Gas Cylinder: ಗ್ಯಾಸ್​ ಸಿಲಿಂಡರ್ ಎಲ್ಲಿ ಇಡಬೇಕು? ಇದೇ ಸೇಫ್​ ಜಾಗವಂತೆ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮನೆಗಳಲ್ಲಿ ಅಡುಗೆಗಾಗಿ ಗ್ಯಾಸ್​ ಸಿಲಿಂಡರ್​ ಅನ್ನು ಬಳಸುತ್ತಾರೆ. ಆದರೆ ಅದನ್ನು ಕೆಲವರು ಅಡುಗೆ ಮನೆಯಲ್ಲೇ ಇಟ್ಟಿರುತ್ತಾರೆ. ಇದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಹಾಗಿದ್ರೆ ಗ್ಯಾಸ್​ ಸಿಲಿಂಡರ್ ಇಡಲು ಬೆಸ್ಟ್ ಸ್ಥಳ ಯಾವುದು ಎಂಬುದನ್ನು ಈ ಲೇಖನದಲ್ಲಿದೆ ಓದಿ.

First published:

  • 18

    Gas Cylinder: ಗ್ಯಾಸ್​ ಸಿಲಿಂಡರ್ ಎಲ್ಲಿ ಇಡಬೇಕು? ಇದೇ ಸೇಫ್​ ಜಾಗವಂತೆ

    ಗ್ಯಾಸ್​​ ಸಿಲಿಂಡರ್‌ಗಳು ಮನೆಯಲ್ಲಿ ಎಷ್ಟು ಅಪಾಯಕಾರಿ ವಸ್ತುವೋ, ಅದರಿಂದ ಅಷ್ಟೇ ಉಪಯುಕ್ತ ಸಹ ಇದೆ. ಅನಿಲವು ಹೆಚ್ಚು ಸುಡುವ ವಸ್ತುವಾಗಿರುವುದರಿಂದ, ಅದನ್ನು ಬಳಸುವವರು ತುಂಬಾ ಸುರಕ್ಷಿತವಾಗಿರಬೇಕು.ಇನ್ನು ಇದರಿಂದ ಎಷ್ಟೋ ಅವಘಡಗಳು ಸಹ ಸಂಭವಿಸಿದೆ.

    MORE
    GALLERIES

  • 28

    Gas Cylinder: ಗ್ಯಾಸ್​ ಸಿಲಿಂಡರ್ ಎಲ್ಲಿ ಇಡಬೇಕು? ಇದೇ ಸೇಫ್​ ಜಾಗವಂತೆ

    ಬಾತ್​ರೂಮ್​​ನಲ್ಲಿ ಗ್ಯಾಸ್ ಗೀಸರ್​ಗಾಗಿ ಬಳಸುವ ಸಿಲಿಂಡರ್ ಅನ್ನು ಎಲ್ಲಿ ಇಡಬೇಕು ಎಂಬುದನ್ನು ಹೆಚ್ಚಿನವರು ಹೇಳುತ್ತಾರೆ. ಆದರೆ ಅಡುಗೆಗೆ ಬೇಕಾದ ಗ್ಯಾಸ್ ಸಿಲಿಂಡರ್ ಅನ್ನು ಎಲ್ಲಿ ಇಡಬೇಕು ಎಂಬುದನ್ನು ಹೆಚ್ಚನವರು ತಿಳಿದಿರುವುದಿಲ್ಲ.

    MORE
    GALLERIES

  • 38

    Gas Cylinder: ಗ್ಯಾಸ್​ ಸಿಲಿಂಡರ್ ಎಲ್ಲಿ ಇಡಬೇಕು? ಇದೇ ಸೇಫ್​ ಜಾಗವಂತೆ

    ದೇಶದ ಅನೇಕ ಮನೆಗಳಲ್ಲಿ ಅಡುಗೆಗಾಗಿ ಎಲ್​ಪಿಜಿ ಗ್ಯಾಸ್ ಅನ್ನು ಬಳಸುತ್ತಾರೆ. ಪ್ರತಿ ಮನೆಗೆ ಗ್ಯಾಸ್ ಸಿಲಿಂಡರ್‌ಗಳನ್ನು ತಲುಪಿಸಲು ಸರ್ಕಾರ ಸಹ ಉಜ್ವಲ ಯೋಜನೆಯನ್ನು ಆರಂಭಿಸಿದೆ. ಇದು ಗ್ರಾಮೀಣ LPG ಸಿಲಿಂಡರ್ ಸಂಪರ್ಕಗಳಿಗೆ ಕಾರಣವಾಗಿದೆ.

    MORE
    GALLERIES

  • 48

    Gas Cylinder: ಗ್ಯಾಸ್​ ಸಿಲಿಂಡರ್ ಎಲ್ಲಿ ಇಡಬೇಕು? ಇದೇ ಸೇಫ್​ ಜಾಗವಂತೆ

    ಗ್ಯಾಸ್ ಸಿಲಿಂಡರ್ ಬಳಸುವುದರ ಜೊತೆಗೆ ಅದರಿಂದ ಸುರಕ್ಷತೆ ಪಡೆಯಲು ಕೆಲವು ಪ್ರತಿಯೊಬ್ಬ ಬಳಕೆದಾರನೂ ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು. ಸಿಲಿಂಡರ್‌ಗಳನ್ನು ಒದಗಿಸುವ ಕಂಪನಿಗಳು ಗ್ರಾಹಕರಿಗೆ ಅಂತಹ ಸೂಚನೆಗಳನ್ನು ನೀಡುತ್ತವೆ. ಇದು ಗ್ಯಾಸ್​​ ಸಿಲಿಂಡರ್​ಗಳಿಂದಾಗುವ ಅಪಾಯವನ್ನು ತಪ್ಪಿಸುತ್ತದೆ.

