ಇದಲ್ಲದೆ, ದೇಹದ ವಾಸನೆಗೆ ಹಲವಾರು ಕಾರಣಗಳಿರಬಹುದು. ಮೆಡಿಕಲ್ ನ್ಯೂಸ್ ಟುಡೇ ವರದಿಯ ಪ್ರಕಾರ, ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾಗಳು ಬೆವರಿನೊಳಗಿನ ಪ್ರೊಟೀನ್ ಅಣುಗಳನ್ನು ಒಡೆಯುವಾಗ, ದೇಹದ ದುರ್ವಾಸನೆ ಬರಲು ಪ್ರಾರಂಭಿಸುತ್ತದೆ. ಇದು ಸಾಮಾನ್ಯ ಸಮಸ್ಯೆಯಾಗಿದ್ದರೂ, ಕೆಲವೊಮ್ಮೆ ಇದು ರೋಗವನ್ನು ಸೂಚಿಸುತ್ತದೆ.