ಅದೆಷ್ಟೋ ಜನರು ತಾವು ದಪ್ಪ ಇದ್ದೇವೆ ಅಂತ ಸಖತ್ ಡಯೆಟ್ ಮಾಡ್ತಾ ಇರ್ತಾರೆ. ಆದ್ರೆ, ಏನೇ ಮಾಡಿದ್ರೂ ಕೂಡ ತೂಕ ಇಳಿತಾ ಇರೋಲ್ಲ. ಹಾಗಾದ್ರೆ ಇಷ್ಟೆನಾ ನಮ್ ಜೀವ್ನ ಅಂತ ಅಂದುಕೊಂಡವರಿಗೆ ಭರವಸೆಯ ಲೇಖನವನ್ನು ನಾವು ಇಂದು ನಿಮಗೆ ಕೊಡ್ತಾ ಇದ್ದೀವಿ.
2/ 8
ಎಸ್, ಯಾವೆಲ್ಲಾ ಆಹಾರಗಳನ್ನು ಸೇವಿಸಿದರೆ ಹೆಲ್ದಿಯಾಗಿ ಸಣ್ಣ ಆಗಬಹುದು ಅಂತ ತಿಳಿಯೋಣ ಬನ್ನಿ. ಈ ಆಹಾರಗಳನ್ನು ಬೆಳಗಿನ ಸಮಯದಲ್ಲಿ ಸೇವನೆ ಮಾಡುವುದರಿಂದ ನಮ್ಮ ದೇಹ ಫಿಟ್ ಆಗಿರುತ್ತದೆ ಮತ್ತು ಅಷ್ಟೇ ಆರೋಗ್ಯಕರವಾಗಿ ಕೂಡ ಇರುತ್ತದೆ.
3/ 8
ಓಟ್ ಮೀಲ್: ಇದಂತು ಬೆಳಗ್ಗಿನ ಉಪಹಾರಕ್ಕೆ ಹೇಳಿ ಮಾಡಿಸಿದ ಡಯೆಟ್ ಫುಡ್. ದೇಹಕ್ಕೆ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್ ಸಿಗುತ್ತದೆ ಜೊತೆಗೆ ಅತ್ಯುತ್ತಮ ನಾರಿನ ಅಂಶ ಸಿಗುವ ಜೊತೆಗೆ ಹೃದಯದ ಕಾಯಿಲೆಗಳು ಕಡಿಮೆಯಾಗುತ್ತವೆ.
4/ 8
ಚಿಯಾ ಬೀಜಗಳು: ಹೊಟ್ಟೆಯ ಒಳಪದರದಲ್ಲಿ ಒಂದು ರಸವನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ನಿಮ್ಮ ಬೊಜ್ಜು ಈಸಿಯಾಗಿ ಕರಗಲು ಸಹಾಯ ಮಾಡುತ್ತದೆ. ನಿಮ್ಮ ತೂಕವನ್ನು ನಿಯಂತ್ರಣ ಮಾಡಲು ಇದೊಂದು ಬೆಸ್ಟ್ ಆಹಾರ.
5/ 8
ಕ್ವಿನೊವಾ: ಈ ಆಹಾರವು ತುಂಬಾ ಹೊತ್ತು ಹಸಿವು ಆಗದೇ ಇರಲು ಸಹಾಯ ಮಾಡುತ್ತದೆ. ಹಾಗೆಯೇ ನಿಮ್ಮ ಜೀರ್ಣ ಶಕ್ತಿಯನ್ನು ಚೆನ್ನಾಗಿ ವೃದ್ಧಿಸುತ್ತದೆ. ಹಸಿವು ಹೆಚ್ಚು ಮಾಡಿಸದೆ ಆರೋಗ್ಯವಂತಾಗಿ ಇರಿಸಲು ಕ್ವಿನೊವಾ ಸಹಕರಿಸುತ್ತದೆ. ಇದು ಬೆಳಗ್ಗಿನ ಟಿಫನ್ಗೆ ಉತ್ತಮವಾಗಿದೆ.
6/ 8
ವಾಲ್ನಟ್ ಬೀಜಗಳು: ಆಂಟಿ ಇಂಪ್ಲಮೇಟರಿ ಗುಣಲಕ್ಷಣಗಳನ್ನು ಕೊಡುವ ಜೊತೆಗೆ ಪಾಲಿಫಿನಾಲ್ ಅಂಶಗಳು ಸಹ ದೇಹಕ್ಕೆ ಇವುಗಳಿಂದ ಸಿಗುತ್ತವೆ. ಇದು ನಮ್ಮ ದೇಹದಲ್ಲಿನ ರಕ್ತ ಪರಿಚಲನವನ್ನು ಸರಾಗಗೊಳಿಸುತ್ತದೆ. ಹಾಗೆಯೇ ಪರಿಶುದ್ಧಗೊಳಿಸುತ್ತದೆ.
7/ 8
ಪೀನಟ್ ಬಟರ್: ಇದನ್ನು ಬ್ರೆಡ್ ಜೊತೆಗೆ ತಿಂದರೆ ದಪ್ಪ ಆಗುತ್ತೀರ. ಅದುವೇ ನೀವು ಇದ್ನು ಬೆಳಗ್ಗೆ ವರ್ಕ್ ಔಟ್ ಮಾಡಿ ಪೀನಟ್ ಬಟರ್ ತಿಂದ್ರೆ ಸಣ್ಣ ಆಗುತ್ತೀರ ಅಂತ ಸಂಶೋಧನೆಗಳಲ್ಲಿ ತಿಳಿಸಲಾಗಿದೆ.
8/ 8
ನಿಮ್ಮ ಬೆಳಗಿನ ತಿಂಡಿ ಮತ್ತು ಉಪಹಾರಗಳಲ್ಲಿ ದಾಲ್ಚಿನ್ನಿ, ಅರಿಶಿನ, ಶುಂಠಿ, ಕಾಳು ಮೆಣಸು, ಗ್ರೀನ್ ಟೀ, ಗ್ರೀನ್ ಕಾಫಿ, ಕೊಕೊನಟ್ ಆಯಿಲ್ ಇತ್ಯಾದಿಗಳನ್ನು ಸೇವಿಸಿ. ಏಕೆಂದರೆ ಇವೆಲ್ಲವೂ ಆರೋಗ್ಯಕರ ಆಹಾರ ಪದಾರ್ಥಗಳು ಮತ್ತು ಇವುಗಳಿಂದ ಯಾವುದೇ ರೀತಿಯ ಆರೋಗ್ಯಕ್ಕೆ ಅಡ್ಡ ಪರಿಣಾಮ ಗಳು ಕಡಿಮೆ ಇರುತ್ತವೆ.