ವಾಕಿಂಗ್ ಮಾಡುತ್ತಾ ಮಾತನಾಡುವುದು: ಗಂಟೆಗಟ್ಟಲೆ ನಿರಂತರವಾಗಿ ಕೆಲಸ ಮಾಡುವುದರಿಂದ ಸೊಂಟದ ಭಾಗದಲ್ಲಿ ಬೊಜ್ಜು ಹೆಚ್ಚಾಗುತ್ತದೆ. ಆದ್ದರಿಂದ ನಿಮಗೆ ಕರೆ ಬಂದಾಗಲೆಲ್ಲಾ, ನಡೆದುಕೊಂಡು ಮಾತನಾಡಿ. ನೀವು ಕಚೇರಿಯ ಯಾವುದೇ ಕಾರಿಡಾರ್ನಲ್ಲಿ ನಡೆದಾಡಿಕೊಂಡು ಮಾತನಾಡಬಹುದು. ಇದು ನಿಮಗೆ ಸ್ವಲ್ಪ ಶಕ್ತಿಯನ್ನು ನೀಡುತ್ತದೆ ಮತ್ತು ಸೊಂಟದ ಮೇಲೆ ಬೊಜ್ಜು ಬರುವುದನ್ನು ನಿಯಂಯತ್ರಿಸುತ್ತದೆ.
ಕುಡಿಯುವ ನೀರು: ನೀರು ಅತ್ಯಂತ ಮುಖ್ಯವಾಗಿದೆ. ಇದು ನಿರ್ಜಲೀಕರಣವನ್ನು ತಡೆಯುವುದರ ಜೊತೆಗೆ ಹೊಟ್ಟೆಯನ್ನು ತುಂಬಿಸುತ್ತದೆ. ತಿನ್ನುವ ಮೊದಲು ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದಂತಾಗುತ್ತದೆ. ಆದರೆ ಆಹಾರ ತಿಂದ ನಂತರ ಕಡಿಮೆ ನೀರು ಕುಡಿಯಿರಿ. ಊಟಕ್ಕೆ ಅರ್ಧ ಗಂಟೆ ಮೊದಲು ಅರ್ಧ ಲೀಟರ್ ನೀರು ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ ಮತ್ತು ದೇಹದಿಂದ ಕ್ಯಾಲೊರಿಗಳ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ.