Vomit Fruit : ವಾಂತಿ ಹಣ್ಣಿನ ಬಗ್ಗೆ ನಿಮಗೆ ಗೊತ್ತಿದ್ಯಾ? ಇದರ ಜ್ಯೂಸ್ ಕುಡಿಯಲು ಮುಗಿಬೀಳ್ತಿದ್ದಾರಂತೆ ಜನ!

Vomit Fruit : ಒಂದು ಹಣ್ಣಿಗೆ ನೂರು ಹೆಸರಿರುವುದನ್ನು ಕೇಳಿ, ಅದು ನಿಮಗೆ ವಿಚಿತ್ರ ಎನಿಸಬಹುದು. ಆದ್ರೆ ಹಣ್ಣೊಂದಕ್ಕೆ ಇರುವ ಹೆಸರು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಹೌದು, ಆ ಹಣ್ಣಿನ ಹೆಸರು ವಾಂತಿ ಹಣ್ಣು. ಅಷ್ಟಕ್ಕೂ ಈ ಹಣ್ಣನ್ನು ಏಕೆ ವಾಂತಿ ಹಣ್ಣು ಎಂದು ಕರೆಯುತ್ತಾರೆ? ಏನಿದರ ವಿಶೇಷತೆ? ಇದರಲ್ಲೂ ಇದ್ಯಾ ಆರೋಗ್ಯ ಪ್ರಯೋಜನಗಳು? ಈ ಬಗ್ಗೆ ಕಂಪ್ಲೀಟ್ ಮಾಹಿತಿ ಈ ಕೆಳಗಿನಂತಿದೆ ನೋಡಿ.

First published:

 • 17

  Vomit Fruit : ವಾಂತಿ ಹಣ್ಣಿನ ಬಗ್ಗೆ ನಿಮಗೆ ಗೊತ್ತಿದ್ಯಾ? ಇದರ ಜ್ಯೂಸ್ ಕುಡಿಯಲು ಮುಗಿಬೀಳ್ತಿದ್ದಾರಂತೆ ಜನ!

  ಕಾಫಿ ವರ್ಗಕ್ಕೆ ಸೇರಿದ ಮರದ ಹಣ್ಣೊಂದು ಈಗ ಜಗತ್ತಿನಾದ್ಯಂತ ಫೇಮಸ್ ಆಗುತ್ತಿದೆ. ಏಕೆಂದರೆ ಈ ಹಣ್ಣು ಸಾಮಾನ್ಯ ಹಣ್ಣಲ್ಲ. ಫುಲುಗ ಔಷಧೀಯ ಗುಣಗಳನ್ನು ಹೊಂದಿರುವ ಹಣ್ಣು. ಅದಕ್ಕಾಗಿಯೇ ಈ ಹಣ್ಣಿನಿಂದ ಜ್ಯೂಸ್ ತಯಾರಿಸಿ ಆನ್ಲೈನ್ ಇ-ಕಾಮರ್ಸ್ ಸೈಟ್ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಹಣ್ಣಿನಿಂದ ತಯಾರಿಸಿದ 1 ಲೀಟರ್ ಜ್ಯೂಸ್ ಬೆಲೆ ಸುಮಾರು 200 ರೂ. ಆಗಿದೆ. ಈ ಜ್ಯೂಸ್ ಅನ್ನು ಜನರು ಖರೀದಿಸುತ್ತಿದ್ದಾರೆ. ಹಾಗಾದರೆ ಏನಿದರ ವಿಶೇಷತೆ?

  MORE
  GALLERIES

 • 27

  Vomit Fruit : ವಾಂತಿ ಹಣ್ಣಿನ ಬಗ್ಗೆ ನಿಮಗೆ ಗೊತ್ತಿದ್ಯಾ? ಇದರ ಜ್ಯೂಸ್ ಕುಡಿಯಲು ಮುಗಿಬೀಳ್ತಿದ್ದಾರಂತೆ ಜನ!

  ಈ ಹಣ್ಣಿನ ವೈಜ್ಞಾನಿಕ ಹೆಸರು ಮೊರಿಂಡಾ ಸಿಟ್ರಿಫೋಲಿಯಾ. ಈ ಹಣ್ಣನ್ನು ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಹಣ್ಣು 100 ಹೆಸರುಗಳನ್ನು ಹೊಂದಿದೆ. ಇದನ್ನು ಮೊರಿಂಡಾ, ಇಂಡಿಯನ್ ಮಲ್ಬೆರಿ, ನೋನಿ ಹಣ್ಣು, ಬೀಚ್ ಮಲ್ಬೆರಿ, ವಂತಿ ಹಣ್ಣು, ಬೆಣ್ಣೆ ಹಣ್ಣು ಎಂದು ಕರೆಯಲಾಗುತ್ತದೆ.

