Christmas 2022: ಪ್ಲಮ್ ಕೇಕ್ ಇಲ್ಲದೇ ಕ್ರಿಸ್ಮಸ್ ಇಲ್ಲ ಯಾಕೆ ಗೊತ್ತಾ? ಇಲ್ಲಿದೆ ನೋಡಿ ಇದರ ಹಿಂದಿನ ಇಂಟರೆಸ್ಟಿಂಗ್ ಕಹಾನಿ
Significance of Christmas Plum Cake: ಕ್ರಿಸ್ಮಸ್ ಬಂತೆಂದರೆ ಸಾಕು ಪ್ರಪಂಚದಾದ್ಯಂತ ಪ್ಲಮ್ ಕೇಕ್ಗಳಿಗೆ ಬೇಡಿಕೆ ಹೆಚ್ಚುತ್ತದೆ. ಈ ಕೇಕ್ ಹಬ್ಬದ ಆಚರಣೆಗಳಲ್ಲಿ ಅತ್ಯಗತ್ಯವಾಗಿರುತ್ತದೆ. ಅಷ್ಟಕ್ಕೂ ಕ್ರಿಸ್ಮಸ್ ಸಮಯದಲ್ಲಿ ಈ ಕೇಕ್ ಏಕೆ ಮುಖ್ಯ ಎನ್ನುವ ಬಗ್ಗೆ ನ್ಯಾವ್ಯಾರೂ ಯೋಚನೆ ಮಾಡಿರುವುದಿಲ್ಲ. ಈ ಪ್ಲಮ್ ಕೇಕ್ ಪ್ರಾಮುಖ್ಯತೆ ಇಲ್ಲಿದೆ.
ಪ್ಲಮ್ ಕೇಕ್ ಎಂದರೆ ಎಲ್ಲರಿಗೂ ಬಹಳ ಇಷ್ಟ. ಕ್ರಿಸ್ಮಸ್ ಬಂದಾಗ ಈ ಕೇಕ್ ತಿನ್ನಲು ಕಾತುರದಿಂದ ಕಾಯುತ್ತಿರುತ್ತಾರೆ. ಈ ಆಕರ್ಷಕ ಕೇಕ್ ಹಿಂದೆ ದೊಡ್ಡ ಇತಿಹಾಸವಿದೆ. ಮಧ್ಯಕಾಲೀನ ಇಂಗ್ಲೆಂಡ್ನಲ್ಲಿ, ಕ್ರಿಸ್ಮಸ್ಗೆ ಮೊದಲು, ಜನರು ಉಪವಾಸ ಮಾಡುತ್ತಿದ್ದರು. ಉಪವಾಸದ ನಂತರ ಹೆಚ್ಚು ಆಹಾರ ಸೇವನೆ ಮಾಡುತ್ತಿದ್ದರು. ಅಲ್ಲಿಂದ ಶುರುವಾಗುತ್ತದೆ ಈ ಕೇಕ್ ಕಥೆ.
2/ 8
ಈ ಪ್ಲಮ್ ಕೇಕ್ ಅನ್ನು ಓಟ್ಸ್, ಡ್ರೈ ಫ್ರೂಟ್ಸ್, ವಿವಿಧ ಮಸಾಲೆಗಳು ಮತ್ತು ಜೇನುತುಪ್ಪದಿಂದ ತಯಾರಿಸಲಾಗುತ್ತದೆ. ಮೊದಲು ಈ ಕೇಕ್ ಅನ್ನು ಸಾಂಟಾ ಕ್ಲಾಸ್ ಕೇಕ್ ಎಂದು ಕರೆಯಲಾಯಿತು. ನಂತರ, ಇದು ಪ್ಲಮ್ ಕೇಕ್ ಎಂದು ಹೆಸರಿಟ್ಟರು.ಈಗ ಅದಕ್ಕೆ ಅನೇಕ ರೀತಿಯ ಪದಾರ್ಥಗಳನ್ನು ಸೇರಿಸಲಾಗುತ್ತದೆ.
