Colorectal Cancer: ಯಾವುದೇ ಸೂಚನೆ ಕೊಡದೇ ಬರುತ್ತೆ ಈ ಕೊಲೊರೆಕ್ಟಲ್ ಕ್ಯಾನ್ಸರ್!

ಹೆಚ್ಚಿನ ಕ್ಯಾನ್ಸರ್ ಕಾಯಿಲೆಗಳನ್ನು ಗುರುತಿಸುವುದು ತುಂಬಾ ಕಷ್ಟ. ಹೆಚ್ಚಿನ ಕ್ಯಾನ್ಸರ್ ಕಾಯಿಲೆಗಳ ಲಕ್ಷಣಗಳು ಬೇಗ ಗೋಚರಿಸುವುದೇ ಇಲ್ಲ. ಹಾಗಾಗಿ ಅದರ ಬಗ್ಗೆ ಗೊತ್ತಾಗಲ್ಲ. ವಿವಿಧ ರೀತಿಯ ಕ್ಯಾನ್ಸರ್ ಕಾಯಿಲೆ ಇರುವುದನ್ನು ನಾವು ಕಾಣುತ್ತೇವೆ. ಹೀಗೆ ಬೇಗ ರೋಗದ ಗುಣಲಕ್ಷಣ ತೋರಿಸದಿರುವ ಕಾಯಿಲೆ ಕೊಲೊರೆಕ್ಟಲ್ ಕ್ಯಾನ್ಸರ್ ಆಗಿದೆ.

First published:

  • 18

    Colorectal Cancer: ಯಾವುದೇ ಸೂಚನೆ ಕೊಡದೇ ಬರುತ್ತೆ ಈ ಕೊಲೊರೆಕ್ಟಲ್ ಕ್ಯಾನ್ಸರ್!

    ಕೊಲೊರೆಕ್ಟಲ್ ಕ್ಯಾನ್ಸರ್ ಒಂದು ತರಹದ ಕ್ಯಾನ್ಸರ್ ಆಗಿದೆ. ಇದರಲ್ಲಿ ರೋಗಿಯು ಬೇಗ ಗುಣಲಕ್ಷಣಗಳನ್ನು ಹೊಂದುವುದಿಲ್ಲ. ಇದನ್ನು ಸಹ ಬೇಗ ಗುರುತಿಸಲು ಸಾಧ್ಯವಾಗಲ್ಲ. ಹೀಗಾಗಿ ಕೊಲೊರೆಕ್ಟಲ್ ಕ್ಯಾನ್ಸರ್ ಮಾರಕವಾಗಿದೆ. ಜೊತೆಗೆ ಇದನ್ನು ಮೂಕ ರೋಗವೆಂದು ಕರೆಯಲಾಗಿದೆ.

    MORE
    GALLERIES

  • 28

    Colorectal Cancer: ಯಾವುದೇ ಸೂಚನೆ ಕೊಡದೇ ಬರುತ್ತೆ ಈ ಕೊಲೊರೆಕ್ಟಲ್ ಕ್ಯಾನ್ಸರ್!

    ಕೊಲೊರೆಕ್ಟಲ್ ಕ್ಯಾನ್ಸರ್ ಆರಂಭದಲ್ಲಿ ರೋಗ ಲಕ್ಷಣಗಳನ್ನು ತೋರಿಸುವ ಸಾಧ್ಯತೆ ತುಂಬಾ ಕಡಿಮೆ ಅಂತಾರೆ ವೈದ್ಯರು. ಅದಾಗ್ಯೂ ನೀವು ಶೌಚಾಲಯಕ್ಕೆ ಹೋದಾಗ ಕಂಡು ಬರುವ ಈ ಆರು ಬದಲಾವಣೆಗಳಿಂದ ನೀವು ಕೊಲೊರೆಕ್ಟಲ್ ಕ್ಯಾನ್ಸರ್ ಗೆ ತುತ್ತಾಗಿದ್ದೀರಿ ಎಂದು ಕಂಡು ಹಿಡಿಯಬಹುದು.

    MORE
    GALLERIES

  • 38

    Colorectal Cancer: ಯಾವುದೇ ಸೂಚನೆ ಕೊಡದೇ ಬರುತ್ತೆ ಈ ಕೊಲೊರೆಕ್ಟಲ್ ಕ್ಯಾನ್ಸರ್!

    ಕೊಲೊರೆಕ್ಟಲ್ ಕ್ಯಾನ್ಸರ್ ಇದು ಎರಡು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಇದು ದೊಡ್ಡ ಕರುಳು ಅಥವಾ ಗುದನಾಳದಲ್ಲಿ ಉಂಟಾಗುತ್ತದೆ. ಪ್ರತಿ ವರ್ಷ ಮಾರ್ಚ್ ಅನ್ನು ಕೊಲೊರೆಕ್ಟಲ್ ಕ್ಯಾನ್ಸರ್ ಜಾಗೃತಿ ತಿಂಗಳಾಗಿ ಆಚರಣೆ ಮಾಡಲಾಗುತ್ತದೆ.

    MORE
    GALLERIES

  • 48

    Colorectal Cancer: ಯಾವುದೇ ಸೂಚನೆ ಕೊಡದೇ ಬರುತ್ತೆ ಈ ಕೊಲೊರೆಕ್ಟಲ್ ಕ್ಯಾನ್ಸರ್!

