ಚೀಸ್, ಬೆಣ್ಣೆ, ಮೇಯನೇಸ್ ಈ ಮೂರು ಪದಾರ್ಥಗಳನ್ನು ಹಾಲಿನಿಂದ ತಯಾರಿಸಲಾಗುತ್ತದೆ. ಅನೇಕ ಮಂದಿಗೆ ಈ ಮೂರು ಪದಾರ್ಥಗಳು ತುಂಬಾ ಇಷ್ಟ. ಬೆಣ್ಣೆಯನ್ನು ರೊಟ್ಟಿ, ಪರೋಟದ ಜೊತೆಗೆ, ಚೀಸ್ ಮತ್ತು ಮೇಯನೇಸ್ ಅನ್ನು ಸ್ಯಾಂಡವಿಚ್ ಮೊದಲಾದ ಸ್ನ್ಯಾಕ್ಸ್ ಜೊತೆಗೆ ಜನ ತಿನ್ನುತ್ತಾರೆ. ಇವು ಮೂರು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇವುಗಳ ನಡುವಿನ ವ್ಯತ್ಯಾಸವೇನು ಎಂಬುವುದನ್ನು ನಾವಿಂದು ತಿಳಿದುಕೊಳ್ಳೋಣ ಬನ್ನಿ.
ಚೀಸ್ (Cheese) : ಚೀಸ್ ಅನ್ನು ಮೊಸರಿನಿಂದ ತಯಾರಿಸಲಾಗುತ್ತದೆ. ಇದನ್ನು ಮೊಸರಿನಿಂದ ನೀರು ತೆಗೆದು ಉಪ್ಪು ಸೇರಿಸಿ ಶೇಖರಿಸಿಡಲಾಗುತ್ತದೆ. ಚೀಸ್ ಮೃದು ಮತ್ತು ಕೆನೆಯಾಗಿದ್ದರೂ, ಅದು ಸ್ವಲ್ಪ ಗಟ್ಟಿಯಾಗಿರುತ್ತದೆ. ಇದರ ರುಚಿ ಸಿಹಿಯಾಗಿ ಕಂಡರೂ ಸ್ವಲ್ಪ ಕಹಿಯಾಗಿರುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ತಯಾರಿಸಿದ ಚೀಸ್‌ಗೆ ಕಾಳುಮೆಣಸಿನ ಪುಡಿಯನ್ನು ಸೇರಿಸಲಾಗುತ್ತದೆ.
Culinary Uses: ಚೀಸ್ ಅನ್ನು ನೇರವಾಗಿ ತಿನ್ನಬಹುದು ಅಥವಾ ತುರಿದ ಮತ್ತು ಅನೇಕ ಆಹಾರಗಳ ಮೇಲೆ ಹಾಕಿಕೊಂಡು ತಿನ್ನಲಾಗುತ್ತದೆ. ಇದನ್ನು ಹೆಚ್ಚಾಗಿ ಸ್ನ್ಯಾಕ್ಸ್ಗಳಿಗೆ ಬಳಸಲಾಗುತ್ತದೆ. ಬಿಸಿ ಆಹಾರದ ಮೇಲೆ ಚೀಸ್ ಹಾಕಿದ ತಕ್ಷಣವೇ ಅದು ಕರಗುತ್ತದೆ. ಆಹಾರಕ್ಕೆ ವಿಶೇಷ ಪರಿಮಳವನ್ನು ನೀಡುತ್ತದೆ. ಇದನ್ನು ಪಿಜ್ಜಾಗಳು, ಸ್ಯಾಂಡ್ವಿಚ್‌ಗಳು, ಪಾಸ್ಟಾಗಳು ಮತ್ತು ಸಲಾಡ್‌ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
Butter : ನಮ್ಮೆಲ್ಲರಿಗೂ ಬೆಣ್ಣೆ ಬಗ್ಗೆ ಚೆನ್ನಾಗಿ ತಿಳಿದಿದೆ. ಮಜ್ಜಿಗೆಯನ್ನು ಕಡಿದಾಗ ಬೆಣ್ಣೆ ಬರುತ್ತದೆ. ಇದು ಸ್ವಲ್ಪ ಮುದ್ದೆ, ದಪ್ಪ, ಕೆನೆ ಮತ್ತು ನಯವಾಗಿರುತ್ತದೆ. ಬೆಣ್ಣೆಯನ್ನು ಫ್ರಿಜ್ ನಲ್ಲಿಟ್ಟರೆ ಅದು ಗಟ್ಟಿಯಾಗುತ್ತದೆ. ಬೆಣ್ಣೆಯ ರುಚಿ ತುಂಬಾ ಚೆನ್ನಾಗಿರುತ್ತದೆ. ಇದು ಸವಿಯಲು ರುಚಿಕರವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಬೆಣ್ಣೆಯಲ್ಲಿ ವಿವಿಧ ರೀತಿ ಟೇಸ್ಟ್ಗಳು ಬಂದಿದೆ.