3/ 8
16ನೇ ಶತಮಾನದಲ್ಲಿಈ ಪ್ಲಮ್ ಕೇಕ್ಗೆ ಓಟ್ಸ್ ಬದಲಿಗೆ ಹಿಟ್ಟು, ಮೊಟ್ಟೆ ಮತ್ತು ಬೆಣ್ಣೆಯನ್ನು ಸೇರಿಸಲಾಯಿತು. ಈ ಮಿಶ್ರಣವನ್ನು ಮಸ್ಲಿನ್ ಬಟ್ಟೆಯಲ್ಲಿ ಸುತ್ತಿ, ಪಾತ್ರೆಯಲ್ಲಿ ಇಟ್ಟು ಕೆಲವು ಗಂಟೆಗಳ ಕಾಲ ಬೇಯಿಸಲಾಗುತ್ತದೆ.
4/ 8
ಪ್ರತಿಯೊಂದು ಮನೆಯಲ್ಲಿ ಈ ರೀತಿಯ ಕೇಕ್ ಅನ್ನು ತಯಾರಿಸಲಾಗುತ್ತದೆ. ಪ್ರತಿಯೊಬ್ಬರೂ ವಿಭಿನ್ನ ಶೈಲಿ ಮತ್ತು ರುಚಿಯಲ್ಲಿ ಈ ಪ್ಲಮ್ ಕೇಕ್ ಮಾಡುತ್ತಾರೆ. ಕೇಕ್ ಅನ್ನು ಸಾಮಾನ್ಯವಾಗಿ ಕ್ರಿಸ್ಮಸ್ಗೆ ಮೊದಲು ತಯಾರಿಸಲಾಗುತ್ತದೆ.
5/ 8
ಇದಕ್ಕೆ ಕೇವಲ ಕೇಕ್ ಎನ್ನುವ ಬದಲು ಪ್ಲಮ್ ಕೇಕ್ ಎಂದು ಏಕೆ ಕರೆಯುತ್ತಾರೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರವಿಲ್ಲ. ಆದರೆ, ಇಂಗ್ಲೆಂಡಿನಲ್ಲಿ ಒಣದ್ರಾಕ್ಷಿಗಳನ್ನು ಪ್ಲಮ್ ಎಂದೂ ಕರೆಯುತ್ತಾರೆ. ಒಣದ್ರಾಕ್ಷಿಗಳನ್ನು ಈ ಕೇಕ್ಗೆ ಹಾಕಲಾಗುತ್ತದೆ. ಅದಕ್ಕಾಗಿಯೇ ಇದನ್ನು ಕರೆಯಲಾಗುತ್ತದೆ ಎಂದು ಅಂದಾಜಿಸಲಾಗಿದೆ.
6/ 8
ಸದ್ಯ ಆಸ್ಟ್ರೇಲಿಯಾ, ಅಮೆರಿಕ, ಕೆನಡಾ ಮತ್ತು ಯುರೋಪ್ನಲ್ಲಿ ಹಲವು ತಿಂಗಳ ಮೊದಲೇ ಕೇಕ್ಗಳನ್ನು ಸಿದ್ಧಪಡಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕ್ರಿಸ್ಮಸ್ಗಾಗಿ ಪ್ಲಮ್ ಕೇಕ್ ಮತ್ತು ವೈನ್ ಬಾಟಲಿಯು ವಿದೇಶಗಳಲ್ಲಿ ಸಂಪ್ರದಾಯವಾಗಿ ಬದಲಾಗಿದೆ.
7/ 8
ಈಗ ಪ್ಲಮ್ ಕೇಕ್ ಇಲ್ಲದ ದೇಶವಿಲ್ಲ. ಈ ಕೇಕ್ಗಳನ್ನು ಪ್ರತಿ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಕ್ರಿಸ್ಮಸ್ನಲ್ಲಿ ಮಾತ್ರವಲ್ಲದೇ ಈಗ ವರ್ಷವಿಡೀ ಮಾರಾಟ ಮಾಡಲಾಗುತ್ತದೆ.
8/ 8
ಅಲ್ಲದೇ ಈ ಪ್ಲಮ್ ಕೇಕ್ ಮಾಡುವುದು ಸ್ವಲ್ಪ ಕಷ್ಟಕರ ಅನಿಸಿದರೂ ಸಹ ಕೆಲ ಉಪಕರಣಗಳ ಸಹಾಯದಿಂದ ಸುಲಭವಾಗಿ ಮಾಡಬಹುದು. ಈ ಬಾರಿ ನೀವೂ ಸಹ ಮನೆಯಲ್ಲಿ ಮಾಡಿ ಸವಿಯಿರಿ.