ಬೇಸಿಗೆ ವೇಳೆ ಬಿಸಿಲು ಹೆಚ್ಚಾಗಿರುತ್ತದೆ. ಶಾಖವು ಕೂಡ ತೀವ್ರವಾಗಿರುತ್ತದೆ. ಬಿಸಿಲು ಹೆಚ್ಚಾದರೆ ದೇಹದಲ್ಲಿರುವ ನೀರಿನ ಪೋಷಕಾಂಶಗಳೆಲ್ಲವೂ ಶಾಖದಿಂದ ಹೀರಿಕೊಂಡು ಸುಸ್ತು ಉಂಟಾಗುತ್ತದೆ. ಇದರಿಂದ ನೀರಿನಾಂಶದ ಕೊರತೆ ಮಾತ್ರವಲ್ಲ, ಉಪ್ಪಿನಾಂಶದ ಕೊರತೆಯೂ ಉಂಟಾಗುತ್ತದೆ. ಹಾಗಾಗಿ ನಾವು ಸೇವಿಸುವ ಆಹಾರ ಮತ್ತು ತರಕಾರಿಗಳಲ್ಲಿ ನೀರು ಸಮೃದ್ಧವಾಗಿರುವಂತೆ ನೋಡಿಕೊಳ್ಳುವುದು ಉತ್ತಮ. ಅಂತಹ ತರಕಾರಿಗಳು ಯಾವುವು ಎಂಬುದರ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾವು ಇಂದು ನಿಮಗೆ ನೀಡುತ್ತಿದ್ದೇವೆ.
ಸೊರೆಕಾಯಿ: ಸೊರೆಕಾಯಿಯು ಬೇಸಿಗೆಯ ತರಕಾರಿಯಾಗಿದ್ದು, ಇದರಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಈ ಹಣ್ಣು ದೇಹಕ್ಕೆ ಹಲವಾರು ಪ್ರಯೋಜನಗಳನ್ನು
ನೀಡುತ್ತದೆ. ಸೊರೆಕಾಯಿಯಲ್ಲಿ ಸುಮಾರು 96 ಪ್ರತಿಶತದಷ್ಟು ನೀರಿನ ಅಂಶವಿದೆ. ಹೀಗಾಗಿ, ಇದು ದೇಹಕ್ಕೆ ಸಾಕಷ್ಟು ನೀರನ್ನು ಒದಗಿಸುವ ಮೂಲಕ ನಮ್ಮ ದೇಹವನ್ನು ತಂಪಾಗಿ ಮತ್ತು ತಾಜಾವಾಗಿಡಲು ಸಹಾಯ ಮಾಡುತ್ತದೆ. ಈ ತರಕಾರಿ ದೇಹದ ಶುಷ್ಕತೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ ದೃಷ್ಟಿಯನ್ನು ಚುರುಕುಗೊಳಿಸುತ್ತದೆ.