ಜೀರ್ಣಕ್ರಿಯೆ: ಮಲಗುವ ಮುನ್ನ ಐದು ಒಣದ್ರಾಕ್ಷಿಗಳನ್ನು ಒಂದು ಕಪ್ ನೀರಿನಲ್ಲಿ ನೆನೆಸಿ, ನೆನೆಸಿದ ಹಣ್ಣುಗಳನ್ನು ತಿಂದು ಮರುದಿನ ಬೆಳಿಗ್ಗೆ ನೀರನ್ನು ಕುಡಿಯಿರಿ. ಹೀಗೆ ತಿನ್ನುವುದರಿಂದ ನಮ್ಮ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ಸಿಗುತ್ತವೆ. ಫೈಬರ್ನಲ್ಲಿ ಸಮೃದ್ಧವಾಗಿರುವ ಒಣದ್ರಾಕ್ಷಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಈ ಡ್ರೈ ಫ್ರೂಟ್ ಅನ್ನು ಪ್ರತಿದಿನ ತಿನ್ನುವುದರಿಂದ ಉತ್ತಮ ಕರುಳಿನ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರ ಟಾರ್ಟಾರಿಕ್ ಆಸಿಡ್ ಉರಿಯೂತದ ಗುಣಲಕ್ಷಣಗಳು, ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಹೃದ್ರೋಗದ ಅಪಾಯವನ್ನು ತಡೆಯುತ್ತದೆ: ಒಣದ್ರಾಕ್ಷಿ ಸೇವಿಸುವುದರಿಂದ ಹೃದಯ ಸಂಬಂಧಿ ಹಾನಿಯನ್ನು ತಡೆಯಬಹುದು. ಜೊತೆಗೆ ಲಿವರ್ ಸಮಸ್ಯೆಯಿಂದ ಸಹ ರಕ್ಷಿಸುತ್ತದೆ. ಒಣದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದ ರೋಗ ನಿರೋಧಕ ಗುಣ ಇರುವುದೇ ಇದಕ್ಕೆ ಕಾರಣ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಔಷಧೀಯ ಗುಣಗಳನ್ನು ಹೊಂದಿರುವ ಒಣದ್ರಾಕ್ಷಿಯನ್ನು ವಾರಕ್ಕೆ ಎರಡು ಬಾರಿ ಸೇವಿಸುವಂತೆ ವೈದ್ಯರು ಹೇಳುತ್ತಾರೆ.