ಸನ್ ಚಾರ್ಜ್ಡ್ ವಾಟರ್ ನ್ನು ಆಯುರ್ವೇದವು ಸೂರ್ಯ ಚಿಕಿತ್ಸೆ ವಿಧಾನ ಅಥವಾ ಸೌರೀಕೃತ ನೀರಿನ ಆರೋಗ್ಯಕರ ಆಯುರ್ವೇದ ವಿಧಾನ ಎಂದು ಕರೆಯುತ್ತಾರೆ. ಆಯುರ್ವೇದವು ಶುದ್ಧ ನೀರನ್ನು ಕುಡಿಯಲು ಶಿಫಾರಸು ಮಾಡುತ್ತದೆ. ಈ ಚಿಕಿತ್ಸೆ ವಿಧಾನವನ್ನು ಅಥರ್ವಣ ವೇದದಲ್ಲಿ ಸೂರ್ಯ ಕಿರಣ ಚಿಕಿತ್ಸೆ ವಿಧಾನ ಎಂದು ವರ್ಗೀಕರಿಸಲಾಗಿದೆ. ಇದು ಸೂರ್ಯನ ಕಿರಣಗಳಿಂದ ಚಿಕಿತ್ಸೆ ನೀಡುವ ವಿಧಾನವಾಗಿದೆ.
ಸನ್ ಚಾರ್ಜ್ಡ್ ನೀರು ಕುಡಿದರೆ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ. ಇದು ಆಂಟಿವೈರಲ್, ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಚರ್ಮವನ್ನು ಸ್ವಚ್ಛಗೊಳಿಸಲು ಸಹಕಾರಿ. ಕಣ್ಣುಗಳನ್ನು ತೊಳೆಯಲು ಸೂಕ್ತವಾಗಿದೆ. ಜೀರ್ಣಕ್ರಿಯೆಗೆ ಸಹಕಾರಿ. ಹಸಿವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆ ತೊಂದರೆ, ಹೊಟ್ಟೆಯಲ್ಲಿ ಹುಳು ಸಮಸ್ಯೆ, ಆಮ್ಲೀಯತೆ ಮತ್ತು ಹೊಟ್ಟೆಯ ಹುಣ್ಣು ಸಮಸ್ಯೆ ಹೋಗಲಾಡಿಸುತ್ತದೆ.
ಸೂರ್ಯ ಕಿರಣ ಚಿಕಿತ್ಸೆಯಿಂದ ಚರ್ಮದ ಅಲರ್ಜಿ, ದದ್ದು ಸಮಸ್ಯೆ ನಿವಾರಣೆಯಾಗುತ್ತದೆ. ಇದು ಮುಖಕ್ಕೆ ಹೊಳಪನ್ನು ನೀಡುತ್ತದೆ. ಇನ್ನು ಸೂರ್ಯ ಕಿರಣ ಚಿಕಿತ್ಸೆಯು ವಿಟಮಿನ್ ಡಿ ಕೊರತೆಯನ್ನು ನಿವಾರಿಸಲು ಕಡಿಮೆ ಸಾಧ್ಯತೆಯಿದೆ ಅಂತಾರೆ ತಜ್ಞರು. ಯಾಕಂದ್ರೆ ಸೂರ್ಯನ ಬೆಳಕು ಚರ್ಮದ ಕೊಲೆಸ್ಟ್ರಾಲ್ ತಲುಪಿ ಅಲ್ಲಿ ರಾಸಾಯನಿಕ ಕ್ರಿಯೆಗಳ ಸರಣಿಗೆ ಪ್ರಚೋದನೆ ನೀಡುತ್ತದೆ. ಇದು ವಿಟಮಿನ್ ಡಿ ಉತ್ಪತ್ತಿ ಮಾಡುತ್ತದೆ.
ಹಾಗಾಗಿ ಸೂರ್ಯ ಕಿರಣ ಚಿಕಿತ್ಸೆ ನೀರು ಸರಿಯಾಗಿ ವಿಟಮಿನ್ ಡಿ ಒದಗಿಸಲು ಸಾಧ್ಯವಾಗಲ್ಲ. ನೀರು ಚರ್ಮದಂತೆಯೇ ರಾಸಾಯನಿಕ ಪ್ರಕ್ರಿಯೆಗೆ ಒಳಗಾಗಲ್ಲ. ಹೀಗಾಗಿ ವಿಟಮಿನ್ ಡಿ ಒದಗಿಸಲು ಆಗಲ್ಲ. ಹಾಗಾಗಿ ಬೆಳಗಿನ 10 ಗಂಟೆಯೊಳಗಿನ ಬಿಸಿಲಿಗೆ ಮೈಯೊಡ್ಡುವುದು ಸರಿಯಾದ ಪ್ರಮಾಣದಲ್ಲಿ ದೇಹವು ವಿಟಮಿನ್ ಡಿ ಪಡೆಯಲು ಸಾಧ್ಯವಾಗುತ್ತದೆ. ಜೊತೆಗೆ ವಿಟಮಿನ್ ಡಿ ಸಮೃದ್ಧ ಆಹಾರ ಸೇವಿಸಿ.