ಇದಾದ ಬಳಿಕ ಪ್ರತಿ ವರ್ಷ ಯುಎನ್ ಮಹಿಳಾ ದಿನಾಚರಣೆಗೆ ಹೊಸ ಥೀಮ್ ಅನ್ನು ಪರಿಚಯಿಸುತ್ತದೆ. ಈ ವೇಳೆ ಮಹಿಳೆಯರ ಸಾಧನೆಗಳ ಬಗ್ಗೆ ಮಾತನಾಡುವುದಲ್ಲದೇ, ಲಿಂಗ ತಾರತಮ್ಯ, ಸಮಾನತೆಯ ಗುರಿ, ಮಹಿಳೆಯರ ಹಕ್ಕುಗಳು ಇತ್ಯಾದಿಗಳ ಬಗ್ಗೆಯೂ ಈ ದಿನ ಜಾಗೃತಿ ಮೂಡಿಸಲಾಗುತ್ತದೆ. ಮಹಿಳಾ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ವಿವಿಧ ಮಹಿಳಾ ಸಂಘಟನೆಗಳು ಈ ದಿನದಂದು ನಿಧಿ ಸಂಗ್ರಹಿಸುತ್ತಿವೆ.
2023 ಥೀಮ್: ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಯುಎನ್ ಥೀಮ್ "ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ" ಎಂದು ಘೋಷಿಸಿದೆ. ಮಹಿಳೆಯರ ಸ್ಥಿತಿಗತಿ (CSW-67) ಆಯೋಗದ ಮುಂಬರುವ 67 ನೇ ಅಧಿವೇಶನದ ಆದ್ಯತೆಯ ಥೀಮ್ನೊಂದಿಗೆ ಈ ಥೀಮ್ ಅನ್ನು ಹೊಂದಿಸಲಾಗಿದೆ. "ಲಿಂಗ ಸಮಾನತೆ ಮತ್ತು ಎಲ್ಲಾ ಮಹಿಳೆಯರು ಮತ್ತು ಹುಡುಗಿಯರ ಸಬಲೀಕರಣಕ್ಕಾಗಿ ಡಿಜಿಟಲ್ ಯುಗದಲ್ಲಿ ನಾವೀನ್ಯತೆ ಮತ್ತು ತಾಂತ್ರಿಕ ಬದಲಾವಣೆ ಮತ್ತು ಶಿಕ್ಷಣ" ಎನ್ನುವುದಾಗಿದೆ.