Adaptogenic Herbs: ಅಡಾಪ್ಟೋಜೆನಿಕ್ ಗಿಡಮೂಲಿಕೆಗಳು ಎಂದರೇನು? ಇದರಿಂದ ಏನೆಲ್ಲಾ ಲಾಭಗಳಿದೆ ಗೊತ್ತಾ?

ದೈನಂದಿನ ಜೀವನಶೈಲಿಯಲ್ಲಿ ಅಡಾಪ್ಟೋಜೆನಿಕ್ ಗಿಡಮೂಲಿಕೆ ಸೇರಿಸುವುದು, ಹಲವು ಆರೋಗ್ಯ ಅಸ್ವಸ್ಥತೆ ಪರಿಸ್ಥಿತಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಡಾಪ್ಟೋಜೆನಿಕ್ ಗಿಡಮೂಲಿಕೆಗಳು ಒತ್ತಡ ನಿಭಾಯಿಸಲು ಸಹಾಯ ಮಾಡುತ್ತವೆ. ಇದು ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಮತ್ತು ಅನೇಕ ರೀತಿಯ ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ.

First published:

  • 18

    Adaptogenic Herbs: ಅಡಾಪ್ಟೋಜೆನಿಕ್ ಗಿಡಮೂಲಿಕೆಗಳು ಎಂದರೇನು? ಇದರಿಂದ ಏನೆಲ್ಲಾ ಲಾಭಗಳಿದೆ ಗೊತ್ತಾ?

    ಆಯುರ್ವೇದವು ಹಲವು ಗಿಡಮೂಲಿಕೆಗಳಿಂದ ಜನರಿಗೆ ಚಿಕಿತ್ಸೆ ನೀಡುತ್ತದೆ. ಅದರಲ್ಲಿ ಅಡಾಪ್ಟೋಜೆನಿಕ್ ಗಿಡಮೂಲಿಕೆಗಳಿಂದ ಜನರಿಗೆ ಚಿಕಿತ್ಸೆ ನೀಡುವುದು ದೀರ್ಘಕಾಲದ ಒಂದು ಭಾಗವಾಗಿದೆ. ಅನೇಕ ಸಮಸ್ಯೆಗಳು ಮತ್ತು ಅನೇಕ ರೋಗಗಳ ವಿರುದ್ಧ ಹೋರಾಡಲು ಈ ಅಡಾಪ್ಟೋಜೆನಿಕ್ ಗಿಡಮೂಲಿಕೆಗಳನ್ನು ಬಳಕೆ ಮಾಡಲಾಗುತ್ತದೆ. ಅಡಾಪ್ಟೋಜೆನಿಕ್ ಗಿಡಮೂಲಿಕೆಗಳು ಉತ್ತಮ ಗುಣಲಕ್ಷಣ ಹೊಂದಿವೆ. ಇದು ಅನೇಕ ಸಮಸ್ಯೆಗಳ ನಿವಾರಣೆಗೆ ಸಹಕಾರಿ.

    MORE
    GALLERIES

  • 28

    Adaptogenic Herbs: ಅಡಾಪ್ಟೋಜೆನಿಕ್ ಗಿಡಮೂಲಿಕೆಗಳು ಎಂದರೇನು? ಇದರಿಂದ ಏನೆಲ್ಲಾ ಲಾಭಗಳಿದೆ ಗೊತ್ತಾ?

    ದೈನಂದಿನ ಜೀವನಶೈಲಿಯಲ್ಲಿ ಅಡಾಪ್ಟೋಜೆನಿಕ್ ಗಿಡಮೂಲಿಕೆ ಸೇರಿಸುವುದು, ಹಲವು ಆರೋಗ್ಯ ಅಸ್ವಸ್ಥತೆ ಪರಿಸ್ಥಿತಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಡಾಪ್ಟೋಜೆನಿಕ್ ಗಿಡಮೂಲಿಕೆಗಳು ಒತ್ತಡ ನಿಭಾಯಿಸಲು ಸಹಾಯ ಮಾಡುತ್ತವೆ. ಇದು ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಮತ್ತು ಅನೇಕ ರೀತಿಯ ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 38

    Adaptogenic Herbs: ಅಡಾಪ್ಟೋಜೆನಿಕ್ ಗಿಡಮೂಲಿಕೆಗಳು ಎಂದರೇನು? ಇದರಿಂದ ಏನೆಲ್ಲಾ ಲಾಭಗಳಿದೆ ಗೊತ್ತಾ?