    MORE
    GALLERIES

  • 58

    Gas Cylinder: ಗ್ಯಾಸ್​ ಸಿಲಿಂಡರ್ ಎಲ್ಲಿ ಇಡಬೇಕು? ಇದೇ ಸೇಫ್​ ಜಾಗವಂತೆ

    ಗ್ಯಾಸ್ ಸಿಲಿಂಡರ್ ಎಲ್ಲಿ ಇಡಬೇಕು?: ಹೆಚ್ಚಿನ ಜನರು ತಮ್ಮ ಅಡುಗೆಮನೆಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಹೊಂದಿದ್ದಾರೆ. ಆದರೆ ಈ ಸಿಲಿಂಡರ್ ಅನ್ನು ಅಡುಗೆಮನೆಯಿಂದ ದೂರವಿಟ್ಟರೆ ಉತ್ತಮ. ಸಹಜವಾಗಿ, ಇದು ಎಲ್ಲೆಡೆ ಸಾಧ್ಯವಿಲ್ಲ. ಹಾಗಾಗಿ ಸಿಲಿಂಡರ್ ಅನ್ನು ಗಾಳಿ ಇರುವ ಜಾಗದಲ್ಲಾದರೂ ಇಡಿ. ಇನ್ನು ಸಿಲಿಂಡರ್ ನೇರ ಸೂರ್ಯನ ಬೆಳಕಿನಲ್ಲಿ ಯಾವತ್ತೂ ಇರಬಾರದು.

    MORE
    GALLERIES

  • 68

    Gas Cylinder: ಗ್ಯಾಸ್​ ಸಿಲಿಂಡರ್ ಎಲ್ಲಿ ಇಡಬೇಕು? ಇದೇ ಸೇಫ್​ ಜಾಗವಂತೆ

    ಗ್ಯಾಸ್ ಸಿಲಿಂಡರ್​​ನಿಂದ ಗ್ಯಾಸ್ ಸೋರಿಕೆಯಾದಾಗ ಆ ಗ್ಯಾಸ್ ಒಂದೇ ಸ್ಥಳದಲ್ಲಿ ಉಳಿಯುವುದಿಲ್ಲ. ಇದು ಎಲ್ಲೆಡೆ ಹರಡುತ್ತದೆ. ಅದಕ್ಕಾಗಿಯೇ ಸಿಲಿಂಡರ್ ಅನ್ನು ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಇಡಬೇಕು. ಆದರೆ ವಿದ್ಯುತ್ ಕನೆಕ್ಷನ್ ಇರುವ ಬಳಿ ಇಡಬಾರದು. ಅಲ್ಲದೆ, ಇದು ಟಿವಿ ಅಥವಾ ಇತರ ವಿದ್ಯುತ್ ಉಪಕರಣಗಳ ಬಳಿ ಸಹ ಇರಬಾರದು.

    MORE
    GALLERIES

  • 78

    Gas Cylinder: ಗ್ಯಾಸ್​ ಸಿಲಿಂಡರ್ ಎಲ್ಲಿ ಇಡಬೇಕು? ಇದೇ ಸೇಫ್​ ಜಾಗವಂತೆ

    ಇನ್ನು ನಿಮ್ಮ ಗ್ಯಾಸ್ ಸಿಲಿಂಡರ್‌ನಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ ತಕ್ಷಣವೇ ವಿತರಕರಿಗೆ ವರದಿ ಮಾಡಬೇಕು. ಈ ರೀರಿ ಮಾಡಿದಾಗ ಕಂಪೆನಿ ಸಹ ರಿಪೇರಿಗಾಗಿ ಮೆಕ್ಯಾನಿಕ್ ಅನ್ನು ಕಳುಹಿಸುತ್ತದೆ. ಆದರೆ ಏನಾದರು ಸಮಸ್ಯೆಯಾದಾಗ ನೀವೇ ಎಂದಿಗೂ ಸರಿಮಾಡಲು ಹೋಗಬಾರದು.

    MORE
    GALLERIES

  • 88

    Gas Cylinder: ಗ್ಯಾಸ್​ ಸಿಲಿಂಡರ್ ಎಲ್ಲಿ ಇಡಬೇಕು? ಇದೇ ಸೇಫ್​ ಜಾಗವಂತೆ

    ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಹಲವು ಅಪಘಾತಗಳು ಸಂಭವಿಸಿವೆ. ಅದರಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ. ಈ ಕಾರಣದಿಂದಾಗಿ, ಗ್ಯಾಸ್ ಸಿಲಿಂಡರ್​​ಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ಗ್ಯಾಸ್ ಸಿಲಿಂಡರ್ ಇಡಲು ಸ್ಥಳವನ್ನು ಆರಿಸುವುದರಿಂದ ಹಿಡಿದು ಅದರ ಪೈಪ್​ ಮತ್ತು ನಿಯಂತ್ರಕದವರೆಗೆ ಎಲ್ಲವನ್ನೂ ಪರಿಶೀಲಿಸಬೇಕು.

    MORE
    GALLERIES