ಇಂದಿನ ಕಾಲದಲ್ಲಿ ತೂಕ ಇಳಿಸಿಕೊಳ್ಳಬೇಕು ಎಂದುಕೊಳ್ಳದೇ ಇರುವವರು ವಿರಳ. ಅದಕ್ಕಾಗಿ ತರಹೇವಾರಿ ವಿಧಾನವನ್ನು, ಬಗೆ ಬಗೆಯ ಡಯೆಟ್‌ಅನ್ನು ಅನುಸರಿಸುತ್ತಾರೆ. ಅಂಥ ಡಯೆಟ್‌ಗಳಲ್ಲಿ ಕೀಟೋ ಬಹಳ ಜನಪ್ರಿಯವಾಗಿದೆ.
2/ 14
ಫಿಟ್‌ನೆಸ್ ಉದ್ಯಮದಲ್ಲಿ ಕಾರ್ಬೋಹೈಡ್ರೇಟ್‌ಗಳು ಕೆಟ್ಟ ಖ್ಯಾತಿಯನ್ನು ಹೊಂದಿವೆ. ಇದು ಕೀಟೋ ಡಯೆಟ್ ತುಂಬಾ ಜನಪ್ರಿಯವಾಗಲು ಕಾರಣವಾಗಿದೆ. ಕೀಟೋ ಆಹಾರವು ಹೆಚ್ಚಿನ ಕೊಬ್ಬು, ಮಧ್ಯಮ ಪ್ರೋಟೀನ್, ಕಡಿಮೆ ಕಾರ್ಬ್ ಆಹಾರವಾಗಿದ್ದು ಅದು ಅತ್ಯಂತ ವೇಗವಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
3/ 14
ಏನಿದು ಕೀಟೋಸಿಸ್ ಸ್ಥಿತಿ? ಈ ಕೀಟೋ ಡಯೆಟ್ ದೇಹವು 'ಕೀಟೋಸಿಸ್' ಸ್ಥಿತಿಯನ್ನು ತಲುಪಲು ಸಹಾಯ ಮಾಡುತ್ತದೆ. ಈ ಕೀಟೋಸಿಸ್ ಸ್ಥಿತಿಯಲ್ಲಿ ದೇಹವು ಸಂಗ್ರಹವಾಗಿರುವ ಕೊಬ್ಬಿನಿಂದ ಶಕ್ತಿಯನ್ನು ಪಡೆಯುತ್ತದೆ. ಹಾಗೆಯೇ ಬೇಡವಾಗಿರುವ ಕೆಟ್ಟ ಕೊಬ್ಬನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ.
4/ 14
ಆದರೆ 'ಕೀಟೋಸಿಸ್' ಸ್ಥಿತಿಯನ್ನು ಪ್ರವೇಶಿಸುವ ಸಮಸ್ಯೆಯೆಂದರೆ ಅದು ಕೀಟೋ ಫ್ಲೂಗೆ ಕಾರಣವಾಗುತ್ತದೆ. ನೀವು ಕೀಟೋ ಡಯಟ್‌ಗೆ ಹೊಸಬರಾಗಿದ್ದರೆ ಅಥವಾ ಈ ಡಯೆಟ್ ವಿಧಾನವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಮೊದಲು ಕೀಟೋ ಜ್ವರ ಎಂದರೇನು? ಅದನ್ನು ಹೇಗೆ ಜಯಿಸುವುದು? ಜೊತೆಗೆ ಅದರ ಅಡ್ಡಪರಿಣಾಮಗಳೇನು ಅನ್ನೋದನು ತಿಳಿದುಕೊಳ್ಳಬೇಕು.
