ದಿನಕ್ಕೊಂದು ಸೀಬೆ ಹಣ್ಣು ತಿನ್ನುವುದರಿಂದ, ಏನೇನು ಉಪಯೋಗಗಳಿವೆ ಗೊತ್ತಾ?

ಪೇರಲೆಯಲ್ಲಿ ಬಿ 1, ಬಿ 3, ಬಿ 6 ಮತ್ತು ಫೋಲೇಟ್‌ನಂತಹ ಬಿ ವಿಟಮಿನ್​ಗಳು ಅಧಿಕ ಪ್ರಮಾಣದಲ್ಲಿರುತ್ತದೆ. ಇದು ದೇಹವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ.

First published:

  • 111

    ದಿನಕ್ಕೊಂದು ಸೀಬೆ ಹಣ್ಣು ತಿನ್ನುವುದರಿಂದ, ಏನೇನು ಉಪಯೋಗಗಳಿವೆ ಗೊತ್ತಾ?

    ದೇಹ ತೂಕವನ್ನು ಕಡಿಮೆ ಮಾಡಲು ಮಾಡುವ ಕಸರತ್ತು ಒಂದಾ ಎರಡಾ..! ಆದರೂ ತೂಕದಲ್ಲಿ ಅಂತಹ ವ್ಯತ್ಯಾಸ ಕಂಡು ಬರುವುದಿಲ್ಲ. ಅದರಲ್ಲೂ ಡೊಳ್ಳು ಹೊಟ್ಟೆಯನ್ನು ಕರಗಿಸಲು ನಾನಾ ರೀತಿಯ ವ್ಯಾಯಾಮ ಮಾಡಿದರೂ ಪ್ರಯೋಜನ ಮಾತ್ರ ಶೂನ್ಯ ಎಂದು ಕೆಲವರು ಹೇಳುತ್ತಾರೆ.

    MORE
    GALLERIES

  • 211

    ದಿನಕ್ಕೊಂದು ಸೀಬೆ ಹಣ್ಣು ತಿನ್ನುವುದರಿಂದ, ಏನೇನು ಉಪಯೋಗಗಳಿವೆ ಗೊತ್ತಾ?

    ಇನ್ನೆರಡು ತಿಂಗಳು ಕಳೆದರೆ ಚಳಿಗಾಲದ ಸೀಸನ್  ಬರಲಿದೆ. ಈ ಋತುವಿನಲ್ಲಿ ಸಾಮಾನ್ಯವಾಗಿ ಹಣ್ಣುಗಳು ಮತ್ತು ತರಕಾರಿಗಳು ಹೇರಳವಾಗಿ ದೊರೆಯುತ್ತವೆ. ಆದರೆ ಚಳಿಗಾಲದಲ್ಲಿ ಬಿಸಿ ಆಹಾರದ ಮೊರೆ ಹೋಗುವವರೆ ಹೆಚ್ಚು.

    MORE
    GALLERIES

  • 311

    ದಿನಕ್ಕೊಂದು ಸೀಬೆ ಹಣ್ಣು ತಿನ್ನುವುದರಿಂದ, ಏನೇನು ಉಪಯೋಗಗಳಿವೆ ಗೊತ್ತಾ?

    ಇದರಿಂದ ದೇಹ ತೂಕ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಕೂಡ ಇದೆ. ಇದೇ ಸೀಸನ್​ನಲ್ಲಿ ಎಲ್ಲ ಕಡೆ ದೊರೆಯುವ ಹಣ್ಣೆಂದರೆ ಪೇರಲೆ ಅಥವಾ ಸೀಬೆಹಣ್ಣು. ಇದನ್ನು ದಿನನಿತ್ಯ ಸೇವಿಸುವ ಮೂಲಕ ಕೂಡ ನಿಮ್ಮ ಸ್ಥೂಲಕಾಯತೆ ಸಮಸ್ಯೆಗೆ ಪರಿಹಾರ ಕಾಣಬಹುದು.

    MORE
    GALLERIES

  • 411

    ದಿನಕ್ಕೊಂದು ಸೀಬೆ ಹಣ್ಣು ತಿನ್ನುವುದರಿಂದ, ಏನೇನು ಉಪಯೋಗಗಳಿವೆ ಗೊತ್ತಾ?

    ಪೇರಲೆ ಹಣ್ಣಿನಲ್ಲಿ ಫೋಲೇಟ್ ಎಂಬ ಅಂಶವಿದ್ದು, ಇದುಅಧಿಕ ರಕ್ತದೊತ್ತಡವನ್ನು ಕೂಡ ನಿಯಂತ್ರಿಸುತ್ತದೆ. ಹಾಗೆಯೇ ಈ ಹಣ್ಣು ಸೋಡಿಯಂನ ನಕರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಿ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ನಿಮ್ಮ ಡಯಟ್​ನಲ್ಲಿ ಸೀಬೆಹಣ್ಣನ್ನು ಸೇರಿಸುವುದು ಉತ್ತಮ.

    MORE
    GALLERIES

  • 511

    ದಿನಕ್ಕೊಂದು ಸೀಬೆ ಹಣ್ಣು ತಿನ್ನುವುದರಿಂದ, ಏನೇನು ಉಪಯೋಗಗಳಿವೆ ಗೊತ್ತಾ?

