ಉದಯಪುರ: ಉದಯಪುರಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಸೆಪ್ಟೆಂಬರ್ ಮತ್ತು ಮಾರ್ಚ್ ತಿಂಗಳ ನಡುವೆ. ಉದಯಪುರದಲ್ಲಿ ಹವಾಮಾನ ಪರಿಸ್ಥಿತಿಗಳ ಮಾಸಿಕದಲ್ಲಿ ಬದಲಾವಣೆಗಳು ಆಗ್ತಾ ಇರುತ್ತವೆ. ಇದರಿಂದ ನೀವು ಯಾವಾಗ ಹೋಗಬೇಕೆಂದು ಯೋಜಿಸಬಹುದು. ನವೆಂಬರ್ನಿಂದ ಫೆಬ್ರವರಿ ಈ ತಿಂಗಳುಗಳು ಉದಯಪುರದಲ್ಲಿ ಚಳಿಗಾಲದ ಹವಮಾನ ಇರುತ್ತದೆ. ಇದು ಬ್ರಿಟಿಷ್ ಆಡಳಿತಗಾರ ಜೇಮ್ಸ್ ಟೋಡ್ ಅವರು ಭಾರತ ಖಂಡದ ಅತ್ಯಂತ ಪ್ರೀತಿಯ ತಾಣವೆಂದು ಹೇಳಿದ್ದಾರೆ. ಇಲ್ಲಿ ಪಿಚೋಲಾ ಎಂಬ ಸರೋವರದ ದಂಡೆಯಲ್ಲಿ ಊಟವನ್ನು ಮಾಡುವುದೇ ವಿಶೇಷವಾಗಿದೆ.
ಮನಾಲಿ: ಹಿಮಾಚಲ ಪ್ರದೇಶದಲ್ಲಿರು ಇದಂತೂ ಹನಿಮೂನ್ ಪ್ಲೇಸ್ ಅಂತಾನೆ ಫೇಮಸ್. ಆದರೆ, ಸಿಂಗಲ್ ಟ್ರಿಪ್ ಹೋಗಿ ನೋಡಿ. ಅದರ ಮಜಾನೇ ಬೇರೆ. ಮನಾಲಿ ಹೋಗಬೇಕು ಅಂತ ಅದೆಷ್ಟೋ ಜನರ ಕನಸು ಆಗಿರುತ್ತೆ. ಟ್ರಕ್ಕಿಂಗ್ ಪ್ಲೇಸ್ ಈ ಮನಾಲಿ. ಇಲ್ಲಿ ದೇವದಾರು ಮರಗಳು, ಅಂಕುಡೊಂಕಾದ ರಸ್ತೆಗಳು ಜೊತೆಗೆ ಭಾರೀ ಹಿಮಪಾತವನ್ನು ಹೊಂದಿದೆ. ಇವುಗಳ ಜೊತೆಗೆ ನಾನಾರೀತಿಯ ಐಸ್ಗೇಮ್ಸ್ಗಳೂ ಇರುತ್ತವೆ.
ಔಲಿ: ಈ ಸ್ಥಳವಂತೂ ಎಂದಿಗೂ ಹಚ್ಚ ಹಸಿರಿನ ನಡುವೆ ಕಣಿವೆಗಳನ್ನು ಹೊಂದಿದೆ. ಹೆಚ್ಚಾಗಿ ಚಳಿಗಾಲದಲ್ಲಿ ಪ್ರವಾಸವನ್ನು ಯೋಜಿಸುವುದು ಒಳಿತು. ಪಟ್ಟಣವಾದ ಔಲಿ ಭಾರತದ ಪ್ರಮುಖ ಸ್ಕೀ ರೆಸಾರ್ಟ್ ತಾಣವಾಗಿದೆ. ಮೂಲತಃ ಅರೆಸೈನಿಕ ನೆಲೆಯಾಗಿ ಅಭಿವೃದ್ಧಿಪಡಿಸಲಾಗಿದೆ, ಔಲಿಯ ಸ್ಕೀಯಿಂಗ್ ಇಳಿಜಾರುಗಳು ಪ್ರವಾಸಿಗರು ಮತ್ತು ವೃತ್ತಿಪರರಲ್ಲಿ ಜನಪ್ರಿಯವಾಗಿವೆ. ಚಳಿಗಾಲದಲ್ಲಿ, ಔಲಿ ಹಲವಾರು ಹಿಮ ಸಾಹಸ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.