Orange Peels: ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಕ್ಯಾನ್ಸರ್ ಓಡಿಸುವಂತ ಶಕ್ತಿ ಇದೆ!
ಕಿತ್ತಳೆ ಹಣ್ಣು ನಮ್ಮ ದೇಹಕ್ಕೆ ಎಷ್ಟು ಒಳ್ಳೆಯದು ಎಂದು ನಿಮ್ಗೆ ಈಗಾಗಲೇ News18 ಕನ್ನಡದಲ್ಲಿ ತಿಳಿಸಿದೆ. ಇದ್ರಲ್ಲಿ ಸಿಟ್ರಸ್ ಅಂಶ ಹೇರಳವಾಗಿ ಇರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಕಿತ್ತಳೆ ಸಿಪ್ಪೆಯಲ್ಲಿ ಫೈಬರ್ ಅಂಶ ಜಾಸ್ತಿಯಾಗಿ ಇರುತ್ತದೆ. ಹೀಗಾಗಿ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪ್ರಾಚೀನ ಕಾಲದಿಂದಲೂ ಕಿತ್ತಳೆ ಸಿಪ್ಪೆಯನ್ನು ಬಳಸುತ್ತಿದ್ದಾರೆ. ಮಲಬದ್ಧತೆಯಿಂದ ಕಾಯಿಲೆಗಳಿಗೆ ತುತ್ತಾಗಿದ್ದಲ್ಲಿ ಈ ಸಿಪ್ಪೆಯನ್ನು ಯಾವುದೇ ರೂಪದಲ್ಲಿ ಆದ್ರೂ ಸೇವನೆ ಮಾಡಬಹುದು.
2/ 8
ಹಾಗಾದ್ರೆ ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಏನೆಲ್ಲ ಲಾಭ ಇದೆ ಅಂತ ನಿಮ್ಗೆ ಗೊತ್ತಾ? ಗೊತ್ತಾದ್ರೆ ನೀವು ಇನ್ನೂ ಮುಂದೆ ಈ ಸಿಪ್ಪೆಯನ್ನು ಬಿಸಾಡಲು ನೂರು ಬಾರಿ ಯೋಚನೆ ಮಾಡೋದಂತು ಪಕ್ಕ.
3/ 8
ಕ್ಯಾನ್ಸರ್ ತಡೆಯುವ ಶಕ್ತಿ ಹೊಂದಿದೆ ಕಿತ್ತಳೆ ಹಣ್ಣಿನ ಸಿಪ್ಪೆ. ಲಿಮೋನೆನ್ ಎಂಬ ಅಂಶವಿದೆ. ಈ ಸಿಪ್ಪೆಯನ್ನು ಒಣಗಿಸಿ ಪುಡಿಯನ್ನು ಮಾಡಿ ಹಾಲಿಗೆ ಹಾಕಿ ಕುಡಿಯಲು ನೀಡಿ.
4/ 8
ಈ ಹಣ್ಣಿನಲ್ಲಿ ಎಷ್ಟು ವಿಟಮಿನ್ ಸಿ ಅಂಶ ಇದ್ಯೋ ಅಷ್ಟೇ ಸಿಪ್ಪಿಯಲ್ಲಿಯು ಇದೆ. ಆದುದರಿಂದ ಇದು ಶಾಸಕೋಶದ ಆರೋಗ್ಯವನ್ನು ಸುಧಾರಿಸುತ್ತದೆ. ಶೀತ ಮತ್ತು ಜ್ವರದಿಂದ ಪಾರು ಮಾಡಲು ಈ ಸಿಪ್ಪೆಯು ಸಹಾಯ ಮಾಡುತ್ತದೆ. ಪುಡಿ ಮಾಡಿ ಜೇನಿನ ಜೊತೆಗೆ ಮಿಕ್ಸ್ ಮಾಡಿ ಮಕ್ಕಳಿಗೂ ತಿನ್ನಿಸಬಹುದು.
5/ 8
ಸಿಪ್ಪೆಯಲ್ಲಿ ಪೆಕ್ಟಿನ್ ಅಂಶ ಹೆಚ್ಚಿರುತ್ತದೆ. ಹಾಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಫೈಬರ್ ಆಗಿದೆ. ಮಧುಮೇಹ ಇರುವವರಿಗೆ ಇದು ಖಂಡಿತವಾಗಿಯೂ ಸಹಾಯ ಮಾಡುತ್ತದೆ.
6/ 8
ಹಾರ್ಟ್ ವೀಕ್ ಇದ್ದವರಿಗೆ ಇದನ್ನು ತಿನ್ನಲು ಸಜೆಶನ್ ಮಾಡುತ್ತಾರೆ ವೈದ್ಯರು. ಸಿಪ್ಪೆಯು ಉರಿಯೂತದ ಗುಣಲಕ್ಷಣಗಳನ್ನು ಸಹ ಹೊಂದಿದೆ ಮತ್ತು ಹೃದ್ರೋಗವು ಉರಿಯೂತದಿಂದ ಉಂಟಾಗುತ್ತದೆ ಆದರಿಂದ, ಸಿಪ್ಪೆಯು ಇದೆಲ್ಲ ತಡೆಯುತ್ತದೆ.
7/ 8
ಈ ಸಿಪ್ಪೆಯಿಂದ ಸ್ಲಿಮ್ ಕೂಡ ಆಗ್ಬೋದು. ಕಡಿಮೆ ಕ್ಯಾಲೋರಿಯನ್ನು ಈ ಸಿಪ್ಪೆಯನ್ನು ಹೊಂದಿರುತ್ತದೆ. ಇದು ತೂಕ ಇಳಿಯಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಹಸಿವನ್ನು ಕೂಡ ನಿಯಂತ್ರಿಸುತ್ತದೆ.
8/ 8
ಲಿಮೊನೆನ್, ಡೆಕಾನಲ್ ಮತ್ತು ಸಿಟ್ರಲ್ ನಂತಹ ಸಂಯುಕ್ತಗಳು ಕಣ್ಣಿನ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತೆ. ಇದು ಸೋಂಕುಗಳ ವಿರುದ್ಧ ಹೋರಾಡುವ ಮತ್ತು ನಮ್ಮ ದೃಷ್ಟಿ ತೊಂದರೆಗಳನ್ನು ಓಡಿಸುವ ಶಕ್ತಿಯನ್ನು ಹೊಂದಿದೆ.