5/ 14
ಕೀಟೋ ಫ್ಲೂ ಎಂದರೇನು? ಒಬ್ಬ ವ್ಯಕ್ತಿಯು ಮೊದಲು ಕೀಟೋ ಡಯೆಟ್ ಪ್ರಾರಂಭಿಸಿದಾಗ, ಆರಂಭದಲ್ಲಿ ತಮ್ಮ ದೇಹದ ತೂಕದಲ್ಲಿ ಹೆಚ್ಚಿನ ವ್ಯತ್ಯಾಸವನ್ನು ಕಾಣುವುದಿಲ್ಲ. ಏಕೆಂದರೆ ದೇಹವು ಕೀಟೋಸಿಸ್ ಸ್ಥಿತಿಯನ್ನು ಸಾಧಿಸಲು ಸಮಯ ತೆಗೆದುಕೊಳ್ಳುತ್ತದೆ. ಸಾಮಾನ್ಯವಾಗಿ ಅದಕ್ಕೆ ಕನಿಷ್ಠ ಒಂದು ವಾರವಾದರೂ ಬೇಕು. ಆದರೆ ಅಷ್ಟರಲ್ಲಿ ನಿಮಗೆ ಕೀಟೋ ಜ್ವರ ಕಾಣಿಸಿಕೊಳ್ಳಬಹುದು.
6/ 14
ಕೀಟೋ ಡಯೆಟ್‌ನಲ್ಲಿ ಕಾರ್ಬೋಹೈಡ್ರೇಟ್ ಸೇವನೆಯನ್ನು ನಿಲ್ಲಿಸುವ ಪರಿಣಾಮವಾಗಿ ಉಂಟಾಗಬಹುದಾದ ರೋಗಲಕ್ಷಣಗಳ ಸಂಯೋಜನೆಯೇ ಕೀಟೋ ಜ್ವರವಾಗಿದೆ. ಕೀಟೋ ಜ್ವರದಿಂದ ಆಯಾಸ, ತಲೆನೋವು, ಕಿರಿಕಿರಿ, ವಾಕರಿಕೆ, ತಲೆತಿರುಗುವಿಕೆ ಮತ್ತು ಸ್ನಾಯು ಸೆಳೆತ ಉಂಟಾಗಬಹುದು.
7/ 14
ರೋಗಲಕ್ಷಣಗಳು ಕೆಲವು ದಿನಗಳಿಂದ ಹಿಡಿದು ಕೆಲವು ವಾರಗಳವರೆಗೆ ಯಾವಾಗಲಾದರೂ ಕಾಣಿಸಿಕೊಳ್ಳಬಹುದು. ದೇಹವು ಕೊಬ್ಬಿನಿಂದ ತನ್ನ ಶಕ್ತಿಯನ್ನು ಪಡೆಯಲು ಒಗ್ಗಿಕೊಂಡ ನಂತರ ಈ ಜ್ವರ ಕಡಿಮೆಯಾಗುತ್ತದೆ.
8/ 14
ಕೀಟೋ ಜ್ವರ ಉಂಟಾದಾಗ ಏನು ಮಾಡಬೇಕು? ಹೆಚ್ಚು ನೀರು ಕುಡಿಯಬೇಕು: ಹೈಡ್ರೀಕರಿಸಿದ ಸ್ಥಿತಿಯಲ್ಲಿರುವುದು ನಿಮ್ಮ ದೇಹವು ವಿಷವನ್ನು ಹೊರಹಾಕಲು ಸಹಕಾರಿ. ಆದ್ದರಿಂದ ಕೀಟೋ ಜ್ವರದ ಲಕ್ಷಣಗಳನ್ನು ಕಡಿಮೆ ಮಾಡಲು ಹೆಚ್ಚು ನೀರನ್ನು ಕುಡಿಯಬೇಕು.