    ಪೇರಲೆ ಹಣ್ಣಿನಿಂದ ಪ್ರಯೋಜನಗಳು ಯಾವುವು? ಈ ಕೆಳಗಿನಂತಿವೆ.

    MORE
    GALLERIES

  • 611

    ದಿನಕ್ಕೊಂದು ಸೀಬೆ ಹಣ್ಣು ತಿನ್ನುವುದರಿಂದ, ಏನೇನು ಉಪಯೋಗಗಳಿವೆ ಗೊತ್ತಾ?

    1. ಪೇರಲೆ ಅಥವಾ ಸೀಬೆ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಫೈಬರ್ ಅಂಶ ಇರುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಜೀರ್ಣಕ್ರಿಯೆ ಸಾಮರ್ಥ್ಯವನ್ನು ಚೇತರಿಸಿಕೊಳ್ಳುವುದು ಬಹಳ ಮುಖ್ಯ. ಅಂದರೆ ಜೀರ್ಣಕ್ರಿಯೆ ಶಕ್ತಿಯನ್ನು ಹೆಚ್ಚಿಸುವಲ್ಲಿ ಫೈಬರ್ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಪೇರಲೆ ಎಂಬುದು ಜೀರ್ಣಕ್ರಿಯೆಗೆ ಮನೆಮದ್ದು ಎನ್ನಬಹುದು.

    MORE
    GALLERIES

  • 711

    ದಿನಕ್ಕೊಂದು ಸೀಬೆ ಹಣ್ಣು ತಿನ್ನುವುದರಿಂದ, ಏನೇನು ಉಪಯೋಗಗಳಿವೆ ಗೊತ್ತಾ?

    2. ಪೇರಲೆಯಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ತುಂಬಾ ಕಡಿಮೆ. 100 ಹಣ್ಣಿನಲ್ಲಿ ಕೇವಲ 14 ಗ್ರಾಂ ಕಾರ್ಬೋಹೈಡ್ರೇಟ್ ಕಂಡುಬರುತ್ತದೆ. ಅನೇಕ ಅಧ್ಯಯನಗಳ ಪ್ರಕಾರ, ಕಾರ್ಬೋಹೈಡ್ರೇಟ್ ಕಡಿಮೆ ಇರುವ ವಸ್ತುಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

    MORE
    GALLERIES

  • 811

    ದಿನಕ್ಕೊಂದು ಸೀಬೆ ಹಣ್ಣು ತಿನ್ನುವುದರಿಂದ, ಏನೇನು ಉಪಯೋಗಗಳಿವೆ ಗೊತ್ತಾ?

    3. ಕಡಿಮೆ ಕ್ಯಾಲೋರಿ ಹೊಂದಿರುವ ಹಣ್ಣುಗಳನ್ನು ತೂಕ ಇಳಿಸುವ ಪ್ರಮುಖ ಮೂಲವೆಂದು ಪರಿಗಣಿಸಲಾಗುತ್ತದೆ. ಅಂತಹ ಹಣ್ಣುಗಳಲ್ಲಿ ಪೇರಲ ಕೂಡ ಒಂದು ಎಂದು ಸಲಹೆ ನೀಡಲಾಗುತ್ತದೆ.

    MORE
    GALLERIES

  • 911

    ದಿನಕ್ಕೊಂದು ಸೀಬೆ ಹಣ್ಣು ತಿನ್ನುವುದರಿಂದ, ಏನೇನು ಉಪಯೋಗಗಳಿವೆ ಗೊತ್ತಾ?

    4. ಸೀಬೆಹಣ್ಣನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ, ಪ್ರೋಟೀನ್ ಹಸಿವು-ಸಂಬಂಧಿತ ಹಾರ್ಮೋನ್ 'ಗ್ರೇಲಿನ್' ಅನ್ನು ನಿಯಂತ್ರಿಸುತ್ತದೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 1011

    ದಿನಕ್ಕೊಂದು ಸೀಬೆ ಹಣ್ಣು ತಿನ್ನುವುದರಿಂದ, ಏನೇನು ಉಪಯೋಗಗಳಿವೆ ಗೊತ್ತಾ?

    5. ಪೇರಲೆಯಲ್ಲಿ ಬಿ 1, ಬಿ 3, ಬಿ 6 ಮತ್ತು ಫೋಲೇಟ್‌ನಂತಹ ಬಿ ವಿಟಮಿನ್​ಗಳು ಅಧಿಕ ಪ್ರಮಾಣದಲ್ಲಿರುತ್ತದೆ. ಇದು ದೇಹವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ.

    MORE
    GALLERIES

  • 1111

    ದಿನಕ್ಕೊಂದು ಸೀಬೆ ಹಣ್ಣು ತಿನ್ನುವುದರಿಂದ, ಏನೇನು ಉಪಯೋಗಗಳಿವೆ ಗೊತ್ತಾ?

    6. ಮಧುಮೇಹ ರೋಗಿಗಳಿಗೆ ರಾಮಬಾಣವಾಗಿ ಸೀಬೆಹಣ್ಣು ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿ ಇನ್ಸುಲಿನ್ ಹೆಚ್ಚಿಸಲು ಪೇರಲೆ ಸಹಾಯ ಮಾಡುತ್ತದೆ.

    MORE
    GALLERIES