ಸಣ್ಣ ಸಂಬಂಧಗಳು ಆಳವಾದ ಆಪ್ತತೆಗೆ ಕಾರಣ: ಜೀವನದಲ್ಲಿ ಕೆಲವೊಮ್ಮೆ ಚಿಕ್ಕ ಸಂಬಂಧಗಳು ಸಹ ಆಳವಾದ ರಿಲೇಷನ್ ಬಾಂಡಿಗೆಗೆ ಕಾರಣವಾಗಬಹುದು. ಉದಾಹರಣೆಗೆ ಯಾವುದೋ ಪಾರ್ಟಿಯಲ್ಲಿ ನೀವು ಭಾಗವಹಿಸಿದಾಗ, ಅಲ್ಲಿ ಒಬ್ಬ ವ್ಯಕ್ತಿ ನಿಮಗೆ ಇಷ್ಟವಾಗುವ ಬ್ರಾಂಡ್‌ನ ಟಿ-ಶರ್ಟ್ ಧರಿಸಿದಾಗ ಅವರ ಕುರಿತು ನಿಮ್ಮಲ್ಲಿ ಒಂದು ಆಕರ್ಷಣೆ ಬೆಳೆಯುತ್ತದೆ. ಮುಂದೆ ನೀವು ಅವರನ್ನು ನೋಡಿ, ಮಾತನಾಡಿಸಿ, ಅವರ ಬಗ್ಗೆ ವಿಶೇಷ ಪ್ರೀತಿಯನ್ನು ಬೆಳೆಸಿಕೊಳ್ಳಬಹುದು.
ಸಂಶೋಧನೆಯ ಪ್ರಾಧ್ಯಾಪಕರು ಏನ್ ಹೇಳ್ತಿದಾರೆ? ಯೂ ಕ್ಯೂಸ್ಟೋರ್ಮ್ ಸ್ಕೂಲ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಮತ್ತು ಸಂಸ್ಥೆಗಳ ಸಹಾಯಕ ಪ್ರಾಧ್ಯಾಪಕರಾದ ಚಾರ್ಲ್ಸ್ ಚು, ಅವರು ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಮೇಲೆ ಹೇಗೆ ಆಕರ್ಷಿತನಾಗುತ್ತಾನೆ ಅಥವಾ ಒಬ್ಬ ವ್ಯಕ್ತಿಯನ್ನು ನೋಡಿದ ಕೂಡಲೇ ಇಷ್ಟವೇ ಆಗುವುದಿಲ್ಲ ಇದಕ್ಕೆ ಕಾರಣವೇನು? ಅದಕ್ಕೆ ಪ್ರಭಾವ ಬೀರುವ ಅಂಶಗಳೇನು? ಎಂಬುದರ ಬಗ್ಗೆ ಸಂಶೋಧಕರು ಅಧ್ಯಯನದಲ್ಲಿ ಬಹಿರಂಗಪಡಿಸಿದ್ದಾರೆ.
“ನಮ್ಮಂತೆಯೇ ಗುಣಲಕ್ಷಣಗಳನ್ನು ಹೊಂದಿರುವ, ನಮ್ಮ ಆಸಕ್ತಿಗಳು ಅವರಿಗೂ ಇಷ್ಟವಾಗುವ ವ್ಯಕ್ತಿಗಳನ್ನು ಕಂಡಾಗ ನಮ್ಮಲ್ಲಿ ಏನೋ ಒಂದು ರೀತಿಯ ಪ್ರೀತಿಯ ಭಾವನೆ ಬೆಳೆಯುತ್ತದೆ. ಅವರ ಜೊತೆ ಇನ್ನು ಆಳವಾದ ಸಂಬಂಧವನ್ನು ಹೊಂದಬೇಕು ಎಂದು ನಾವು ಬಯಸುತ್ತೆವೆ. ನಮ್ಮ ಮನಸ್ಸು ಕೂಡ ಅದನ್ನೆ ಅಪೇಕ್ಷೆ ಮಾಡುತ್ತದೆ” ಎಂಬುದರ ಬಗ್ಗೆ ಟ್ಯಾನ್‌ಫೋರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಬ್ರಿಯಾನ್ ಎಸ್. ಲೋವರಿ ಅವರು ಸಂಶೋಧನಾ ಕಾಗದವನ್ನು ಪ್ರಕಟಿಸುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ತನ್ನದೇ ಹವ್ಯಾಸ ಹೊಂದಿರುವ ಇತರರ ಮೇಲೆ ಮನುಷ್ಯ ಆಕರ್ಷಿತನಾಗುತ್ತಾನೆ: ಇದರ ಬಗ್ಗೆ ಪ್ರಾದ್ಯಾಪಕರಾದ ಚಾರ್ಲ್ಸ್ ಚು ಅವರು “ ಕೇವಲ ನಮ್ಮಂತೆಯೇ ಒಂದು ಅಥವಾ ಎರಡು ಲಕ್ಷಣಗಳನ್ನು ಹೊಂದಿದ ವ್ಯಕ್ತಿಗಳ ಜೊತೆ ಆಳವಾದ ಸಂಬಂಧವನ್ನು ಹೊಂದಬೇಕು ಎಂಬ ಆಸೆಯೇ ತಪ್ಪು, ಈ ಚಿಂತನೆಯೇ ದೋಷಪೂರಿತವಾಗಿದೆ. ಇದು ಹೇಗೆಂದರೆ ನಾವು ಆ ವ್ಯಕ್ತಿಯನ್ನು ಇಷ್ಟಪಡುವುದಿಲ್ಲ. ಅವರ ಚಿಂತನೆ, ಆಸಕ್ತಿ, ಪುಸ್ತಕ ಹೀಗೆ ಇಂತಹ ಚಿಕ್ಕ ವಿಚಾರಗಳನ್ನು ಇಷ್ಟಪಡುತ್ತಿರುತ್ತೇವೆ. ಅಷ್ಟೇ” ಎಂದು ಚಾರ್ಲ್ಸ್ ಚು ಅವರು ಹೇಳುತ್ತಾರೆ.
"ಮನುಷ್ಯರಾದ ನಾವು ವಿಶಾಲವಾದ ದೃಷ್ಟಿಕೋನ ಹೊಂದಿರುವುದು ತುಂಬಾ ಅಪರೂಪ. ನಾವೆಲ್ಲರೂ ತುಂಬಾ ಸಂಕೀರ್ಣ ವ್ಯಕ್ತಿಗಳಾಗಿರುತ್ತೆವೆ. ಆದರೆ ನಾವು ನಮ್ಮ ಸ್ವಂತ ಆಲೋಚನೆಗಳು ಮತ್ತು ಭಾವನೆಗಳ ಬಗ್ಗೆ ಸಂಪೂರ್ಣವಾದ ಜ್ಞಾನವನ್ನು ಹೊಂದಿರುತ್ತೆವೆ. ಅಂದ್ರೆ ನಮ್ಮ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿರುತ್ತೆ. ಇತರರ ಬಗ್ಗೆ ನಮಗೆ ಅಷ್ಟೊಂದು ತಿಳಿದಿರುವುದಿಲ್ಲ. ಅವರ ಚಿಂತನೆಗಳ ಬಗ್ಗೆಯೂ ಅಷ್ಟೆ. ಯಾವುದೇ ಸ್ಪಷ್ಟತೆ ಇರೋದಿಲ್ಲ. ನಾವು ಬೇರೆ ವ್ಯಕ್ತಿ ಜೊತೆ ಹೇಗೆ ಕನೆಕ್ಟ್ ಆಗುತ್ತೆವೆ ಅಥವಾ ಅವರ ಜೊತೆ ಹೇಗೆ ಶತ್ರುತ್ವ ಮಾಡಿಕೊಳ್ಳುತ್ತೆವೆ. ಎಂಬುದರ ಕುರಿತು ಚು ಅವರ ಅಧ್ಯಯನವು ನಮಗೆ ಮಾಹಿತಿಯನ್ನು ತಿಳಿಸಿಕೊಡುತ್ತದೆ.
ಈ ಅಧ್ಯಯನದಲ್ಲಿ ಪ್ರಮುಖವಾಗಿ ತಿಳಿಯುವುದೇನೆಂದರೆ ಬೇರೆಯವರ ಕುರಿತು ನಾವು ಹೇಗೆ ಆಕರ್ಷಿತರಾಗುತ್ತೆವೆ ಅಥವಾ ಇಲ್ಲ ಎಂಬುದರ ಬಗ್ಗೆ ಚು ಅವರು ನಾಲ್ಕು ಅಧ್ಯಯನಗಳನ್ನು ಸಂಶೋಧನೆಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಈ ಅಧ್ಯಯನಗಳಲ್ಲಿ ವಿವಿಧ ಅಂಶಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಹೀಗೆ ಈ ಅಧ್ಯಯನವು ನಾವು ಇತರರ ಬಗ್ಗೆ ಹೇಗೆ ಆಕರ್ಷಿತರಾಗುತ್ತೇವೆ ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಓದುಗರಿಗೆ ತಿಳಿಸುತ್ತದೆ.