  MORE
  GALLERIES

 • 37

  Vomit Fruit : ವಾಂತಿ ಹಣ್ಣಿನ ಬಗ್ಗೆ ನಿಮಗೆ ಗೊತ್ತಿದ್ಯಾ? ಇದರ ಜ್ಯೂಸ್ ಕುಡಿಯಲು ಮುಗಿಬೀಳ್ತಿದ್ದಾರಂತೆ ಜನ!

  ಹಣ್ಣು ಕಟುವಾದ, ವಾಂತಿಯಂತಹ ವಾಸನೆಯನ್ನು ಹೊಂದಿರುತ್ತದೆ. ಆದರೆ ಈ ಹಣ್ಣನ್ನು ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಮಾತ್ರೆಗಳು, ಕ್ಯಾಪ್ಸುಲ್ಗಳು, ಚರ್ಮದ ಉತ್ಪನ್ನಗಳು ಮತ್ತು ಜ್ಯೂಸ್ ಅನ್ನು ಈ ಹಣ್ಣಿನಿಂದ ತಯಾರಿಸಲಾಗುತ್ತದೆ.

  MORE
  GALLERIES

 • 47

  Vomit Fruit : ವಾಂತಿ ಹಣ್ಣಿನ ಬಗ್ಗೆ ನಿಮಗೆ ಗೊತ್ತಿದ್ಯಾ? ಇದರ ಜ್ಯೂಸ್ ಕುಡಿಯಲು ಮುಗಿಬೀಳ್ತಿದ್ದಾರಂತೆ ಜನ!

  ನೋನಿ ಹಣ್ಣಿನ ಗಿಡಗಳು 18 ತಿಂಗಳಲ್ಲಿ ಮರಗಳಾಗುತ್ತವೆ. ಅದರ ನಂತರ ಪ್ರತಿ ತಿಂಗಳು 4 ರಿಂದ 8 ಕೆಜಿ ಹಣ್ಣುಗಳನ್ನು ನೀಡುತ್ತದೆ. ಈ ಮರಗಳು 30 ಅಡಿಯಷ್ಟು ಎತ್ತರಕ್ಕೆ ಬೆಳೆಯುತ್ತವೆ. ಇದರ ಎಲೆಗಳು ಕಡು ಹಸಿರು ಬಣ್ಣದಲ್ಲಿರುತ್ತವೆ. ಈ ಮರಗಳು ವರ್ಷವಿಡೀ ಹೂವು ಮತ್ತು ಹಣ್ಣುಗಳನ್ನು ನೀಡುತ್ತವೆ. ಈ ಬೆರ್ರಿ ಮೊದಲಿಗೆ ಹಸಿರು ಬಣ್ಣವನ್ನು ಹೊಂದಿರುತ್ತದೆ. ನಂತರ ಹಳದಿ, ಹಣ್ಣಾದಾಗ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಈ ಹಣ್ಣು ಹೆಚ್ಚು ಬೀಜಗಳನ್ನು ಹೊಂದಿರುತ್ತವೆ.

  MORE
  GALLERIES

 • 57

  Vomit Fruit : ವಾಂತಿ ಹಣ್ಣಿನ ಬಗ್ಗೆ ನಿಮಗೆ ಗೊತ್ತಿದ್ಯಾ? ಇದರ ಜ್ಯೂಸ್ ಕುಡಿಯಲು ಮುಗಿಬೀಳ್ತಿದ್ದಾರಂತೆ ಜನ!

