Health Tips: ವಯಸ್ಸಿಗೆ ಅನುಗುಣವಾಗಿ ನಿಮ್ಮ ತೂಕ ಎಷ್ಟಿರಬೇಕು? ಆರೋಗ್ಯವಾಗಿರೋಕೆ ಇಷ್ಟು ಕೆಜಿ ಇರಲೇಬೇಕಂತೆ!

Health Tips: ವಯಸ್ಸು, ಎತ್ತರ ಮತ್ತು ಲಿಂಗವನ್ನು ಅವಲಂಬಿಸಿ ತೂಕವು ಕಡಿಮೆ ಅಥವಾ ಹೆಚ್ಚಿರಬಹುದು. ಆದರೆ ಪ್ರತಿ ವಯಸ್ಸಿನವರೂ ಒಂದು ಕನಿಷ್ಠ ತೂಕವನ್ನು ಹೊಂದಿರಲೇಬೇಕು. ಅದರ ಮಾಹಿತಿ ಇಲ್ಲಿದೆ ನೋಡಿ.

First published:

  • 19

    Health Tips: ವಯಸ್ಸಿಗೆ ಅನುಗುಣವಾಗಿ ನಿಮ್ಮ ತೂಕ ಎಷ್ಟಿರಬೇಕು? ಆರೋಗ್ಯವಾಗಿರೋಕೆ ಇಷ್ಟು ಕೆಜಿ ಇರಲೇಬೇಕಂತೆ!

    ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರುತ್ತಾರೆ. ಮಕ್ಕಳು ತಮ್ಮನ್ನು ತಾವು ಸದೃಢವಾಗಿರಿಸಿಕೊಳ್ಳಲು ಚಿಕ್ಕ ವಯಸ್ಸಿನಿಂದಲೇ ಸರಿಯಾದ ಮಾಹಿತಿ ನೀಡುವುದು ಉತ್ತಮ. ಇದರ ಭಾಗವಾಗಿ ಮೊದಲಿಗೆ ತೂಕವನ್ನು ನಿಯಂತ್ರಣದಲ್ಲಿಡುವುದು ಮುಖ್ಯವಾಗಿರುತ್ತದೆ. ಆದರೆ ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾಗಿ ತೂಕ ಎಷ್ಟು ಸರಿ ಎಂಬುದು ಹಲವರಿಗೆ ತಿಳಿದಿಲ್ಲ.

    MORE
    GALLERIES

  • 29

    Health Tips: ವಯಸ್ಸಿಗೆ ಅನುಗುಣವಾಗಿ ನಿಮ್ಮ ತೂಕ ಎಷ್ಟಿರಬೇಕು? ಆರೋಗ್ಯವಾಗಿರೋಕೆ ಇಷ್ಟು ಕೆಜಿ ಇರಲೇಬೇಕಂತೆ!

    ಅಂತಹ ಪರಿಸ್ಥಿತಿಯಲ್ಲಿ, ತೂಕ ಮತ್ತು ವಯಸ್ಸಿನ ಬಗ್ಗೆ ನಿಮಗೆ ಯಾವುದೇ ರೀತಿಯ ಸಂದಿಗ್ಧತೆ ಇದ್ದರೆ, ಈ ಸ್ಟೋರಿ ಮೂಲಕ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ ತಿಳಿದುಕೊಳ್ಳಿ. ಹೌದು, ವೈದ್ಯರ ಪ್ರಕಾರ, ಪ್ರತಿಯೊಬ್ಬರ ದೇಹವು ವಿಭಿನ್ನವಾಗಿರುತ್ತದೆ ಮತ್ತು ಅವರ ತೂಕವು ವಿಭಿನ್ನ ಅಂಶಗಳಿಂದ ನಿರ್ಧರಿಸಲ್ಪಡುತ್ತದೆ. ವಯಸ್ಸು, ಎತ್ತರ ಮತ್ತು ಲಿಂಗದ ಆಧಾರದ ಮೇಲೆ ಈ ಅಂಶಗಳನ್ನು ನಿರ್ಧರಿಸಬಹುದು.

    MORE
    GALLERIES

  • 39

    Health Tips: ವಯಸ್ಸಿಗೆ ಅನುಗುಣವಾಗಿ ನಿಮ್ಮ ತೂಕ ಎಷ್ಟಿರಬೇಕು? ಆರೋಗ್ಯವಾಗಿರೋಕೆ ಇಷ್ಟು ಕೆಜಿ ಇರಲೇಬೇಕಂತೆ!

