ತಾಮ್ರದ ಪಾತ್ರೆಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಪ್ರಯೋಜನವೇ?
ತಾಮ್ರವು ದೇಹಕ್ಕೆ ಅಲ್ಪಪ್ರಮಾಣದಲ್ಲಿ ಅಗತ್ಯವಾದ ಖನಿಜಗಳಲ್ಲಿ ಒಂದಾಗಿದೆ, ಇದು ಹಲವಾರು ಆರೋಗ್ಯಕರ ಪ್ರಯೋಜನ ಗಳನ್ನು ನೀಡುತ್ತದೆ.
News18 Kannada | June 26, 2020, 10:43 PM IST
1/ 8
ತಾಮ್ರವು ದೇಹಕ್ಕೆ ಅಲ್ಪಪ್ರಮಾಣದಲ್ಲಿ ಅಗತ್ಯವಾದ ಖನಿಜಗಳಲ್ಲಿ ಒಂದಾಗಿದೆ, ಇದು ಹಲವಾರು ಆರೋಗ್ಯಕರ ಪ್ರಯೋಜನ ಗಳನ್ನು ನೀಡುತ್ತದೆ.
2/ 8
ಇದು ಕೆಂಪು ರಕ್ತ ಕಣಗಳು ಮತ್ತು ಕೊಲ್ಯಾಜೆನ್ಗಳನ್ನು ನಿರ್ಮಿಸಲು ಅಗತ್ಯವಾಗಿವೆ. ಅಲ್ಲದೇ ಆಹಾರದಿಂದ ದೇಹಕ್ಕೆ ಅಗತ್ಯವಿರುವ ಶಕ್ತಿಯ ಉತ್ಪಾದನೆ ಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.
3/ 8
ತಾಮ್ರದ ಪಾತ್ರೆಯಲ್ಲಿ ನೀಡು ಕುಡಿದರೆ ಆರೋಗ್ಯದ ಮೇಲೆ ಉತ್ತಮ ಪ್ರಯೋಜನ ಬೀರುತ್ತದೆ. ಅಧ್ಯಾಯನದ ವರದಿಯ ಪ್ರಕಾರ ತಾಮ್ರದ ಪಾತ್ರೆಗಳಲ್ಲಿ ಸುಮಾರು ಹದಿನಾರು ಗಂಟೆಗಳ ಕಾಲ ಶೇಖರಿಸಿಟ್ಟ ನೀರಿನಲ್ಲಿ ಸಾಲ್ಮೋನೆಲ್ಲಾ ಮತ್ತು ಈ ಕೊಲೈಗಳಂತಹ ಮಾರಕ ಬ್ಯಾಕ್ಟೀರಿಯಾಗಳು ಇಲ್ಲವಾಗುತ್ತವೆ. ಎಂದು ತಿಳಿಸಿದೆ.
4/ 8
ಪ್ರಾಚೀನ ಕಾಳದಲ್ಲಿ ಪೂರ್ವಜರು ತಾಮ್ರದ ಪಾತ್ರೆಯನ್ನು ಆಹಾರ ಬೇಯಿಸಲು ಮತ್ತು ನೀರು ಕುಡಿಯಲು ಬಳಸುತ್ತಿದ್ದರು. ತಾಮ್ರವೂ ಕೂಡ ನೀರನ್ನು ಶುದ್ಧಿ ಕರಿಸುವ ಗುಣವನ್ನು ಹೊಂದಿದೆ. ಹಾಗಾಗೀ ತಾಮ್ರದ ಪಾತ್ರೆಯಲ್ಲಿ ಕನಿಷ್ಠ ನಾಲ್ಕು ಗಂಟೆಗಳ ಕಾಲ ಸಂಗ್ರಹಿಸಿದ ನೀರನ್ನು ಕರಿದರೆ ಆರೋಗಕರ ಪ್ರಯೋಜನ ಸಿಗಲಿದೆ.
5/ 8
ತಾಮ್ರವು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ ಹಾಗೂ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಬಳಸಿಕೊಳ್ಳುತ್ತದೆ. ಕೊಬ್ಬನ್ನು ಬಳಸಿಕೊಂಡ ಬಳಿಕ ದೇಹದಿಂದ ಪರಿಣಾಮಕಾರಿಯಾಗಿ ಹೊರಹಾಕಲಾಗುತ್ತದೆ. ಇದು ತೂಕ ಇಳಿಕೆಗೆ ನೆರವಾಗುತ್ತದೆ.
6/ 8
ತಾಮ್ರದಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಈ ನೀರನ್ನು ಕುಡಿಯುವ ಮೂಲಕ ಹೊಟ್ಟೆಯಲ್ಲಿರುವ ಹಲವಾರು ಕಾಯಿಲೆ ಬರಿಸುವ ಬ್ಯಾಕ್ಟೀರಿಯಾಗಳನ್ನು ಕೊಂದು ಜೀರ್ಣವ್ಯವಸ್ಥೆಯನ್ನ ಉತ್ತಮ ಗೊಳಿಸಲು ನೆರವಾಗುತ್ತದೆ.
7/ 8
ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ನಡೆಸಿದ ಸಂಶೋಧನೆಯ ಪ್ರಕಾರ ರಕ್ತದೊತ್ತಡವನ್ನು ನಿಯಂತ್ರಿಸಲು ಹಾಗೂ ಹೃದಯದ ಬಡಿತವನ್ನು ಕ್ರಮಬದ್ದಗೊಳಿಸಲು ತಾಮ್ರ ಉತ್ತಮವಾಗಿದೆ. ಅಲ್ಲದೇ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಿ ಅಧಿಕ ರಕ್ತದೊತ್ತಡವನ್ನು ತಗ್ಗಿಸಲೂ ನೆರವಾಗುತ್ತದೆ ಎಂದು ಹೇಳಿದೆ
8/ 8
ತಾಮ್ರವು ಅತಿಸೂಕ್ಷ್ಮಜೀವಿ ನಿರೋಧಕ ಗುಣವನ್ನು ಹೊಂದಿದೆ ಎಂದು ಸಾಬೀತಾಗಿದೆ. ಇದು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಪರಿಣಾಮಕಾರಿಯಾಗಿ ಕೊಲ್ಲುತ್ತದೆ ಮತ್ತು ಸೋಂಕಿನ ವಿರುದ್ಧ ಪ್ರಬಲವಾಗಿ ಹೋರಾಡಲು ನೆರವಾಗುತ್ತದೆ