ದಿನನಿತ್ಯದ ಜೀವನದಲ್ಲಿ ಜನರು ಹಲವು ವಿಷಯಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಕೆಮ್ಮು, ನೆಗಡಿ ಅಂತಹ ಲಕ್ಷಣಗಳು ಕಾಣಿಸಿಕೊಂಡಾಗಲೂ ಜನರು ನಿರ್ಲಕ್ಷ್ಯ ಮಾಡುತ್ತಾರೆ. (ಸಾಂದರ್ಭಿಕ ಚಿತ್ರ) ಗುಣಮಟ್ಟದ ಆಹಾರದ ಪದ್ಧತಿ ಮತ್ತು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಜನರು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಆದಾಗಿಯೂ ಹೊಟ್ಟೆಯಲ್ಲಿ ಗ್ಯಾಸ್ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತೇವೆ. (ಸಾಂದರ್ಭಿಕ ಚಿತ್ರ) ಆಹಾರದಲ್ಲಿಯ ವ್ಯತ್ಯಾಸದಿಂದಾಗಿ ಕೆಲವೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಗ್ಯಾಸ್ ಹೋಗುತ್ತದೆ. ಇದನ್ನು ಹೇಳಿಕೊಳ್ಳಲು ಜನರು ಹಿಂದೇಟು ಹಾಕುತ್ತಾರೆ. ಈ ಹೊರಸೂಸುವ ಹೂಸು ಬಿಸಿಯಾಗಿರುತ್ತೆ ಎಂಬ ವಿಷಯ ಬಹುತೇಕರಿಗೆ ಗೊತ್ತಿರಲ್ಲ. (ಸಾಂದರ್ಭಿಕ ಚಿತ್ರ) ಹೂಸು ಏಕೆ ಬಿಸಿಯಾಗಿರುತ್ತೆ ಎಂಬ ವಿಷಯ ಹೆಚ್ಚಿನ ಜನರಿಗೆ ತಿಳಿದಿರಲ್ಲ. ಆದ್ರೆ ಪ್ರಾಧ್ಯಾಪಕರೊಬ್ಬರು ಈ ಬಗ್ಗೆ ಅಧ್ಯಯನ ನಡೆಸಿ ಹೂಸು ಬಿಸಿಯಾಗಿರಲು ಕಾರಣ ಏನು ಎಂಬುದನ್ನು ಕಂಡು ಹಿಡಿದಿದ್ದಾರೆ. (ಸಾಂದರ್ಭಿಕ ಚಿತ್ರ) NYU ಲ್ಯಾಂಗೋನ್ ಹೆಲ್ತ್ನಲ್ಲಿ ಗ್ಯಾಸ್ಟ್ರೋಎಂಟರಾಲಜಿಯ ಪ್ರಾಧ್ಯಾಪಕರಾದ ಲಿಸಾ ಗಂಜು, ಹೂಸು ಏಕೆ ಬಿಸಿಯಾಗಿರುತ್ತೆ ಎಂಬುದನ್ನು ತಿಳಿಸಿದ್ದಾರೆ. ದೇಹದಿಂದ ಹೊರ ಬರುವ ಗ್ಯಾಸ್ ಪ್ರತಿಬಾರಿಯೂ ವಿಭಿನ್ನವಾಗಿರುತ್ತದೆ. ದೇಹದ ಉಷ್ಣತೆಯ ಬದಲಾವಣೆಯಿಂದಾಗಿ ಹೂಸು ಹೊರಗೆ ಹೋಗುವಾಗ ಅದರ ಧ್ವನಿಯೂ ಬದಲಾಗುತ್ತದೆ. ಒಬ್ಬ ವ್ಯಕ್ತಿ ದಿನಕ್ಕೆ 5ರಿಂದ 15 ಬಾರಿ ಹೂಡು ಬಿಡುತ್ತಾನೆ. (ಸಾಂದರ್ಭಿಕ ಚಿತ್ರ) ಬಿಸಿ ಏಕೆ?: ಮನುಷ್ಯನ ದೇಹದ ಉಷ್ಣತೆಯು ಅವನ ಹೂಸಿನ ತಾಪಮಾನವನ್ನು ನಿಯಂತ್ರಿಸುತ್ತದೆ ಎಂದು ಪ್ರಾಧ್ಯಾಪಕರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಮಾನವ ದೇಹದ ಉಷ್ಣತೆಯನ್ನು ಅವಲಂಬಿಸಿ, ಹೂಸು ಬಿಸಿಯಾಗುತ್ತದೆ.(ಸಾಂದರ್ಭಿಕ ಚಿತ್ರ) ಕೆಲವೊಮ್ಮೆ ನಮ್ಮ ಆಹಾರ ಪದ್ಧತಿ ಹೊಟ್ಟೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆ ಸಂದರ್ಭದಲ್ಲಿ ಗ್ಯಾಸ್, ಎದೆಯುರಿ ಮುಂತಾದ ಹಲವು ಸಮಸ್ಯೆಗಳು ಎದುರಾಗುತ್ತವೆ. ಈ ಸಮಯದಲ್ಲಿ ನಮ್ಮ ದೇಹವು ಬೆಚ್ಚಗಿರುತ್ತದೆ. ಫಾರ್ಟ್ಗಳು ಬಿಸಿಯಾಗಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)