    ಸರಿಯಾದ ವಯಸ್ಸಿನಲ್ಲಿ ನಿಮ್ಮ ತೂಕವನ್ನು ನಿಯಂತ್ರಿಸದಿದ್ದರೆ, ಅದು ಭವಿಷ್ಯದಲ್ಲಿ ಕೆಲ ರೋಗಗಳಿಗೆ ಕಾರಣವಾಗಬಹುದು ಮತ್ತು ವಯಸ್ಸಿನ ನಂತರ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಸಂಶೋಧಕರು ಹೇಳುತ್ತಾರೆ. ನೀವು ಬಾಡಿ ಮಾಸ್ ಇಂಡೆಕ್ಸ್ ಅನ್ನು ಲೆಕ್ಕ ಹಾಕಲು ಬಯಸಿದರೆ, ನಿಮ್ಮ ಎತ್ತರ ಮತ್ತು ತೂಕದ ಮಾಹಿತಿಯನ್ನು ಆನ್‌ಲೈನ್ ಕ್ಯಾಲ್ಕುಲೇಟರ್ ಸಹಾಯದಿಂದ ನೀವು ಪಡೆಯಬಹುದು.

    MORE
    GALLERIES

  • 49

    Health Tips: ವಯಸ್ಸಿಗೆ ಅನುಗುಣವಾಗಿ ನಿಮ್ಮ ತೂಕ ಎಷ್ಟಿರಬೇಕು? ಆರೋಗ್ಯವಾಗಿರೋಕೆ ಇಷ್ಟು ಕೆಜಿ ಇರಲೇಬೇಕಂತೆ!

    ಇನ್ನು, ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಚಾರ್ಟ್‌ನ ಪ್ರಕಾರ, ಕೆಳಗೆ ನೀಡಲಾದ ಮಾಹಿತಿಯ ಪ್ರಕಾರ ನೀವು ನವಜಾತ ಶಿಶುವಿನಿಂದ 60 ವರ್ಷ ವಯಸ್ಸಿನ ಜನರ ತೂಕ ಎಷ್ಟಿರಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಇದರ ಪ್ರಕಾರ ನಿಮ್ಮ ತೂಕ ಎಷ್ಟಿದೆ ಎಂದು ತಿಳಿದುಕೊಳ್ಳಿ.

    MORE
    GALLERIES

  • 59

    Health Tips: ವಯಸ್ಸಿಗೆ ಅನುಗುಣವಾಗಿ ನಿಮ್ಮ ತೂಕ ಎಷ್ಟಿರಬೇಕು? ಆರೋಗ್ಯವಾಗಿರೋಕೆ ಇಷ್ಟು ಕೆಜಿ ಇರಲೇಬೇಕಂತೆ!

    ನವಜಾತ ಶಿಶು: ಗಂಡು ಮಗುವಿನ ತೂಕ- 3.3 ಕೆಜಿ, ಹೆಣ್ಣು ಮಗುವಿನ ತೂಕ- 3.3 ಕೆಜಿ ಇರಬೇಕು. 2 ರಿಂದ 5 ತಿಂಗಳ: ಗಂಡು ಮಗುವಿನ ತೂಕ- 6 ಕೆಜಿ, ಹೆಣ್ಣು ಮಗುವಿನ ತೂಕ- 5.4 ಕೆಜಿ ಇರಬೇಕು. ಇನ್ನು, 6 ರಿಂದ 8 ತಿಂಗಳ ಗಂಡು ಮಗುವಿನ ತೂಕ - 7.2 ಕೆಜಿ ಹಾಗೂ ಹೆಣ್ಣು ಮಗುವಿನ ತೂಕ - 6.5 ಕೆಜಿ ಇರುವುದು ಉತ್ತಮ ಬೆಳವಣಿಗೆ ಆಗಿದೆ.

    MORE
    GALLERIES

  • 69

    Health Tips: ವಯಸ್ಸಿಗೆ ಅನುಗುಣವಾಗಿ ನಿಮ್ಮ ತೂಕ ಎಷ್ಟಿರಬೇಕು? ಆರೋಗ್ಯವಾಗಿರೋಕೆ ಇಷ್ಟು ಕೆಜಿ ಇರಲೇಬೇಕಂತೆ!