    ಅಡಾಪ್ಟೋಜೆನಿಕ್ ಗಿಡಮೂಲಿಕೆಗಳು ದೇಹವು ಒತ್ತಡವನ್ನು ಉತ್ತಮವಾಗಿ ನಿಭಾಯಿಸಲು ಸಾಕಷ್ಟು ಸಹಾಯ ಮಾಡುತ್ತವೆ. ಅಡಾಪ್ಟೋಜೆನಿಕ್ ಗಿಡಮೂಲಿಕೆಗಳು ಯಾವುವು? ಅಡಾಪ್ಟೋಜೆನಿಕ್ ಕೆಲವು ಸಸ್ಯಗಳು ಮತ್ತು ಅಣಬೆಗಳು ದೇಹವು ಒತ್ತಡ, ಆತಂಕ ಮತ್ತು ಆಯಾಸ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇವು ಒತ್ತಡ ಕಡಿಮೆ ಮಾಡುವ ಸಕ್ರಿಯ ಪದಾರ್ಥ ಹೊಂದಿವೆ. ಅಣಬೆಗಳು ಅಡಾಪ್ಟೋಜೆನಿಕ್ ಕ್ರಿಯೆಗೆ ಸಹಕಾರಿ. ಇದರ ಸೇವನೆ ವಿವಿಧ ರೀತಿಯ ಒತ್ತಡ ನಿಭಾಯಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 48

    Adaptogenic Herbs: ಅಡಾಪ್ಟೋಜೆನಿಕ್ ಗಿಡಮೂಲಿಕೆಗಳು ಎಂದರೇನು? ಇದರಿಂದ ಏನೆಲ್ಲಾ ಲಾಭಗಳಿದೆ ಗೊತ್ತಾ?

    ಅಡಾಪ್ಟೋಜೆನಿಕ್ ಗಿಡಮೂಲಿಕೆಗಳನ್ನು ನಿಗದಿತ ಪ್ರಮಾಣದಲ್ಲಿ ಮಾತ್ರ ತೆಗೆದುಕೊಳ್ಳಬೇಕು. ಅಂದಾಗ ಮಾತ್ರ ಇವು ದೇಹವನ್ನು ಸಮತೋಲನದಲ್ಲಿಡುತ್ತದೆ. ಒತ್ತಡದ ಪರಿಸ್ಥಿತಿಯಲ್ಲಿ ವಿಶ್ರಾಂತಿ ನೀಡುತ್ತವೆ. ಅಶ್ವಗಂಧವು ಒತ್ತಡದ ಪರಿಣಾಮ ಕಡಿಮೆ ಮಾಡುತ್ತದೆ. ದೇಹದ ಕಾರ್ಯ ನಿರ್ವಹಣೆ ಸಮತೋಲನಗೊಳಿಸುತ್ತದೆ. ಬಲಪಡಿಸುತ್ತದೆ. ವಿಶ್ರಾಂತಿ, ಶಾಂತತೆ, ದೇಹದ ಸಮತೋಲನ ಕಾಪಾಡುತ್ತದೆ. ಕೂದಲಿಗೆ ಉತ್ತಮವಾಗಿದೆ.

    MORE
    GALLERIES

  • 58

    Adaptogenic Herbs: ಅಡಾಪ್ಟೋಜೆನಿಕ್ ಗಿಡಮೂಲಿಕೆಗಳು ಎಂದರೇನು? ಇದರಿಂದ ಏನೆಲ್ಲಾ ಲಾಭಗಳಿದೆ ಗೊತ್ತಾ?

    ತುಳಸಿ ಎಲೆಗಳು. ತುಳಸಿ ಎಲೆಗಳು ಹಲವು ಪೋಷಕ ತತ್ವಗಳಿಂದ ಕೂಡಿವೆ. ಇವು ನಂಜುನಿರೋಧಕ, ಉರಿಯೂತದ, ಜೀರ್ಣಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ. ಇದನ್ನು ಚಹಾ, ಕಷಾಯ ಮತ್ತು ಇತರ ಅನೇಕ ಭಕ್ಷ್ಯಗಳ ಜೊತೆ ಸೇವಿಸಬಹುದು. ಇದು ಅಡಾಪ್ಟೋಜೆನಿಕ್ ಮೂಲಿಕೆ. ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತದೆ. ತುಳಸಿ ಎಲೆಗಳು ನಿಮ್ಮ ದೇಹವನ್ನು ಶಾಂತಗೊಳಿಸಲು ಮತ್ತು ಹೊಸ ಶಕ್ತಿ ನೀಡಲು ಸಹಕಾರಿ.