9/ 14
ಉಪ್ಪು ಸೇವನೆ ಹೆಚ್ಚಿಸಿ: ಕೀಟೋ ಆಹಾರದಲ್ಲಿ ನಿಮ್ಮ ದೇಹಕ್ಕೆ ಹೆಚ್ಚು ಉಪ್ಪು ಬೇಕಾಗುತ್ತದೆ. ಆದ್ದರಿಂದ ನೀವು ಸಾಕಷ್ಟು ಉಪ್ಪನ್ನು ಸೇವನೆ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
10/ 14
ಚೀಟ್ ಮೀಲ್: ವಾರದಲ್ಲಿ ಒಂದು ದಿನ ಅಥವಾ ಆಗಾಗ ನಿಮಗೆ ಇಷ್ಟವಾದ್ದನ್ನು ತಿನ್ನುವಂಥ ಚೀಟ್ ಮೀಲ್, ಜ್ವರ ಚಕ್ರದಿಂದ ಪಾರಾಗಲು ನಿಮಗೆ ಸಹಾಯ ಮಾಡುತ್ತದೆ. ಆದರೆ ಚೀಟ್ ಮೀಲ್‌ನಲ್ಲಿ ನೀವು ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿಗಳನ್ನು ಸೇವಿಸಬಾರದು.
11/ 14
ಸಾಕಷ್ಟು ನಿದ್ರೆ : ನಿದ್ರೆಯ ಸಮಯದಲ್ಲಿ ಮಾನವ ದೇಹವು ರೂಪಾಂತರಗೊಳ್ಳುತ್ತದೆ. ಕೊಬ್ಬನ್ನು ಬರ್ನ್ ಮಾಡುವ ವಲಯಕ್ಕೆ ಪ್ರವೇಶಿಸುತ್ತದೆ. ಹಾಗಾಗಿ ನೀವು ದಿನಕ್ಕೆ ಆರರಿಂದ ಎಂಟು ಗಂಟೆಗಳ ವಿಶ್ರಾಂತಿ ಪಡೆಯಬೇಕು.
12/ 14
ವ್ಯಾಯಾಮ: ಚಯಾಪಚಯವನ್ನು ಹೆಚ್ಚಿಸಲು ಮತ್ತು ಕೀಟೋ ಜ್ವರದ ಪರಿಣಾಮವನ್ನು ಕಡಿಮೆ ಮಾಡಲು ವ್ಯಾಯಾಮವು ಅತ್ಯುತ್ತಮ ಮಾರ್ಗವಾಗಿದೆ.
13/ 14
ಹೆಚ್ಚಿನ ಬಾಯಾರಿಕೆ: ಪ್ರೋಟೀನ್ ಸೇವನೆಯಿಂದಾಗಿ ದೇಹದಲ್ಲಿ ಹೆಚ್ಚಿನ ನಿರ್ಜಲೀಕರಣ ಉಂಟಾಗಬಹುದು. ಹಾಗಾಗಿ ನೀವು ಹೆಚ್ಚಿನ ಬಾಯಾರಿಕೆಯನ್ನು ಅನುಭವಿಸುತ್ತಿದ್ದರೆ ಇದು ಹೆಚ್ಚಿನ ಪ್ರೋಟೀನ್ ಆಹಾರದ ಕಾರಣದಿಂದಾಗಿರಬಹುದು. ಇದಕ್ಕಾಗಿ ನೀವು ನೀರಿನ ಸೇವನೆಯನ್ನು ಟ್ರ್ಯಾಕ್ ಮಾಡಿ ಹಾಗೆಯೇ ಪ್ರತಿ ಎರಡು ಗಂಟೆಗಳಿಗೊಮ್ಮೆ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ.
14/ 14
ಕೀಟೋ ರಾಶ್: ಕೀಟೋ ಡಯೆಟ್ ಪ್ರಾರಂಭಿಸುವಾಗ ಕೆಲವರಿಗೆ ದದ್ದುಗಳು ಉಂಟಾಗಬಹುದು. ದೇಹದಿಂದ ವಿಷವನ್ನು ಬಿಡುಗಡೆ ಮಾಡುವುದರಿಂದ ಇಂಥ ದದ್ದುಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ.
First published:
114
Keto Flu ಅಂದ್ರೆ ಏನು? ಈ ಕಾಯಿಲೆ ಬಂದ್ರೆ ಯಾವ ರೀತಿಯ ಆಹಾರಗಳನ್ನು ತಿನ್ನಬೇಕು?