Bamboo Salt: ಬಿದಿರಿನ ಉಪ್ಪಿನ ಬಗ್ಗೆ ನಿಮಗೆ ಗೊತ್ತಾ? ಕೆಜಿಗೆ ಯಾಕಿಷ್ಟು ದುಬಾರಿ!

Bamboo Salt : ಬಿದಿರಿನ ಉಪ್ಪಿನಿಂದ ಅನೇಕ ಆರೋಗ್ಯ ಪ್ರಯೋಜನಗಳಿದೆ. ಈ ಉಪ್ಪನ್ನು ಆನ್​ಲೈನ್ ಇ-ಕಾಮರ್ಸ್ ಸೈಟ್​​ಗಳಿಂದ ಖರೀದಿಸಬಹುದು. ಇದರ ಬೆಲೆ ಕೆಜಿಗೆ 1600 ರೂ.ವರೆಗೆ ಇದೆ. 100 ಗ್ರಾಂಗೂ ಕೂಡ ಲಭ್ಯವಿದೆ.

First published:

  • 18

    Bamboo Salt: ಬಿದಿರಿನ ಉಪ್ಪಿನ ಬಗ್ಗೆ ನಿಮಗೆ ಗೊತ್ತಾ? ಕೆಜಿಗೆ ಯಾಕಿಷ್ಟು ದುಬಾರಿ!

    ಬಿದಿರಿನ ಉಪ್ಪನ್ನು ಬಿದಿರು ಚಿಗುರುಗಳನ್ನು ಬಳಸಿ ತಯಾರಿಸಲಾಗುತ್ತದೆ. ಬಿದಿರಿನ ಒಳಗೆ ಸಮುದ್ರದ ಉಪ್ಪನ್ನು ತುಂಬಿಸಿ ಬಿದಿರನ್ನು ತಾಪಮಾನದಲ್ಲಿ ಹುರಿಯುವ ಮೂಲಕ ಬಿದಿರಿನ ಉಪ್ಪನ್ನು ತಯಾರಿಸಲಾಗುತ್ತದೆ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳಿದೆ. ಈ ಉಪ್ಪನ್ನು ಆನ್ಲೈನ್ ಇ-ಕಾಮರ್ಸ್ ಸೈಟ್ಗಳಿಂದ ಖರೀದಿಸಬಹುದು. ಇದರ ಬೆಲೆ ಕೆಜಿಗೆ 1600 ರೂ.ವರೆಗೆ ಇದೆ. 100 ಗ್ರಾಂಗೂ ಕೂಡ ಲಭ್ಯವಿದೆ. (Image credit - amazon.in)

    MORE
    GALLERIES

  • 28

    Bamboo Salt: ಬಿದಿರಿನ ಉಪ್ಪಿನ ಬಗ್ಗೆ ನಿಮಗೆ ಗೊತ್ತಾ? ಕೆಜಿಗೆ ಯಾಕಿಷ್ಟು ದುಬಾರಿ!

    Rich in minerals : ಬಿದಿರಿನ ಉಪ್ಪಿನಲ್ಲಿ 70 ಕ್ಕೂ ಹೆಚ್ಚು ರೀತಿಯ ಖನಿಜಗಳು ಕಂಡು ಬಂದಿದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಕೂಡ ಇದೆ. (Image credit - amazon.in)

    MORE
    GALLERIES

  • 38

    Bamboo Salt: ಬಿದಿರಿನ ಉಪ್ಪಿನ ಬಗ್ಗೆ ನಿಮಗೆ ಗೊತ್ತಾ? ಕೆಜಿಗೆ ಯಾಕಿಷ್ಟು ದುಬಾರಿ!

    Antioxidant properties : ಬಿದಿರಿನ ಉಪ್ಪು ಹೆಚ್ಚಿನ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ನಮ್ಮ ದೇಹದಿಂದ ವಿಷಕಾರಿ ತ್ಯಾಜ್ಯವನ್ನು ತೆಗೆದುಹಾಕುತ್ತದೆ. ಕ್ಯಾನ್ಸರ್ ನಂತಹ ಭಯಾನಕ ರೋಗಗಳನ್ನು ತಡೆಯುತ್ತದೆ. (Image credit - amazon.in)

    MORE
    GALLERIES

  • 48

    Bamboo Salt: ಬಿದಿರಿನ ಉಪ್ಪಿನ ಬಗ್ಗೆ ನಿಮಗೆ ಗೊತ್ತಾ? ಕೆಜಿಗೆ ಯಾಕಿಷ್ಟು ದುಬಾರಿ!

