ಹಾಗಾಗಿ ಇದನ್ನು ಆರೋಗ್ಯಕರ ದೇಹಕ್ಕೆ ಉತ್ತಮ ಹಣ್ಣು ಎಂದೂ ಕರೆಯುತ್ತಾರೆ. ಕಿವಿಯನ್ನು ಹೃದಯರಕ್ತನಾಳದ ಕಾಯಿಲೆಗಳು, ಅಧಿಕ ರಕ್ತದೊತ್ತಡ ಮತ್ತು ಕಣ್ಣಿನ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದು ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಇ, ಪೊಟ್ಯಾಸಿಯಮ್ ಇತ್ಯಾದಿಗಳ ಉತ್ತಮ ಮೂಲವಾಗಿದೆ. ಹಾಗಿದ್ರೆ ಇದನ್ನು ತಿನ್ನೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ಈ ಕೆಳಗಿನ ಲೇಖನದಲ್ಲಿ ಓದಿ.
ಮಲಬದ್ಧತೆಯನ್ನು ಹೋಗಲಾಡಿಸುತ್ತದೆ: ಮಲಬದ್ಧತೆಯನ್ನು ಹೋಗಲಾಡಿಸಲು ಕಿವಿ ಹಣ್ಣು ತುಂಬಾ ಸಹಕಾರಿಯಾಗಿದೆ. ಇದರ ಬಳಕೆಯಿಂದ ದೀರ್ಘಕಾಲದ ಮಲಬದ್ಧತೆ ಕೂಡ ವಾಸಿಯಾಗುತ್ತದೆ. ಇದರೊಂದಿಗೆ, ಇದು ಗ್ಯಾಸ್ ಮತ್ತು ಅಜೀರ್ಣದಂತಹ ಹೊಟ್ಟೆಯ ಸಮಸ್ಯೆಗಳನ್ನು ಸಹ ತೆಗೆದುಹಾಕುತ್ತದೆ. ನೀವು ಆಗಾಗ ಮಲಬದ್ಧತೆಯಿಂದ ಬಳಲುತ್ತಿದ್ದರೆ, ಕಿವಿ ಹಣ್ಣು ನಿಮಗೆ ತುಂಬಾ ಪ್ರಯೋಜನಕಾರಿಯಾಗುತ್ತದೆ.