ಮಹಿಳೆಯರಿಗೆ ತಲೆಸುತ್ತು ಬಂದರೆ, ಗಂಭೀರವಾಗಿ ತೆಗೆದುಕೊಳ್ಳಬೇಡಿ. ಒಮ್ಮೊಮ್ಮೆ ಹೀಗೆ ಬಂದರೆ ಚಿಂತೆಯಿಲ್ಲ. ಆದರೆ ಆಗಾಗ ತಲೆಸುತ್ತು ಬರುತ್ತಿದ್ದರೆ ಎಚ್ಚರದಿಂದಿರಬೇಕು. ತಲೆಸುತ್ತು ಬಂದಾಗ ಪಕ್ಕಕ್ಕೆ ಬಿದ್ದಂತೆ ಭಾಸವಾಗುತ್ತದೆ. ಸಮತೋಲನವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಸರಿಯಾಗಿ ನಡೆಯಲು ಆಗುವುದಿಲ್ಲ, ಸರಿಯಾಗಿ ಕುಳಿತುಕೊಳ್ಳಲು ಆಗುವುದಿಲ್ಲ. ನೀವು ಏನು ಮಾಡಬೇಕೆಂದು ಬಯಸುತ್ತೀರೋ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ. ಕುಳಿತುಕೊಂಡಿದ್ದಾಗ ಇದ್ದಕ್ಕಿದ್ದಂತೆ ಥಟ್ಟನೆ ಎದ್ದಾಗ ತಲೆ ಸುತ್ತುವ ಅನುಭವವಾಗುತ್ತದೆ. ಅಷ್ಟಕ್ಕೂ ಅದಕ್ಕೆ ಕಾರಣಗಳೇನು ಎಂಬುವುದನ್ನು ತಿಳಿದುಕೊಳ್ಳೋಣ ಬನ್ನಿ.