ಹಣ್ಣುಗಳು. ಥರ್ಮೋಜೆನಿಕ್ ಗುಣಲಕ್ಷಣಗಳು ಎಲ್ಲಾ ರೀತಿಯ ಹಣ್ಣುಗಳು ಮತ್ತು ತರಕಾರಿಗಳಲ್ಲಿದೆ. ಇದು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಈ ಪರಿಣಾಮ ಕಡಿಮೆ ಮಾಡಲು ಮೊದಲು ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿಟ್ಟು ತಿನ್ನಿ. ಇದು ಹಣ್ಣಿನ ಮೇಲಿನ ಪದರದಲ್ಲಿ ಸಂಗ್ರಹವಾದ ಬ್ಯಾಕ್ಟೀರಿಯಾ ತೆಗೆದು ಹಾಕುತ್ತದೆ. ನೆನೆಸಿದ ಹಣ್ಣುಗಳ ಸೇವನೆಯು ಜೀರ್ಣಕ್ರಿಯೆಗೆ ಪ್ರಯೋಜನಕಾರಿ ಆಗಿದೆ. ಚರ್ಮವು ಆರೋಗ್ಯವಾಗಿರುತ್ತದೆ.
ಬೀಜಗಳು. ಹೆಚ್ಚಿನ ಬೀಜಗಳು ಕಿಣ್ವ ಪ್ರತಿರೋಧಕ ಹೊಂದಿದೆ. ಈ ಬೀಜಗಳನ್ನು ಆಹಾರದಲ್ಲಿ ಸೇರಿಸುವ ಮೊದಲು ನೆನೆಸಿಟ್ಟು ತಿನ್ನಬೇಕು. ಬೀಜಗಳನ್ನು ಬಿಸಿ ನೀರಿನಲ್ಲಿ ನೆನೆಸಿಟ್ಟರೆ ಪ್ರತಿರೋಧಕಗಳು ತಟಸ್ಥವಾಗುತ್ತವೆ. ಬೀಜಗಳನ್ನು ನೆನೆಸಿದರೆ ಬೀಜಗಳಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳ ಗುಣಮಟ್ಟ ಹೆಚ್ಚಾಗುತ್ತದೆ. ಬೀಜಗಳಲ್ಲಿ ಗ್ಲುಟನ್ ಮತ್ತು ಪ್ರೋಟೀನ್ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ.
ಅಕ್ಕಿಯನ್ನು ನೆನೆಸಿಟ್ಟು ತಿನ್ನೋದು ಆರೋಗ್ಯಕರ. ಅಕ್ಕಿಯನ್ನು ನೀರಿನಲ್ಲಿ ನೆನೆಸಿದರೆ ಅದರಲ್ಲಿರುವ ಆರ್ಸೆನಿಕ್ ನ ಪರಿಣಾಮ ಕಡಿಮೆಯಾಗುತ್ತದೆ. ದೇಹದಲ್ಲಿ ಹೆಚ್ಚುತ್ತಿರುವ ಆರ್ಸೆನಿಕ್ ಪ್ರಮಾಣವು ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ಅಕ್ಕಿಯನ್ನು ನೆನೆಸಿದರೆ ವಿಟಮಿನ್ ಮತ್ತು ಮಿನರಲ್ ಗಳ ಗುಣಮಟ್ಟ ಹೆಚ್ಚುತ್ತದೆ. ದೇಹವು ಅವುಗಳನ್ನು ಸಂಪೂರ್ಣವಾಗಿ ಹೀರಿಕೊಳ್ಳಲು ಸಹಕಾರಿ. ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ.