ಜಪಾನ್ ನಲ್ಲಿ ಮಕ್ಕಳ ಭಾವನೆಗಳಿಗೆ ಮನ್ನಣೆಯನ್ನು ನೀಡುತ್ತಾರೆ. ಅಂದರೆ ಅವರ ಹಠಗಳಿಗೆ ಬೆಲೆ ಕೊಡುವುದು ಅಂತ ಅರ್ಥ ಅಲ್ಲ. ಸಣ್ಣ ಮಕ್ಕಳು ಹೇಳಿದ್ದನ್ನು ಗಮನವಿಟ್ಟು ಪೋಷಕರು ಆಲಿಸುತ್ತಾರೆ. ಇದರ ಜೊತೆಗೆ ಅವರ ತಪ್ಪುಗಳು ಅರಿವಾಗುವಂತೆ ಸಲಹೆಗಳನ್ನು ನೀಡುತ್ತಾರೆ. ಮಕ್ಕಳ ಮಾನಸಿಕ ಆರೋಗ್ಯವನ್ನು ಕಾಪಾಡಲು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಹೇಗೆ ವ್ಯವಹರಿಸಬೇಕೆಂಬುದನ್ನು ಅವರು ಚೆನ್ನಾಗಿ ಕಳೆದಿದ್ದಾರೆ.