Culinary Uses : ಬೆಣ್ಣೆಯನ್ನು ಅಡುಗೆ ಮತ್ತು ಬೇಕಿಂಗ್‌ನಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಭಕ್ಷ್ಯಕ್ಕೆ ಉತ್ತಮ ಪರಿಮಳವನ್ನು ತರುತ್ತದೆ. ಆಹಾರದಲ್ಲಿ ತೇವಾಂಶವನ್ನು ಹೆಚ್ಚಿಸಿ ರುಚಿಕರವಾಗಿಸುತ್ತದೆ. ಬೆಣ್ಣೆಯನ್ನು ಹುರಿಯಲು ಮತ್ತು ಬೇಯಿಸಲು ಹೆಚ್ಚು ಬಳಸಲಾಗುತ್ತದೆ. ಬ್ರೆಡ್ ಮತ್ತು ಟೋಸ್ಟ್ಗಳ ಮೇಲೆ ಬೆಣ್ಣೆಯನ್ನು ಹಾಕುವುದರಿಂದ ಅದ್ಭುತವಾದ ರುಚಿ ಸಿಗುತ್ತದೆ.
Mayonnaise : ಮೇಯನೇಸ್ ನಮಗೆ ಪರಿಚಯವಿಲ್ಲದ ವಿಚಾರ. ಭಾರತೀಯರೂ ಇದನ್ನು ಬಳಸುತ್ತಿದ್ದಾರೆ. ಇದು ಚೀಸ್ ಮತ್ತು ಬೆಣ್ಣೆಯಂತೆ ಕಾಣುತ್ತದೆ. ಆದರೆ ಇದು ಕೆನೆ ಸಾಸ್ ಆಗಿದೆ. ಇದನ್ನು ಎಣ್ಣೆ, ಮೊಟ್ಟೆಯ ಹಳದಿ ಲೋಳೆ, ವಿನೆಗರ್, ನಿಂಬೆ ರಸ ಮತ್ತು ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ. ಮೊಟ್ಟೆಗಳ ಹಳದಿಗಳನ್ನು ಚಿಮುಕಿಸುವ ಮೂಲಕ ದಪ್ಪ ಕೆನೆ ತಯಾರಿಸಲಾಗುತ್ತದೆ. ಕ್ರಮೇಣ ಎಣ್ಣೆಯನ್ನು ಸೇರಿಸುತ್ತದೆ. ಇದು ನಿಮ್ಮ ಬಾಯಿಗೂ ಅಂಟಿಕೊಳ್ಳುತ್ತದೆ. ಕರಗುತ್ತದೆ. ಸ್ವಲ್ಪ ಹುಳಿಯಾಗಿರುತ್ತದೆ ಮತ್ತು ಇದು ವಿವಿಧ ರುಚಿಗಳನ್ನು ಹೊಂದಿದೆ.