  ಈ ಹಣ್ಣುಗಳನ್ನು ಪ್ರಸ್ತುತ ಜ್ಯೂಸ್ ಪಾನೀಯಗಳು, ಪುಡಿಗಳು, ಲೋಷನ್ಗಳು, ಸಾಬೂನುಗಳು, ಎಣ್ಣೆಗಳು ಮತ್ತು ಔಷಧಿಗಳಲ್ಲಿ ಬಳಸಲಾಗುತ್ತದೆ. ಜೊತೆಗೆ ಈ ಹಣ್ಣುಗಳನ್ನು ತಿನ್ನಬಹುದು ಸಹ. ಬುಡಕಟ್ಟು ಜನರು ಈ ಹಣ್ಣನ್ನು ಹೆಚ್ಚಾಗಿ ತಿನ್ನುತ್ತಾರೆ. ಆದರೆ ಇವುಗಳ ಕಟುವಾದ ವಾಸನೆಯಿಂದ ಈಗ ಅನೇಕ ಮಂದಿ ಈ ಹಣ್ಣನ್ನು ತಿನ್ನುವುದನ್ನು ಬಿಟ್ಟಿದ್ದಾರೆ. ಹೀಗಿದ್ದರೂ ಜ್ಯೂಸ್ಗಳು ಮಾತ್ರ ಆನ್ಲೈನ್ ಭರದಿಂದ ಮಾರಾಟವಾಗುತ್ತಿದೆ. ಈ ಹಣ್ಣುಗಳನ್ನು ತಾಜಾ ಬಣ್ಣಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ.

  MORE
  GALLERIES

 • 67

  Vomit Fruit : ವಾಂತಿ ಹಣ್ಣಿನ ಬಗ್ಗೆ ನಿಮಗೆ ಗೊತ್ತಿದ್ಯಾ? ಇದರ ಜ್ಯೂಸ್ ಕುಡಿಯಲು ಮುಗಿಬೀಳ್ತಿದ್ದಾರಂತೆ ಜನ!

  ಈ ಹಣ್ಣುಗಳು ಆಹಾರದ ಫೈಬರ್, ಕಾರ್ಬೋಹೈಡ್ರೇಟ್ಗಳು, ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುತ್ತವೆ. ಅಲ್ಲದೇ, ವಿಟಮಿನ್ ಸಿ, ನಿಯಾಸಿನ್ (ವಿಟಮಿನ್ ಬಿ3), ಪೊಟ್ಯಾಶಿಯಂ, ವಿಟಮಿನ್ ಎ, ಕ್ಯಾಲ್ಸಿಯಂ, ಸೋಡಿಯಂ ಅಂಶ ಕೂಡ ಈ ಹಣ್ಣಿನಲ್ಲಿದೆ. ಫೈಟೊಕೆಮಿಕಲ್ಸ್ ಆಗಿರುವ ಲಿಗ್ನಾನ್ಸ್, ಒಲಿಗೋಗಳನ್ನು ಸಹ ಒಳಗೊಂಡಿದೆ. ಇವುಗಳ ಜೊತೆಗೆ ಪಾಲಿಸ್ಯಾಕರೈಡ್ಗಳು, ಫ್ಲೇವನಾಯ್ಡ್ಗಳು, ಇರಿಡಾಯ್ಡ್ಗಳು, ಕೊಬ್ಬಿನಾಮ್ಲಗಳು, ಸ್ಕೋಪೊಲೆಟಿನ್, ಕ್ಯಾಟೆಚಿನ್, ಬೀಟಾ-ಸಿಟೊಸ್ಟೆರಾಲ್, ಡಮ್ನಾಕಾಂಥಲ್, ಆಲ್ಕಲಾಯ್ಡ್ಗಳು ಕೂಡ ಇದರಲ್ಲಿದೆ.

  MORE
  GALLERIES

 • 77

  Vomit Fruit : ವಾಂತಿ ಹಣ್ಣಿನ ಬಗ್ಗೆ ನಿಮಗೆ ಗೊತ್ತಿದ್ಯಾ? ಇದರ ಜ್ಯೂಸ್ ಕುಡಿಯಲು ಮುಗಿಬೀಳ್ತಿದ್ದಾರಂತೆ ಜನ!

  ಈ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶಾಖವನ್ನು ಕಡಿಮೆ ಮಾಡಿ ಮತ್ತು ತಣ್ಣಗಾಗಿಸಿ, ಕೀಲು ನೋವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಅಧಿಕ ತೂಕವನ್ನು ಇಳಿಸಿಕೊಳ್ಳಲು ಸಹಾಯಕವಾಗಿದೆ. ಇದು ಹೃದಯಕ್ಕೆ ಒಳ್ಳೆಯದು. ಚರ್ಮವನ್ನು ರಕ್ಷಿಸುತ್ತದೆ. ಸುಕ್ಕುಗಳನ್ನು ತಡೆಯುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಈ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಆಳವಾದ ಸಂಶೋಧನೆ ನಡೆಸಲಾಗುತ್ತಿದೆ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆಗಳು ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

  MORE
  GALLERIES