    Alkalizing effect : ಬಿದಿರಿನ ಉಪ್ಪು ಕ್ಷಾರೀಯ ಗುಣಗಳನ್ನು ಹೊಂದಿದೆ. ಇದು ದೇಹದಲ್ಲಿ pH ಮಟ್ಟವನ್ನು ಸರಿಹೊಂದಿಸುತ್ತದೆ. ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ತಡೆಯುತ್ತದೆ. (Image credit - amazon.in)

    MORE
    GALLERIES

  • 58

    Bamboo Salt: ಬಿದಿರಿನ ಉಪ್ಪಿನ ಬಗ್ಗೆ ನಿಮಗೆ ಗೊತ್ತಾ? ಕೆಜಿಗೆ ಯಾಕಿಷ್ಟು ದುಬಾರಿ!

    Anti-inflammatory properties : ಕೆಲವು ಅಧ್ಯಯನಗಳ ಪ್ರಕಾರ, ಈ ಉಪ್ಪು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಪರಿಣಾಮವಾಗಿ, ಈ ಉಪ್ಪು ಎದೆಯ ಉರಿಯೂತ ಮತ್ತು ಕೀಲು ನೋವಿನಿಂದ ಬಳಲುತ್ತಿರುವವರಿಗೆ ಒಳ್ಳೆಯದು. (Image credit - amazon.in)

    MORE
    GALLERIES

  • 68

    Bamboo Salt: ಬಿದಿರಿನ ಉಪ್ಪಿನ ಬಗ್ಗೆ ನಿಮಗೆ ಗೊತ್ತಾ? ಕೆಜಿಗೆ ಯಾಕಿಷ್ಟು ದುಬಾರಿ!

    Digestive health : ಮೊದಲು ಈ ಉಪ್ಪನ್ನು ಅಜೀರ್ಣ ಮತ್ತು ಹೊಟ್ಟೆನೋವಿನಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತಿತ್ತು. ಇದು ಮಲಬದ್ಧತೆ ಮತ್ತು ಅತಿಸಾರಕ್ಕೂ ಚೆನ್ನಾಗಿ ಕೆಲಸ ಮಾಡುತ್ತದೆ. (Image credit - amazon.in)

    MORE
    GALLERIES

  • 78

    Bamboo Salt: ಬಿದಿರಿನ ಉಪ್ಪಿನ ಬಗ್ಗೆ ನಿಮಗೆ ಗೊತ್ತಾ? ಕೆಜಿಗೆ ಯಾಕಿಷ್ಟು ದುಬಾರಿ!

    Oral health : ಬಿದಿರಿನ ಉಪ್ಪು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಎಂದು ಕಂಡುಬಂದಿದೆ. ಆದ್ದರಿಂದ ಈ ಉಪ್ಪು ಬಾಯಿಯಲ್ಲಿ ಅಡಗಿರುವ ಸೂಕ್ಷ್ಮಾಣುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಂದು ಬಾಯಿಗೆ ಆರೋಗ್ಯವನ್ನು ನೀಡುತ್ತದೆ ಎಂದು ಭಾವಿಸಲಾಗಿದೆ. (Image credit - amazon.in)

    MORE
    GALLERIES

  • 88

    Bamboo Salt: ಬಿದಿರಿನ ಉಪ್ಪಿನ ಬಗ್ಗೆ ನಿಮಗೆ ಗೊತ್ತಾ? ಕೆಜಿಗೆ ಯಾಕಿಷ್ಟು ದುಬಾರಿ!

    ಬಿದಿರಿನ ಉಪ್ಪಿನ ಆರೋಗ್ಯ ಪ್ರಯೋಜನಗಳು ತಿಳಿದಿದ್ದರೂ, ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಆಗ ಮಾತ್ರ ಈ ಉಪ್ಪಿನ ಸಂಪೂರ್ಣ ಮತ್ತು ನಿಖರವಾದ ತಿಳುವಳಿಕೆ ಬರುತ್ತದೆ. ಇತರ ಲವಣಗಳಂತೆ, ಈ ಉಪ್ಪನ್ನು ಮಿತವಾಗಿ ಸೇವಿಸಬೇಕು. ಇಲ್ಲದಿದ್ದರೆ, ದೇಹದಲ್ಲಿ ಹೆಚ್ಚುವರಿ ಸೋಡಿಯಂ ಅನಾರೋಗ್ಯಕ್ಕೆ ಕಾರಣವಾಗಬಹುದು. (Image credit - amazon.in)

    MORE
    GALLERIES