    ಅದೇ ರೀತಿ, 9 ತಿಂಗಳಿಂದ 1 ವರ್ಷದ ಹುಡುಗನ ತೂಕ - 10 ಕೆಜಿ, ಹುಡುಗಿಯ ತೂಕ - 9.50 ಕೆಜಿ ಇರಬೇಕು. 2 ರಿಂದ 5 ವರ್ಷ ವಯಸ್ಸಿನ ಹುಡುಗನ ತೂಕ - 12.5 ಕೆಜಿ ಹಗೂ ಹುಡುಗಿಯ ತೂಕ - 11.8 ಕೆಜಿ ಇರುವುದು ಉತ್ತಮ. ಜೊತೆಗೆ 6 ರಿಂದ 8 ವರ್ಷ ವಯಸ್ಸಿನ ಹುಡುಗನ ತೂಕ - 12 ರಿಂದ 18 ಕೆಜಿ, ಹುಡುಗಿಯ ತೂಕ - 14 ರಿಂದ 17 ಕೆಜಿ ಇರಬೇಕಂತೆ.

    MORE
    GALLERIES

  • 79

    Health Tips: ವಯಸ್ಸಿಗೆ ಅನುಗುಣವಾಗಿ ನಿಮ್ಮ ತೂಕ ಎಷ್ಟಿರಬೇಕು? ಆರೋಗ್ಯವಾಗಿರೋಕೆ ಇಷ್ಟು ಕೆಜಿ ಇರಲೇಬೇಕಂತೆ!

    9 ರಿಂದ 11 ವರ್ಷ ವಯಸ್ಸಿನ ಹುಡುಗನ ತೂಕ - 28 ರಿಂದ 31 ಕೆಜಿ, ಹುಡುಗಿಯ ತೂಕ - 28 ರಿಂದ 31 ಕೆಜಿ. 12 ರಿಂದ 14 ವರ್ಷ ವಯಸ್ಸಿನ ಹುಡುಗನ ತೂಕ - 32 ರಿಂದ 38 ಕೆಜಿ ಹಾಗೂ ಹುಡುಗಿಯ ತೂಕ - 32 ರಿಂದ 36 ಕೆಜಿ. ಅದೇ ರೀತಿ 15 ರಿಂದ 20 ವರ್ಷ ವಯಸ್ಸಿನ ಹುಡುಗನ ತೂಕ - 40 ರಿಂದ 50 ಕೆಜಿ, ಹುಡುಗಿಯ ತೂಕ - 40 ರಿಂದ 45 ಕೆಜಿ ಇರಬೇಕು.

    MORE
    GALLERIES

  • 89

    Health Tips: ವಯಸ್ಸಿಗೆ ಅನುಗುಣವಾಗಿ ನಿಮ್ಮ ತೂಕ ಎಷ್ಟಿರಬೇಕು? ಆರೋಗ್ಯವಾಗಿರೋಕೆ ಇಷ್ಟು ಕೆಜಿ ಇರಲೇಬೇಕಂತೆ!

    21 ರಿಂದ 30 ವರ್ಷ ವಯಸ್ಸಿನ ಹುಡುಗನ ತೂಕ - 60 ರಿಂದ 70 ಕೆಜಿ, ಹುಡುಗಿಯ ತೂಕ - 50 ರಿಂದ 60 ಕೆಜಿ. 30 ರಿಂದ 40 ವರ್ಷ ವಯಸ್ಸಿನ, ಹುಡುಗನ ತೂಕ - 59 ರಿಂದ 75 ಕೆಜಿ, ಹುಡುಗಿಯ ತೂಕ - 60 ರಿಂದ 65 ಕೆಜಿ. 40 ರಿಂದ 50 ವರ್ಷ ಹುಡುಗನ ತೂಕ - 60 ರಿಂದ 70 ಕೆಜಿ ಹಾಗೂ ಹುಡುಗಿಯ ತೂಕ - 59 ರಿಂದ 65 ಕೆಜಿ ಇರಬೇಕು.

    MORE
    GALLERIES

  • 99

    Health Tips: ವಯಸ್ಸಿಗೆ ಅನುಗುಣವಾಗಿ ನಿಮ್ಮ ತೂಕ ಎಷ್ಟಿರಬೇಕು? ಆರೋಗ್ಯವಾಗಿರೋಕೆ ಇಷ್ಟು ಕೆಜಿ ಇರಲೇಬೇಕಂತೆ!

    ಇನ್ನು, 50 ರಿಂದ 60 ವರ್ಷ ವಯಸ್ಸಿನ ಹುಡುಗನ ತೂಕ - 60 ರಿಂದ 70 ಕೆಜಿ, ಹುಡುಗಿಯ ತೂಕ - 59 ರಿಂದ 65 ಕೆಜಿ ಇರುವುದು ಉತ್ತಮ. ನೀವು ಅಧಿಕ ತೂಕ ಅಥವಾ ಕಡಿಮೆ ತೂಕ ಹೊಂದಿದ್ದರೆ, ನೀವು ವೈದ್ಯರನ್ನು ಸಂಪರ್ಕಿಸುವುದು ಒಳಿತು.

    MORE
    GALLERIES