    MORE
    GALLERIES

  • 68

    Adaptogenic Herbs: ಅಡಾಪ್ಟೋಜೆನಿಕ್ ಗಿಡಮೂಲಿಕೆಗಳು ಎಂದರೇನು? ಇದರಿಂದ ಏನೆಲ್ಲಾ ಲಾಭಗಳಿದೆ ಗೊತ್ತಾ?

    ನೆಲ್ಲಿಕಾಯಿ. ಇದು ಸೂಪರ್‌ ಫುಡ್ ಆಗಿದೆ. ಆಯುರ್ವೇದದಲ್ಲಿ ಇದನ್ನು ಅಮಲಕಿ ಎಂದು ಕರೆಯುತ್ತಾರೆ. ಇದು ನೈಸರ್ಗಿಕ ವಿಟಮಿನ್ ಸಿ ಯ ಉತ್ತಮ ಮೂಲ. ಮತ್ತು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಆರೋಗ್ಯವಾಗಿರಿಸುತ್ತದೆ. ಆಮ್ಲಾ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಉತ್ತಮ ಟಾನಿಕ್ ಆಗಿದೆ. ಆಮ್ಲಾ ಸೇವನೆಯು ನಿಮ್ಮ ದೇಹವು ವಿವಿಧ ಸಮಸ್ಯೆ ನಿಭಾಯಿಸಲು ಸಹಕಾರಿ ಆಗಿದೆ.

    MORE
    GALLERIES

  • 78

    Adaptogenic Herbs: ಅಡಾಪ್ಟೋಜೆನಿಕ್ ಗಿಡಮೂಲಿಕೆಗಳು ಎಂದರೇನು? ಇದರಿಂದ ಏನೆಲ್ಲಾ ಲಾಭಗಳಿದೆ ಗೊತ್ತಾ?

    ಶತಾವರಿ. ಆಯುರ್ವೇದದಲ್ಲಿ ಗಿಡಮೂಲಿಕೆ ಸಾಕಷ್ಟು ಪ್ರಯೋಜನಕಾರಿ. ಶತಾವರಿ ಅಡಾಪ್ಟೋಜೆನಿಕ್ ಅನ್ನು ಸ್ತ್ರೀ ಸಂತಾನೋತ್ಪತ್ತಿ ಟಾನಿಕ್ ಆಗಿ ಜನಪ್ರಿಯವಾಗಿ ಬಳಕೆ ಮಾಡಲಾಗುತ್ತದೆ. ಹಾಲುಣಿಸುವ ಮಹಿಳೆಯರಿಗೆ ದೈಹಿಕ ಮತ್ತು ಮಾನಸಿಕ ಒತ್ತಡ ನಿಭಾಯಿಸಲು ಇದು ಒಳ್ಳೆಯದು. ಶತಾವರಿಯು ಅಜೀರ್ಣ, ಜ್ವರ ಮತ್ತು ಗ್ಯಾಸ್ಟ್ರಿಕ್ ಹುಣ್ಣು ಸಮಸ್ಯೆ ತೆಗೆದು ಹಾಕಲು ಸಹಕಾರಿ ಆಗಿದೆ. ಇದನ್ನು ಪುಡಿ, ಟಿಂಚರ್ ಮತ್ತು ಟ್ಯಾಬ್ಲೆಟ್ ರೂಪದಲ್ಲಿ ಸೇವಿಸಬಹುದು.

    MORE
    GALLERIES

  • 88

    Adaptogenic Herbs: ಅಡಾಪ್ಟೋಜೆನಿಕ್ ಗಿಡಮೂಲಿಕೆಗಳು ಎಂದರೇನು? ಇದರಿಂದ ಏನೆಲ್ಲಾ ಲಾಭಗಳಿದೆ ಗೊತ್ತಾ?

    ಬ್ರಾಹ್ಮಿ. ಇದನ್ನ ಸಂಸ್ಕೃತ ಮತ್ತು ಆಯುರ್ವೇದದಲ್ಲಿ ಗೋಟು ಕೋಲ ಎಂದೂ ಕರೆಯುತ್ತಾರೆ. ಬ್ರಾಹ್ಮಿ ಮೆದುಳನ್ನು ಪೋಷಿಸುತ್ತದೆ. ಮೆದುಳು ಮತ್ತು ನರಮಂಡಲದ ಆರೋಗ್ಯ ಕಾಪಾಡಲು ಸಹಕಾರಿ ಆಗಿದೆ. ಮತ್ತು ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬ್ರಾಹ್ಮಿಯ ರಸ, ಪುಡಿ ಅಥವಾ ಕ್ಯಾಪ್ಸುಲ್ ರೂಪದಲ್ಲಿ ನೀವು ಸೇವನೆ ಮಾಡಬಹುದು.

    MORE
    GALLERIES