ಬಿಡುವಿಲ್ಲದ ಜೀವನಶೈಲಿಯಿಂದಾಗಿ, ಜನ ತಮ್ಮ ಅನುಕೂಲಕ್ಕೆ ತಕ್ಕಂತೆ ನಿದ್ರೆಯಿಂದ ಎದ್ದೇಳುತ್ತಾರೆ. ಆದರೀಗ ಮತ್ತೊಂದು ದೊಡ್ಡ ಪ್ರಶ್ನೆ ಉದ್ಭವಿಸುತ್ತಿದೆ. ಆರೋಗ್ಯಕರವಾಗಿರಲು ನಿದ್ರೆ ಯಾವಾಗ ಮಾಡಬೇಕು ಮತ್ತು ನಿದ್ರೆಯಿಂದ ಎಚ್ಚರಗೊಳ್ಳಲು ಉತ್ತಮ ಸಮಯ ಯಾವುದು? ಬೇಗ ಮಲಗಿ ಬೇಗ ಏಳುವುದರಿಂದ ಆಗುವ ಪ್ರಯೋಜನಗಳೇನು? ಈ ಎಲ್ಲದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. (ಸಾಂಕೇತಿಕ ಚಿತ್ರ)
ಆರೋಗ್ಯವಾಗಿರಲು ನೀವು ರಾತ್ರಿ ಬೇಗನೆ ಮಲಗಬೇಕು ಮತ್ತು ಬೆಳಗ್ಗೆ ಬೇಗನೆ ಏಳಬೇಕು. ಹೆಲ್ತ್ಲೈನ್ ಪ್ರಕಾರ, ನಾವು ನಿದ್ರೆ ಮಾಡುವುದು ಮತ್ತು ಬೆಳಗ್ಗೆ ಬೇಗ ಎದ್ದೇಳುವುದು ನಮ್ಮ ಜೈವಿಕ ಪ್ರವೃತ್ತಿಗಳೊಂದಿಗೆ ಹೊಂದಿಕೆಯಾಗುತ್ತವೆ. ಸಾಮಾನ್ಯವಾಗಿ ಸೂರ್ಯಾಸ್ತದ ನಂತರ ಜನರು ನಿದ್ರಿಸಬಹುದು. ದೇಹದ ಆಯಾಸವನ್ನು ಹೋಗಲಾಡಿಸಲು ಮತ್ತು ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯ. ಆದರೆ ರಾತ್ರಿ ಮಲಗಲು ಮತ್ತು ಬೆಳಗ್ಗೆ ಏಳಲು ಸರಿಯಾದ ಸಮಯ ಯಾವುದು ಎಂಬುವುದನ್ನು ತಿಳಿದುಕೊಳ್ಳುವುದು ಕೂಡ ಬಹಳ ಮುಖ್ಯವಾಗಿದೆ. (ಸಾಂಕೇತಿಕ ಚಿತ್ರ)
ದೇಹಕ್ಕೆ ಎಷ್ಟು ನಿದ್ರೆ ಬೇಕಾಗುತ್ತದೆ? ಮಾಡಬೇಕು ಮಲಗಲು ಸರಿಯಾದ ಸಮಯವನ್ನು ವಯಸ್ಸಿನ ಆಧಾರದ ಮೇಲೆ ನಿರ್ಧರಿಸಬಹುದು. ಪ್ರತಿ ವ್ಯಕ್ತಿಗೆ 7 ಗಂಟೆಗಳ ನಿದ್ದೆ ಕಡ್ಡಾಯವಾಗಿ ಬೇಕಾಗಿದೆ. ಬಿಡುವಿಲ್ಲದ ಜೀವನಶೈಲಿಯನ್ನು ಹೊಂದಿದ್ದರೂ, ಬೆಳಗ್ಗೆ 6 ಗಂಟೆಗೆ ಎಚ್ಚರಗೊಂಡು ರಾತ್ರಿ 11 ರವರೆಗೆ ಮಲಗುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. (ಸಾಂಕೇತಿಕ ಚಿತ್ರ)
ಪ್ರತಿಯೊಬ್ಬ ವ್ಯಕ್ತಿಯ ದೈಹಿಕ ಚಟುವಟಿಕೆ ಮತ್ತು ವಯಸ್ಸಿಗೆ ಅನುಗುಣವಾಗಿ ನಿದ್ರೆಯ ಅಗತ್ಯವಿದೆ. ಉದಾಹರಣೆಗೆ, 3-12 ತಿಂಗಳ ವಯಸ್ಸಿನ ಮಕ್ಕಳಿಗೆ 12 ರಿಂದ 16 ಗಂಟೆಗಳ ನಿದ್ರೆ ಬೇಕು. 1 ರಿಂದ 5 ವರ್ಷ ವಯಸ್ಸಿನವರಿಗೆ 10 ರಿಂದ 13 ಗಂಟೆಗಳ ನಿದ್ದೆ ಬೇಕು, 9 ರಿಂದ 18 ವರ್ಷ ವಯಸ್ಸಿನವರಿಗೆ 8 ರಿಂದ 10 ಗಂಟೆಗಳು ಮತ್ತು 18 ರಿಂದ 60 ವರ್ಷ ವಯಸ್ಸಿನವರು 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕಾಗುತ್ತದೆ. (ಸಾಂಕೇತಿಕ ಚಿತ್ರ)
ಒಬ್ಬ ವ್ಯಕ್ತಿಗೆ ಹಗಲಿನಲ್ಲಿಯೂ ನಿದ್ರೆ ಬಂದರೆ, ಆತನಿಗೆ ರಾತ್ರಿ ಹೊತ್ತು ಬೇಕಾಗಿರುವಷ್ಟು ನಿದ್ರೆ ಬರುತ್ತಿಲ್ಲ ಎಂಬುವುದಾಗಿದೆ. ನಿದ್ರೆಯ ಕೊರತೆಯು ಕಿರಿಕಿರಿ, ಮರೆವು ಮತ್ತು ಖಿನ್ನತೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದಲ್ಲದೇ ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಬೊಜ್ಜು ಮತ್ತು ಖಿನ್ನತೆಯಂತಹ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. (ಸಾಂಕೇತಿಕ ಚಿತ್ರ)
ಹೆಚ್ಚು ನಿದ್ರೆ ಮಾಡುವುದು ಕೂಡ ಕಡಿಮೆ ನಿದ್ರೆ ಮಾಡುವಷ್ಟೇ ಆರೋಗ್ಯಕ್ಕೆ ಹಾನಿಕಾರಕವಾಗಿದೆ. 7-8 ಗಂಟೆಗಳ ಕಾಲ ನಿದ್ರೆ ಮಾಡಿದ ನಂತರವೂ ನಿದ್ರೆ ಬಂದರೆ, ನೀವು ಖಿನ್ನತೆ, ಕಿರಿಕಿರಿ, ಹೃದ್ರೋಗ, ಆತಂಕ, ನಿದ್ರೆಯಲ್ಲಿ ಉಸಿರುಕಟ್ಟುವಿಕೆ, ಮಧುಮೇಹ, ಬೊಜ್ಜು, ಥೈರಾಯ್ಡ್, ಅಸ್ತಮಾದಿಂದ ಬಳಲುತ್ತಿರಬಹುದು. (ಸಾಂಕೇತಿಕ ಚಿತ್ರ) (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)