆ. ಆದರೆ ಅದರ ಧ್ವನಿ ಮತ್ತು ತಾಪಮಾನವು ಪ್ರತಿ ಬಾರಿಯೂ ವಿಭಿನ್ನವಾಗಿರುತ್ತದೆ