ಎರಡು ಸುಳಿ ಹೊಂದಿರುವವರು ಬಹಳ ಅಪರೂಪ. ಆದರೆ ಅದರಲ್ಲಿ ಅಸ್ವಾಭಾವಿಕ ಏನೂ ಇಲ್ಲ. ಅದೊಂದು ದೇಹದಲ್ಲಿನ ವಿಶಿಷ್ಟ ಲಕ್ಷಣ. ಕೆಲ ಮಂದಿ ತಲೆಯಲ್ಲಿ ಎರಡು ಸುಳಿ ಹೊಂದಿರುವವರು ಎರಡು ಮದುವೆ ಆಗುತ್ತಾರೆ. ಇಲ್ಲವಾದರೆ ಮದುವೆ ನಿಶ್ಚಯವಾಗುವ ಸಮಯದಲ್ಲಾದರೂ ಮುರಿದು ಎರಡನೇ ಬಾರಿ ಮದುವೆ ನಿಶ್ಚಯವಾಗಬಹುದು ಎಂದು ನಂಬುತ್ತಾರೆ. ಆದರೆ ಈ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಲಭ್ಯವಿಲ್ಲ.‘
ಯಾವುದಾದರೂ ಒಂದು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೂ ಕೂಡ ನೂರು ಬಾರಿ ಯೋಚಿಸುತ್ತಾರೆ. ಅಲ್ಲದೇ ತಮ್ಮ ಸುತ್ತಮುತ್ತ ಇರುವವರನ್ನು ಯಾವಾಗಲೂ ಸಂತೋಷದಿಂದ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ತಲೆಯಲ್ಲಿ ಎರಡು ಸುಳಿ ಇದ್ದರೆ ಎರಡು ಮದುವೆ ಆಗುತ್ತಾರೆ ಎಂಬ ಮಾತು ಸತ್ಯಕ್ಕೆ ದೂರವಾದ ವಿಚಾರ ಆಗಿದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)