    ಕರುಳಿನ ಚಲನೆಯ ವೇಳೆ ನಿರಂತರವಾಗಿ ನೋವು ಉಂಟಾಗುತ್ತದೆ. ಈ ಸಂಕೇತವು ಕೆಲವೊಮ್ಮೆ ಕೊಲೊರೆಕ್ಟಲ್ ಕ್ಯಾನ್ಸರ್ ಲಕ್ಷಣವಾಗಿರಬಹುದು. ಇದು ಸಾಮಾನ್ಯ ರೋಗ ಲಕ್ಷಣವಾಗಿದೆ ಅಂತಾರೆ ತಜ್ಞರು. ಆದರೆ ತುಂಬಾ ಜನರು ಇದು ಸಾಮಾನ್ಯ ಹೊಟ್ಟೆ ನೋವು ಎಂದು ನಿರ್ಲಕ್ಷಿಸುತ್ತಾರೆ.

    MORE
    GALLERIES

  • 58

    Colorectal Cancer: ಯಾವುದೇ ಸೂಚನೆ ಕೊಡದೇ ಬರುತ್ತೆ ಈ ಕೊಲೊರೆಕ್ಟಲ್ ಕ್ಯಾನ್ಸರ್!

    ಕೆಲವು ರೋಗಿಗಳು ಕಿಬ್ಬೊಟ್ಟೆ ನೋವು ಅಥವಾ ಸೆಳೆತ ಹೊಂದಿರುತ್ತಾರೆ. ಇದರ ಹಿಂದಿನ ಕಾರಣ ಅಂದ್ರೆ ದೊಡ್ಡ ಕರುಳಿನಲ್ಲಿ ಅಡಚಣೆ ಮತ್ತು ಮಲ ಹೊರಬರುವ ದಾರಿಯಲ್ಲಿ ಅಡಚಣೆ ಉಂಟಾಗುವುದು ಆಗಿದೆ. ಮಲವಿಸರ್ಜನೆ ವೇಳೆ ರಕ್ತಸ್ರಾವ ಆಗುವುದು ಸಹ ಕೊಲೊರೆಕ್ಟಲ್ ಕ್ಯಾನ್ಸರ್ ಸಂಕೇತವಾಗಿದೆ.

    MORE
    GALLERIES

  • 68

    Colorectal Cancer: ಯಾವುದೇ ಸೂಚನೆ ಕೊಡದೇ ಬರುತ್ತೆ ಈ ಕೊಲೊರೆಕ್ಟಲ್ ಕ್ಯಾನ್ಸರ್!

    ಕೊಲೊರೆಕ್ಟಲ್ ಕ್ಯಾನ್ಸರ್ ನಲ್ಲಿ ಅತಿಸಾರ ಸಮಸ್ಯೆ ಸಾಮಾನ್ಯವಾಗಿರುತ್ತದೆ. ವೈದ್ಯರ ಪ್ರಕಾರ ಕೆಲವೊಮ್ಮೆ ಕೊಲೊರೆಕ್ಟಲ್ ಕ್ಯಾನ್ಸರ್ ಇದ್ದಾಗ ಮಲವನ್ನು ಹಾದು ಹೋಗುವ ಅಭ್ಯಾಸದಲ್ಲಿ ಬದಲಾವಣೆಯಾಗುತ್ತದೆ. ದೊಡ್ಡ ಕರುಳಿನಲ್ಲಿರುವ ಗಡ್ಡೆಯು ಕೀವು ತರಹದ ದ್ರವವನ್ನು ಬಿಡುಗಡೆ ಮಾಡುತ್ತದೆ. ಇದು ಅತಿಸಾರಕ್ಕೆ ಕಾರಣವಾಗುತ್ತದೆ.

    MORE
    GALLERIES

  • 78

    Colorectal Cancer: ಯಾವುದೇ ಸೂಚನೆ ಕೊಡದೇ ಬರುತ್ತೆ ಈ ಕೊಲೊರೆಕ್ಟಲ್ ಕ್ಯಾನ್ಸರ್!

    ಮಲಬದ್ಧತೆ ಸಮಸ್ಯೆ ಉಂಟಾಗುವುದು ಕೂಡ ಕೊಲೊರೆಕ್ಟಲ್ ಕ್ಯಾನ್ಸರ್ ಲಕ್ಷಣವಾಗಿದೆ. ಆರಮಭದಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ಮಲಬದ್ಧತೆ ಸಮಸ್ಯೆ ಉಂಟು ಮಾಡುತ್ತದೆ. ಕರುಳು ಗಡ್ಡೆಯಿಂದ ನಿರ್ಬಂಧಿಸಲ್ಪಟ್ಟಾಗ ಮಲವು ಹೊರಬರಲು ಸಾಧ್ಯವಾಗಲ್ಲ.

    MORE
    GALLERIES

  • 88

    Colorectal Cancer: ಯಾವುದೇ ಸೂಚನೆ ಕೊಡದೇ ಬರುತ್ತೆ ಈ ಕೊಲೊರೆಕ್ಟಲ್ ಕ್ಯಾನ್ಸರ್!

    ಹೊಟ್ಟೆಯನ್ನು ಸ್ವಚ್ಛಗೊಳಿಸಿದ ನಂತರವೂ ಅಸ್ವಸ್ಥತೆ ಉಂಟಾಗುವುದು ಸಹ ಕೊಲೊರೆಕ್ಟಲ್ ಕ್ಯಾನ್ಸರ್ ಸಂಕೇತವಾಗಿದೆ. ಗೆಡ್ಡೆ ಕರುಳನ್ನು ನಿರ್ಬಂಧಿಸಿದಾಗ ಕರುಳಿನ ಚಲನೆಯ ನಂತರವೂ ಹೊಟ್ಟೆಯು ಸಂಪೂರ್ಣವಾಗಿ ತೆರವಾಗಲ್ಲ. ಇದು ಚಡಪಡಿಕೆ ಮತ್ತು ಅಸ್ವಸ್ಥತೆ ಉಂಟು ಮಾಡುತ್ತದೆ.

    MORE
    GALLERIES